ಸಮಗ್ರ ನ್ಯೂಸ್::ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಊರವರು ಮನವಿ ಸಲ್ಲಿಸಿದ್ದರೂ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಹೋರಾಟಕ್ಕೆ ನಡೆಸುತ್ತಿದ್ದು, ಅರಂತೋಡಿನಿಂದ ಮರ್ಕಂಜ ಮಾರ್ಗವಾಗಿ ಎಲಿಮಲೆಯವರೆಗೆ 26 ಕಡೆಗಳಲ್ಲಿ ಅಲ್ಲಿಯ ನೊಂದ ಫಲಾನುಭವಿಗಳ ಹೆಸರಲ್ಲಿ ಮತದಾನದ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ ಅನ್ನು ಕೆಲದಿನಗಳ ಹಿಂದೆ ಕಿಡಿಗೇಡಿಗಳು ತೆಗೆದಿದ್ದಾರೆ.

ಘಟನೆ ಕುರಿತಂತೆ ಇಲ್ಲಿಯ ಫಲನುಭವಿಗಳು ಬ್ಯಾನರ್ ಕಳವು ಮಾಡಿದ ವಿರುದ್ದ ದೈವ ದೇವರಿಗೆ ಹರಕೆ ಹೇಳಲು ಮುಂದಾಗಿದ್ದು, ಇದರ ಬೆನ್ನಲ್ಲೇ ಅರಂತೋಡು ಸಮೀಪ ಹೊಳೆಯಲ್ಲಿ ಬ್ಯಾನರ್ ಗಳು ಕಂಡುಬಂದಿವೆ.
ಕದ್ದ್ಯೊಯ್ದ ಬ್ಯಾನರ್ ಗಳನ್ನು ದಿನಾಂಕ ಜು.15ರ ಶುಕ್ರವಾರ ಸಂಜೆ ಗಂಟೆ 5.00 ರ ಒಳಗಾಗಿ ಯಥಾ ಸ್ಥಾನಗಳಲ್ಲಿ ಅಳವಡಿಕೆ ಮಾಡಬೇಕು. ತಪ್ಪಿದ್ದಲ್ಲಿ ಮರುದಿನ ಅಂದರೆ ಶನಿವಾರ ನಾವು ನಂಬಿಕೊಂಡು ಬಂದಿರುವ ದೈವ, ದೇವರುಗಳ ಸನ್ನಿಧಿಗಳಲ್ಲಿ ಈ ಬಗ್ಗೆ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ಹರಿಕೆ ಹೇಳಲಿರುವುದಾಗಿ ಅಲ್ಲಿಯ ಫಲಾನುಭವಿಗಳು ತಿಳಿಸಿದ್ದು, ಇದರ ಇದರ ಬೆನ್ನಲ್ಲೇ ಬ್ಯಾನರ್ ಗಳು ಹೊಳೆಯಲ್ಲಿ ಪತ್ತೆಯಾಗಿವೆ.

ಜು.12ರಂದು ಸಿಎಂ ಬೊಮ್ಮಾಯಿ ಸುಳ್ಯ ಭೇಟಿ ನೀಡಲಿದ್ದ ಹಿನ್ನೆಲೆಯಲ್ಲಿ ಕೆಲವರು ಬ್ಯಾನರ್ ಅನ್ನು ತೆಗೆದು ಹೊಳೆಗೆಸೆದಿದ್ದಾರೆ ಎಂದು ನಾಗರೀಕರು ಆರೋಪಿಸಿದ್ದಾರೆ.