ಮಂಗಳೂರು: ವಾಟ್ಸಪ್ ನಲ್ಲಿ ಸ್ಯೂಸೈಡ್ ಮೆಸೇಜ್ ಕಳ್ಸಿ ನದಿಗೆ ಹಾರಿದ ಯುವಕ

ಸಮಗ್ರ ನ್ಯೂಸ್: ಯುವಕನೋರ್ವ ವಾಟ್ಸಪ್ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳದ ಲೊಕೇಶನ್ ಮತ್ತು ಸಂದೇಶ ಕಳುಹಿಸಿ ನದಿಗೆ ಹಾರಿ ಕಣ್ಮರೆಯಾದ ಘಟನೆ ಮಂಗಳೂರು ನಗರದ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

Ad Widget ... ..

ನದಿಗೆ ಹಾರಿದ ಯುವಕನನ್ನು ಮಂಡ್ಯ. ಮೂಲದ ಸದ್ಯ ಮಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಕೇಶ್ ಗೌಡ ಎಂದು ಗುರುತಿಸಲಾಗಿದೆ.

Ad Widget

ಈತ ಮಂಗಳೂರಿನ ಸಮೀಪದ ಪಾವಂಜೆ ನಂದಿನಿ ನದಿ ಸೇತುವೆಯಲ್ಲಿ ಬೈಕ್ ಹಾಗೂ ತನ್ನ ಇತರ ವಸ್ತುಗಳನ್ನು ಇರಿಸಿ ನದಿಗೆ ಹಾರಿದ್ದಾನೆ. ಇದಕ್ಕೂ ಮೊದಲು ತನ್ನ ಬಂಧುಮಿತ್ರರಿಗೆ ಲೊಕೇಶನ್ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವಾಗಿ‌ ಸಂದೇಶ‌ ಹಂಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಘಟನಾ‌ ಸ್ಥಳಕ್ಕೆ ಮೂಲ್ಕಿ ಪೊಲೀಸರು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *