Ad Widget .

ಮಳೆಯಲ್ಲಿ ಆಟ ಆಡಬೇಡ ತಾಯಿ ಹೇಳಿದ್ದಕ್ಕೆ ಕೋಪಗೊಂಡು ಬಾಲಕ ನೇಣುಬಿಗಿದು ಆತ್ಮಹತ್ಯೆ

ಕೋಟ :  ಮಳೆಯಲ್ಲಿ ಆಟ ಆಡದಂತೆ ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ 9ನೇ ತರಗತಿ ಬಾಲಕನೊಬ್ಬ ಕೋಪಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬ್ರಹ್ಮಾವರ ತಾಲೂಕಿನ ಕಾರ್ಕಡದಲ್ಲಿ ನಡೆದಿದೆ.

Ad Widget . Ad Widget .

ಮೃತ ಬಾಲಕನನ್ನು ಕಾರ್ಕಡ ನಿವಾಸಿ ಲಕ್ಷ್ಮಿ ಎಂಬವರ ಮಗ, ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ.

Ad Widget . Ad Widget .

ಲಕ್ಷ್ಮೀ ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದು, ಶಾಲಾ ರಜೆ ಹಿನ್ನೆಲೆ ನಾಗೇಂದ್ರ ಕಾರ್ಕಡ ಶಾಲಾ ಮೈದಾನದಲ್ಲಿ ಆಟ ಆಡಲು ಹೋಗಿದ್ದ ಎನ್ನಲಾಗಿದೆ.

ಅಪರಾಹ್ನ ಮನೆಗೆ ಬಂದಾಗ ತಾಯಿ ಮಳೆಯಲ್ಲಿ ಆಟವಾಡದಂತೆ ಬುದ್ದಿ ಹೇಳಿದ್ದರು. ಇಷ್ಟಕ್ಕೆ ಹಠ ಸ್ವಭಾವದ ನಾಗೇಂದ್ರ ಸಿಟ್ಟುಗೊಂಡು ಮನೆ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *