Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ…

Ad Widget . Ad Widget .

ಮೇಷ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಜುಲೈ 13 ರಂದು ಮಕರ ರಾಶಿಯಲ್ಲಿ ಹುಣ್ಣಿಮೆಯ ಚಂದ್ರನೊಂದಿಗೆ ಆರೋಗ್ಯವು ನಿಮ್ಮ ಕಡೆ ಇಲ್ಲದಿರಬಹುದು. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ತಲೆನೋವು ಅಥವಾ ಶೀತಬಾಧೆ ಇರುವವರು ಎಚ್ಚರವಹಿಸಿರಿ. ಪ್ರೇಮ ಪ್ರಕರಣದಲ್ಲಿ ದುಡುಕುತನ ಖಂಡಿತ ಬೇಡ.

Ad Widget . Ad Widget .

ವೃಷಭ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂಭವವಿದೆ. ಖಾಸಗಿ ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚು ಯಶಸ್ಸು ಇರುತ್ತದೆ. ಕೌಟುಂಬಿಕ ಸೌಹಾರ್ದತೆಯಿಂದ ಸಂತೃಪ್ತಿ ಮೂಡುತ್ತದೆ.

ಮಿಥುನ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ ಮತ್ತು ಶಾಂತ ವಾರವನ್ನು ಆನಂದಿಸಿ. ಜನರು ಸಮಸ್ಯೆಗಳೊಂದಿಗೆ ನಿಮ್ಮ ಬಳಿಗೆ ಬಂದರೆ, ಅವರನ್ನು ನಿರ್ಲಕ್ಷಿಸಿ ಮತ್ತು ಅವರು ನಿಮ್ಮ ಮನಸ್ಸಿನ ಶಾಂತಿಯನ್ನು ಹಾಳುಮಾಡಲು ಬಿಡಬೇಡಿ. ಹೊಸ ವ್ಯಕ್ತಿಗಳಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು

ಕರ್ಕಾಟಕ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಹರಿವು ನಿರೀಕ್ಷೆಯಷ್ಟು ಇದ್ದರೂ ಖರ್ಚಿಗೆ ಕಡಿವಾಣ ಹಾಕಲೇ ಬೇಕಾದ ಅನಿವಾರ್ಯವಿದೆ. ವಾರದ ಕೊನೆಯ ಭಾಗದಲ್ಲಿ ಅಚಾನಕ್ಕಾಗಿ ದೂರದ ಸಂಬಂಧಿಯಿಂದ ಬರುವ ಯಾವುದೇ ಶುಭ ಸುದ್ದಿ ಇಡೀ ಕುಟುಂಬಕ್ಕೆ ಸಂತಸವನ್ನು ನೀಡುತ್ತದೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ.

ಸಿಂಹ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಏಳನೇ ಮನೆಯ ಅಧಿಪತಿಯಾಗಿ ಶನಿಯು ಏಳನೇ ಮನೆಯಲ್ಲಿ ಇರುವುದರಿಂದ ನಿಮ್ಮ ಸಂಗಾತಿಯ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ. ಬಂಧುಗಳಲ್ಲಿ ನಿಮ್ಮ ಬಗ್ಗೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ವಲ್ಪ ನಿರಾಳ ಆಗುತ್ತದೆ. ಗುರುತರವಾದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಬಂಧುಗಳ ನಡುವೆ ಭೇಷ್ ಎನಿಸಿಕೊಳ್ಳುವಿರಿ.

ಕನ್ಯಾ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಅಗತ್ಯ. ದೂರ ಪ್ರಯಾಣ ಅಷ್ಟು ಹಿತವಲ್ಲ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಮತ್ತು ಪ್ರಮುಖ ವಿಷಯಗಳನ್ನು ಚರ್ಚಿಸುವುದನ್ನು ನೀವು ಕಾಣಬಹುದು, ನಿಮ್ಮ ಕೆಲಸಗಳಿಗೆ ತಾಯಿಯ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ. ಹೆಚ್ಚಿನ ಶ್ರಮವನ್ನು ಹಾಕಲೇಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಇದೆ.

