ಸಮಗ್ರ ನ್ಯೂಸ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿರುವ ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯಲ್ಲಿ ಹಲವು ಗುಂಡಿಗಳು ಬಿದ್ದಿದ್ದು ಜನಸಾಮಾನ್ಯರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ನೋಡಿಯೂ ನೋಡದಂತೆ ತೆರಳುತ್ತಿದ್ದು, ಸಾರ್ವಜನಿಕರ ಪ್ರಾಣದ ಮೇಲೆ ಯಾಕಿಷ್ಟು ನಿರ್ಲಕ್ಷ್ಯ ಎಂಬ ಆಕ್ರೋಶ ಕೇಳಿಬರುತ್ತಿದೆ.
ಸುಳ್ಯ ನ. ಪಂಚಾಯತ್ ನವರು ಗುಂಡಿ ಅಗೆದು ಕಾಮಗಾರಿ ನಡೆಸಿ ಅದನ್ನು ಸರಿಯಾಗಿ ಮುಚ್ಚದೆ ಇರುವುದು ನಗರದ ಹೃದಯ ಭಾಗವಾದ ಪೊಲೀಸ್ ಠಾಣೆಯ ಮುಂಭಾಗ ಮತ್ತು ಆಲೆಟ್ಟಿ ತಿರುವಿನಲ್ಲಿ ಕಂಡುಬರುತ್ತಿದೆ.
ಕೆಲ ದಿನಗಳ ಹಿಂದೆ ಉಂಟಾದ ಕುಡಿಯುವ ನೀರಿನ ಸಮಸ್ಯೆ ಉಂಟಾದ ಕಾರಣ ಪೊಲೀಸ್ ಠಾಣೆಯ ಮುಂಭಾಗ, ರಥಬೀದಿ ತಿರುವಿನಲ್ಲಿ ಗುಂಡಿ ಅಗೆದು ಅಲ್ಲಿ ಹಾದು ಹೊಗಿದ್ದ ನೀರಿನ ಪೈಪ್ ನ್ನು ಸರಿಪಡಿಸಲಾಗಿತ್ತು. ಬಳಿಕ ಅ ಗುಂಡಿಯನ್ನು ಮನ್ನು ಹಾಕಿ ಮುಚ್ಚಲಾಗಿತ್ತು. ಅದರೆ ಅದರ ಮೇಲೆ ಡಾಮರೀಕರಣ ಮಾಡದೇ ಇರುವುದರಿಂದ ಆ ಗುಂಡಿ ಮತ್ತೆ ತೆರೆದುಕೊಂಡಿದೆ. ನಗರದ ಗಾಂಧಿನಗರದ ಆಲೆಟ್ಟಿ ತಿರುವಿನಲ್ಲಿ ಕೂಡ ಇದೆ ರೀತಿ ಗುಂಡಿಗಳು ಇದ್ದು ಸಮಸ್ಯೆಗೆ ಎಡೆಮಾಡಿ ಕೊಟ್ಟಿದೆ. ಅದೇ ರೀತಿ ನಗರದ ಕೆಲವು ಭಾಗದಲ್ಲಿ ಈ ಸಮಸ್ಯೆಗಳು ಕಂಡು ಬರುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಇವರ ಸಂಚಾರಕ್ಕೆ ಕಂಟಕ ವಾಗುವಂತೆ ಬಾಯಿ ತೆಗೆದುಕೊಂಡಿದೆ. ಈ ಗುಂಡಿಗಳಿಂದ ಈಗಾಗಲೇ ಹಲವರು ಬಿದ್ದು ಗಾಯ ಮಾಡಿಕೊಂಡಿದ್ದು, ನರಕಯಾತನೆ ಅನುಭವಿಸಿದ್ದಾರೆ.
ಜನಸಾಮಾನ್ಯರ ಮೇಲೆ ಯಾಕಿಷ್ಟು ನಿರ್ಲಕ್ಷ್ಯ..?
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರು ಸೇರಿದಂತೆ ಸಾವಿರಾರು ಜನಸಾಮಾನ್ಯರು ನಡೆದುಕೊಂಡು ಮತ್ತು ವಾಹನಗಳಲ್ಲಿ ಸಂಚರಿಸುತ್ತಾರೆ. ಇನ್ನೂ ಅಟೋ ರಿಕ್ಷಾದವರಿಗೆ ಭಾರೀ ಪ್ರಮಾಣದ ಸಮಸ್ಯೆಯಾಗುತ್ತಿದೆ. ಇದರಿಂದ ಸಾವು,ನೋವು ಕೂಡ ಸಂಭವಿಸಬಹುದು. ಇಷ್ಟೆಲ್ಲ ಇರುವಾಗ ನಗರಾಡಳಿತಕ್ಕೆ ಇವರ ಬಗ್ಗೆ ಕಾಳಜಿ ಇಲ್ಲವೆ…?
ತಕ್ಷಣ ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸ ಬೇಕಾಗಿದೆ. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಆಡಳಿತ ಮತ್ತು ಅಧಿಕಾರಿ ವರ್ಗದವರೇ ಕಾರಣರಾಗುತ್ತಾರೆ.