Ad Widget .

ರಾಜ್ಯದಲ್ಲಿಯೇ ಮದ್ಯ ಸೇವನೆಯಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆ

ಸಮಗ್ರ ನ್ಯೂಸ್:  ವಿವಿಧ ವಿಷಯಗಳಲ್ಲಿ ಸದಾ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಇದೀಗ ಮತ್ತೊಂದು ದಾಖಲೆ ಬರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಸೇವನೆ ಪ್ರಮಾಣ ಜಾಸ್ತಿಯಾಗಿದ್ದು, ಪ್ರತಿ ವರ್ಷ ಸುಮಾರು 2.2 ಕೋಟಿ ಲೀಟರ್ (ದಿನಕ್ಕೆ ಸುಮಾರು 60 ಲೀಟರ್‍ ಹಾರ್ಡ್ ಲಿಕ್ಕರ್, 1.4 ಕೋಟಿ ಲೀಟರ್ ಬಿಯರ್ ಮದ್ಯ ಮಾರಾಟವಾಗಿದೆ. ಆ ಮೂಲಕ ದಕ್ಷಿಣ ಕನ್ನಡ ಮದ್ಯ ಸೇವನೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಪಡೆದಿದೆ.

Ad Widget . Ad Widget .

ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸರಾಸರಿ 25 ಲಕ್ಷ ಬಾಕ್ಸ್ ‘ಹಾರ್ಡ್ ಡ್ರಿಂಕ್ಸ್ ಮದ್ಯವನ್ನು ಸೇವಿಸಲಾಗಿದೆ. ವರ್ಷಕ್ಕೆ ಸರಾಸರಿ 18 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಸುಮಾರು 370 ಕೋಟಿ ರೂಪಾಯಿ ಆದಾಯ ಮದ್ಯ ಮಾರಾಟದಿಂದ ಬಂದಿದೆ.

Ad Widget . Ad Widget .

“ಜಿಲ್ಲೆಯಲ್ಲಿ 180 ಎಂಎಲ್ ಸ್ಯಾಚೆಟ್ ಅಥವಾ ಬಾಟಲಿ ಮದ್ಯಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಕೇರಳ-ಕರ್ನಾಟಕದ ಗಡಿಭಾಗದ ಪ್ರದೇಶದಲ್ಲಿ ಮದ್ಯ ಸೇವನೆ ಮಾಡುವವರು ಜಿಲ್ಲೆಯಿಂದಲೇ ಹೆಚ್ಚಾಗಿ ಮದ್ಯ ಖರೀದಿಸುತ್ತಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಈ ಭಾಗದಲ್ಲಿ ಖರೀದಿ ಕಡಿಮೆಯಾಗಿದ್ದು, ಇಲ್ಲಿನ ವ್ಯಾಪಾರ ಇನ್ನಷ್ಟೇ ಕುದುರಬೇಕಿದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಬಿಂದುಶ್ರೀ ಪಿ ಹೇಳಿದ್ದಾರೆಂದು ‘ಟೈಮ್ಸ್ ಆಫ್ ಇಂಡಿಯಾ’ ಉಲ್ಲೇಖಿಸಿದೆ. ಕಳೆದ ಐದು ವರ್ಷಗಳಲ್ಲಿ ಮದ್ಯದ ಅಂಗಡಿಗಳ ಸಂಖ್ಯೆ ಏರಿಕೆ ಕಂಡಿದ್ದು ಪ್ರಸ್ತುತ 520 ಮದ್ಯದಂಗಡಿಗಳಿವೆ. ಕಳೆದ ವರ್ಷ 463 ಮದ್ಯದಂಗಡಿಗಳಿದ್ದವು ಎಂದು ಅವರು ತಿಳಿಸಿದ್ದಾರೆ.

2017-2018ರ ಆರ್ಥಿಕ ವರ್ಷದಿಂದ ಮದ್ಯದ ಮಾರಾಟವು ಸ್ಥಿರವಾಗಿದೆ. 2020-21ರವರಗೆ ವಾರ್ಷಿಕವಾಗಿ ಸರಾಸರಿ 25 ಲಕ್ಷ ಬಾಕ್ಸ್ ಗಳು (ಕೇಸ್ ಮಾರಟವಾಗಿವೆ. ಕೋವಿಡ್ ಕಾರಣದಿಂದ ಮದ್ಯದ ಅಂಗಡಿಗಳು ಮುಚ್ಚಿದ್ದು, ಕೇವಲ 22 ಲಕ್ಷಕ್ಕೆ ಪಟ್ಟಣಗಳು ಮಾರಟವಾಗಿದ್ದವು. ಆದರೆ ಈ ಆರ್ಥಿಕ ವರ್ಷದಲ್ಲಿ (2021-2022) 27 ಲಕ್ಷ ಬಾಕ್ಸ್‌ಗಳು ಮಾರಟವಾಗಿವೆ. ಕಳೆದ ಐದು ವರ್ಷಗಳಲ್ಲಿ ಮದ್ಯ ಮಾರಾಟದ ಆದಾಯ 285 ಕೋಟಿಯಿಂದ 370 ಕೋಟಿಗೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

“ಸುಮಾರು 34 ವರ್ಷದಿಂದ ಮದ್ಯದ ವ್ಯಾಪಾರದಲ್ಲಿ ತೊಡಗಿದ್ದೇನೆ. 11 ಮದ್ಯಂಗಡಿಗಳನ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ ಪ್ರಕಾರ ಜಿಲ್ಲೆಯಲ್ಲಿ ಸೇವಿಸುವ ಶೇಕಡ 85ರಷ್ಟು ಮದ್ಯವು ಅಗ್ಗದ ಮದ್ಯಗಳಾಗಿವೆ. ಶೇಕಡ 3ರಷ್ಟು ಜನರು ಪ್ರೀಮಿಯಂ, ಡೀಲಕ್ಸ್, ಸ್ಕಾಚ್ ಮತ್ತು ಸಿಂಗಲ್ ಮಾಲ್ ಮದ್ಯವನ್ನು ಸೇವಿಸುತ್ತಾರೆ. ಏಪ್ರಿಲ್-ಮೇ-ಡಿಸೆಂಬರ್ ತಿಂಗಳಲ್ಲಿ ಹೆಚ್ಚು ವ್ಯಾಪಾರವಿದ್ದು, ಜುಲೈ-ಆಗಸ್ಟ್ ಮತ್ತು ಸೆಪ್ಟೆಂಬರ್‍ ತಿಂಗಳುಗಳಲ್ಲಿ ವ್ಯಾಪಾರ ಮಂಕಾಗಿರುತ್ತದೆ” ಎಂದು ರತ್ನಾಸ್ ವೈನ್ ಗೇಟ್‌ನ ಮಾಲೀಕ ರಮೇಶ್ ಡಿ ನಾಯಕ್ ಹೇಳಿದ್ದಾರೆ.

Leave a Comment

Your email address will not be published. Required fields are marked *