ಸುಳ್ಯ: ಕುಟುಂಬದೊಳಗಿನ ಆಸ್ತಿ ವಿವಾದ| ಮೂವರ ಮೇಲೆ ಕತ್ತಿ ಬೀಸಿದ ತಾಯಿ ಮತ್ತು ಮಗ

ಸಮಗ್ರ ನ್ಯೂಸ್: ಕುಟುಂಬದ ಒಳಗೆ ಆಸ್ತಿ ಪಾಲಿನ ವಿಷಯದಲ್ಲಿ ವಿವಾದ ಭುಗಿಲೆದ್ದು ತಾಯಿ ಮತ್ತು ಮಗ ಸೇರಿಕೊಂಡು ಮೂವರ ಮೇಲೆ ಕತ್ತಿ ಬೀಸಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.

Ad Widget ... ..

ಇಲ್ಲಿನ ಹಾಲೆಮಜಲು ಅಂಬೆಕಲ್ಲು ಸುರೇಶ ಎಂಬವರ ಪತ್ನಿ ಮಂಜುಳ, ಅವರ ಮನೆ ಕೆಲಸಕ್ಕೆಂದು ಬಂದಿದ್ದ ಸುಬ್ರಹ್ಮಣ್ಯ ಮತ್ತು ಮಾಧವ ಘಟನೆಯಲ್ಲಿ ಗಾಯಗೊಂಡವರು.

Ad Widget

ಸುರೇಶ ಅವರ ನೂತನ ಮನೆಯ ಕೆಲಸ‌ ನಡೆಯುತ್ತಿದ್ದು ಅಲ್ಲಿಗೆ ಸುರೇಶ ಅವರ ಅಕ್ಕ ಮೀನಾಕ್ಷಿ ಮತ್ತು ಅವರ ಮಗ ಸೋಹನ್ ಬಂದಿದ್ದು ಆಸ್ತಿ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭ ಮೀನಾಕ್ಷಿ ಮತ್ತು ಸೋಹನ್ ಸೇರಿಕೊಂಡು ಮಂಜುಳಾ, ಸುಬ್ರಹ್ಮಣ್ಯ ಮತ್ತು ಮಾಧವ ಅವರಿಗೆ ತಲವಾರಿನಿಂದ ಕಡಿದು, ರೀಪಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಏಟು ತಾಗಿದ್ದ ಮೂವರು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *