Ad Widget .

ಹೆಂಡತಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿದ ಗಂಡ| ಮಕ್ಕಳ ಮುಂದೆಯೇ ನಡೆಯಿತು ಘನಘೋರ ಕೃತ್ಯ!

ಸಮಗ್ರ ನ್ಯೂಸ್: ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಹತ್ಯೆ ಮಾಡಿರುವ ಭೀಕರ ಕೃತ್ಯವೊಂದು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ತನ್ನ ಹೆಂಡತಿಯನ್ನು ಕಡಾಯಿಯಲ್ಲಿ ಬೇಯಿಸಿ ಹತ್ಯೆ ಮಾಡಿ ಕ್ರೂರತೆ ಮೆರೆದಿದ್ದಾನೆ.

Ad Widget . Ad Widget .

ವರದಿಗಳ ಪ್ರಕಾರ ಘಟನೆಯ ನಂತರ, ಪೊಲೀಸರು ಬುಧವಾರ ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆ ಮನೆಯಲ್ಲಿ ಪ್ಯಾನ್‌ನಲ್ಲಿ ಮೃತ ನರ್ಗೀಸ್ ಶವವನ್ನು ಪತ್ತೆ ಹಚ್ಚಿದ್ದಾರೆ.

Ad Widget . Ad Widget .

ಈ ಮೃತ ಮಹಿಳೆಯ ಪತಿ ಶಾಲೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ. ಸುಮಾರು ಕೆಲ ತಿಂಗಳಿನಿಂದ ಮುಚ್ಚಲ್ಪಟ್ಟ ಶಾಲೆಯ ಸೇವಕರ ಕ್ವಾರ್ಟರ್ಸ್‌ನಲ್ಲಿ ಈ ದಂಪತಿ ವಾಸಿಸುತ್ತಿದ್ದರು.

ಕೃತ್ಯ ಎಸಗಿದ ಬಳಿಕ ಪತಿ ಮೂವರು ಮಕ್ಕಳೊಂದಿಗೆ ಪರಾರಿಯಾದಾಗ ಸಂತ್ರಸ್ತೆಯ 15 ವರ್ಷದ ಮಗಳು ಪೊಲೀಸರಿಗೆ ಕರೆ ಮಾಡಿದ್ದಾಳೆ. ಇತರೆ ಮೂರು ಮಕ್ಕಳನ್ನು ಪಾಲನೆ ಮಾಡುವ ಜವಾಬ್ದಾರಿ ಇದೀಗ ಪೊಲೀಸರ ಮೇಲಿದೆ.

ಪ್ರಾಥಮಿಕ ತನಿಖೆ ಮತ್ತು ಮಕ್ಕಳ ಹೇಳಿಕೆಯನ್ನು ಪಡೆದಿರುವ ಪೊಲೀಸರು, ಬಾಣಲೆಯಲ್ಲಿ ಕುದಿಸುವ ಮೊದಲು ದಿಂಬಿನಿಂದ ಕತ್ತು ಹಿಸುಕಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಿಳೆಯ ಒಂದು ಕಾಲು ಕೂಡ ದೇಹದಿಂದ ಬೇರ್ಪಡಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಪತಿ ತನ್ನ ಪತ್ನಿಯನ್ನು ಅಕ್ರಮ ಸಂಬಂಧಕ್ಕೆ ಬಲವಂತಪಡಿಸಿದ್ದು, ಅದಕ್ಕೆ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *