ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದ ಮದುವೆ ಕಾರ್ಯಕ್ರಮ ದಲ್ಲಿ ನಡೆದ ಘಟನೆಯಲ್ಲಿ ಮದುವೆಯು ಅರ್ಧ ಪ್ರಕ್ರಿಯೆ ವೇಳೆ ವಧು ಮದುವೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾಳೆ. ಅದಕ್ಕೆ ಆಕೆ ನೀಡಿದ ಉತ್ತರ ವರ ಬಹಳ ಕಪ್ಪಾಗಿ ಇದ್ದಾನೆಂಬುದಾಗಿ ಹೇಳಿದ್ದಾಳೆ.
ಮದುವೆಯ ಸಮಾರಂಭವು ಪ್ರಾರಂಭವಾದ ತಕ್ಷಣ, ದಂಪತಿಗಳು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು. ಅಲ್ಲಿಂದ ಸಮಸ್ಯೆ ಶುರುವಾಯಿತು. ವಧು ನೀತಾ ಯಾದವ್ ಎರಡು “ಫೆರಾ'(ಏಳು ಸುತ್ತು) ನಂತರ ವಿವಾಹವನ್ನು ಹಠಾತ್ತನೆ ರದ್ದುಗೊಳಿಸುವ ತನ್ನ ನಿರ್ಧಾರ ಪ್ರಕಟಿಸಿದ್ದಾಳೆ.
ಆಕೆಯ ಕುಟುಂಬ ಸದಸ್ಯರು ನಿಲುವು ಬದಲಿಸುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಸಹ, ಮದುವೆ ಮಂಟಪಕ್ಕೆ ಹಿಂದಿರುಗಲಿಲ್ಲ. ಆರು ಗಂಟೆ ಮಾತುಕತೆ ನಡೆದ ಬಳಿಕ ವರನು ತನ್ನ ಕುಟುಂಬ ಸದಸ್ಯರೊಂದಿಗೆ ವಾಪಸ್ ಹೊರಟಿದ್ದಾನೆ.
ವಧುವಿಗೆ ಉಡುಗೊರೆಯಾಗಿ ನೀಡಿದ್ದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಾಪಸ್ ನೀಡಿಲ್ಲ ಎಂದು ವರನ ತಂದೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆ ತನ್ನ ಜೀವನಕ್ಕೆ ಕುತ್ತು ತಂದಿದೆ ಎಂದು ವರ ರವಿ ಹೇಳಿಕೊಂಡಿದ್ದಾರೆ.