ಸಮಗ್ರ ನ್ಯೂಸ್: ಸ್ಥಳವನ್ನು ಸ್ವಚ್ಛ ಮಾಡಿ ಕೊಟ್ಟಷ್ಟು ಹಂದಿ ಕೊಳಚೆಯಲ್ಲೇ ಹೋಗಿ ಬೀಳುತ್ತದೆ. ವೆಂಕಪ್ಪ ಗೌಡರು ಕೂಡಾ ಇದೇ ರೀತಿ ವರ್ತಿಸುತ್ತಿದ್ದು, ಈ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಸುಳ್ಯ ನ.ಪಂ ಅಧ್ಯಕ್ಷ ವಿನಯ್ ಕಂದಡ್ಕ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದಿಂದ ಪ್ರಮುಖ ಯೋಜನೆಗಳೆಲ್ಲಾ ತ್ವರಿತಗತಿಯಿಂದ ನಡೆಯುತ್ತಿದ್ದು ವಿರೋಧ ಪಕ್ಷದವರಿಗೆ ಬೊಬ್ಬೆ ಹೊಡೆಯಲು ಏನೂ ಸಿಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ತೋರಿಸುತ್ತಿದ್ದಾರೆ. ಟ್ಯೂಬ್ ಲೈಟ್ ಒಡೆದು ನಮ್ಮ ಮಹಿಳಾ ಸದಸ್ಯರಿಗೆ ಗಾಯವಾಗಿದೆ. ಆದರೂ ನಾವು ತಾಳ್ಮೆಯಿಂದ ಇದ್ದೇವೆ. ಅದನ್ನು ನಮ್ಮ ದೌರ್ಬಲ್ಯ ಅಂತ ಭಾವಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜು. 11 ರಂದು ನ.ಪಂ. ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಎಂ ವೆಂಕಪ್ಪ ಗೌಡ ನಗರದಲ್ಲಿ ದಾರಿದೀಪ ಉರಿಯುತ್ತಿಲ್ಲ ಎಂದು ಸಭೆಗೆ ಟ್ಯೂಬ್ ಲೈಟ್ ಹಿಡಿದು ಬಂದು ಗದ್ದಲ ಸೃಷ್ಟಿಸಿದ್ದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಸಾಮಾನ್ಯ ಸಭೆಯಲ್ಲಿ ಬಂದು ಟ್ಯೂಬ್ ಲೈಟ್ ಒಡೆಯುವ ಹೀನ ಪರಿಸ್ಥಿತಿಗೆ ಬಂದಿದ್ದಾರೆ ಎಂದರೆ ಇವರ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ಗಮನಿಸಬೇಕು. ಇವರಿಗೆ ಇವರ ಪಕ್ಷದಲ್ಲೇ ಕಿಂಚಿತ್ತೂ ಮರ್ಯಾದೆಯಿಲ್ಲ. ಹಾಗಾಗಿ ಅವರ ವರ್ತನೆ ಮಿತಿಮೀರಿದೆ. ಇದರ ಬಗ್ಗೆ ಅವರೇ ಅತ್ಮಾವಲೋಕನ ಮಾಡಿಕೊಳ್ಳಬೇಕುಎಂದಿದ್ದಾರೆ.
ಬೀದಿ ದೀಪದ ಸಮಸ್ಯೆಯ ಕುರಿತು ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ತೀವ್ರ ಮಳೆಯಾಗುತ್ತಿರುವ ಹಿನ್ನಲೆ ಯಾವುದೇ ಅಚಾತುರ್ಯ ಆಗಬಾರದೆಂಬ ಕಾರಣಕ್ಕೆ ಬೀದಿದೀಪ ದುರಸ್ತಿ ತಡವಾಗಿದೆ ಅಷ್ಟೇ. ಅಷ್ಟಕ್ಕೇ ಈ ರೀತಿಯ ಕೀಳುಮಟ್ಟ ಬೇಕಿರಲಿಲ್ಲ.
ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಲು ಇಂಥಹ ಒಬ್ಬೊಬ್ಬ ನಾಯಕ ಇದ್ದರೆ ಸಾಕು. ಅಲ್ಲಿ ನಮಗೇನೂ ಕೆಲಸವಿರಲ್ಲ ಎಂದು ಕಾಲೆಳೆದರು. ಇವರು ಟ್ಯೂಬ್ ಲೈಟ್ ಅನ್ನು ಕೋರ್ಟ್ ನಲ್ಲಿ ಒಡೆಯಲಿ ನೋಡೋಣ ಎಂದು ಕಿಚಾಯಿಸಿದರು.