Ad Widget .

ಸದ್ಯದಲ್ಲೇ ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ

ಬೆಂಗಳೂರು: ರವಿಚಂದ್ರ ಮಗಳ ಮದುವೆ ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೆಸಿ, ಆರಾಮವಾಗಿದ್ದ ಕ್ರೇಜಿಸ್ಟಾರ್ ಗೆ ಇದೀಗ ಮತ್ತೆ ಅವರ ಮನೆಯಲ್ಲಿ ಮಂಗಳವಾದ್ಯ ಮೊಳಗಲಿದೆ.

Ad Widget . Ad Widget .

ಅಂದರೆ ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಿರಿಯ ಮಗ ಮನೋರಂಜನ್‌ ಮದುವೆಗೆ ರೆಡಿಯಾಗಿದ್ದಾರೆ.

Ad Widget . Ad Widget .

ಹೌದು ಅವರ ಮದುವೆ ಅಗಸ್ಟ್‌ 21 ಹಾಗೂ 22 ರಂದು ಬೆಂಗಳೂರಿನಲ್ಲೇ ಮನೋರಂಜನ್ ಸಪ್ತಪದಿ ತುಳಿಯಲಿದ್ದಾರೆ.

ಇದೊಂದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಹುಡುಗಿಯನ್ನು ಮನೋರಂಜನ್ ಕೈ ಹಿಡಿಯಲಿದ್ದಾರೆ.

ಇದನ್ನು ರವಿಚಂದ್ರನ್‌ ಅವರೇ ಹುಡುಗಿಯನ್ನು ಹುಡುಕಿದ್ದಾರಂತೆ . ಅವರು ಸಹ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ ಆಗಿದ್ದಾರೆ.

ರವಿಚಂದ್ರನ್ ಕುಟುಂಬದಲ್ಲಿ ಸದ್ದಿಲ್ಲದೇ ಮದುವೆ ಸಿದ್ಧತೆಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲೇ ದಕ್ಷಿಣ ಭಾರತದ ಅನೇಕ ಗಣ್ಯರಿಗೆ ಮದುವೆ ಆಮಂತ್ರಣ ನೀಡಲಿದ್ದಾರಂತೆ .

Leave a Comment

Your email address will not be published. Required fields are marked *