ತುಲಾ ರಾಶಿ
ಈ ವಾರ ಈ ರಾಶಿಯವರು ಹಣದ ಒಳಹರಿವಿನಲ್ಲಿ ಚೇತರಿಕೆಯನ್ನು ಕಾಣಬಹುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಆಗಲಿದೆ. ಈ ವಾರ ಪೂರ್ತಿ, ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಸಾಧನೆಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದಾಯದ ಹೊಸಮೂಲಗಳ ಹುಡುಕಾಟ ನಡೆಸುವಿರಿ. ಸಂಗಾತಿಯ ಕೋಪಕ್ಕೆ ತಾಳ್ಮೆಯೇ ಉತ್ತರ. ಗೃಹ ನಿರ್ಮಾಣ ಕಾರ್ಯವನ್ನು ಮಾಡುವವರಿಗೆ ಪ್ರಗತಿ ಇರುತ್ತದೆ.

ವೃಶ್ಟಿಕ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಿರಿಯರಿಗೆ ಬಹಳ ದಿನಗಳಿಂದ ಕಿರಿಕಿರಿ ಉಂಟು ಮಾಡುತ್ತಿದ್ದ ಸಮಸ್ಯೆಗಳು ಪರಿಹಾರವಾಗುತ್ತವೆ. ನೀವು ಆರೋಗ್ಯವಾಗಿರಲು ಬಯಸಿದರೆ ಈ ವಾರದಲ್ಲಿ ನೀವು ನಿಯಮಿತವಾಗಿ ಹಣ್ಣುಗಳನ್ನು ತಿನ್ನಬೇಕು. ವೃತ್ತಿಜೀವನದಲ್ಲಿ ಸ್ವಲ್ಪ ನಿರಾಶೆಯನ್ನು ಅನುಭವಿಸಿದ್ದರೆ, ಈ ವಾರವು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಸಾಮಾಜಿಕ ಸೇವೆಗಳನ್ನು ಮಾಡಿ ಸಂತಸಪಡುವಿರಿ.

ಧನು ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಗೆ ತಕ್ಕಷ್ಟು ಇರುತ್ತದೆ. ನಿಮ್ಮ ಮಕ್ಕಳಿಂದ ಸಂತೋಷಪಡುವ ಕಾಲ ಬಂದೊದಗಿದೆ. ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿ ಸರಾಗವಾಗಿ ಕೆಲಸಗಳು ಆಗುತ್ತವೆ. ಈ ವಾರ ನೀವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ,

ಮಕರ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಈ ವಾರ, ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರತಿಕೂಲ ಸಂದರ್ಭಗಳು ಉಂಟಾಗುವುದರಿಂದ ನೀವು ಹಲವಾರು ಸಮಸ್ಯೆಗಳನ್ನು ಅನುಭವಿಸುವಿರಿ. ಬಂಧು ಬಾಂಧವರೊಡನೆ ಕೂಡಿ ಸಂತೋಷವಾಗಿ ಕಾಲ ಕಳೆಯುವಿರಿ. ಉದ್ಯೋಗಸ್ಥರಿಗೆ ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತನ್ನು ಕೇಳುವ ಅವಕಾಶವಿದೆ.

ಕುಂಭ ರಾಶಿ
ಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ಅಗತ್ಯವನ್ನು ಪೂರೈಸುತ್ತದೆ. ಅನವಶ್ಯಕ ಮಾತುಗಳಿಗೆ ಅಥವಾ ವ್ಯವಹಾರಗಳಿಗೆ ತಲೆ ಹಾಕದಿರುವುದು ಉತ್ತಮ. ತಾಯಿಯಿಂದ ಕೆಲಸಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಸಾಧನೆಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಯುವಕರು ಆತುರತೆಯಿಂದ ಕೆಲಸಮಾಡಲು ಹೋಗಿ ತೊಂದರೆಯನ್ನು ತಂದುಕೊಳ್ಳುವರು.

ಮೀನ ರಾಶಿ
ಈ ವಾರ ಈ ರಾಶಿಯವರಿಗೆ ಹಣಕಾಸಿನ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಬರಬಹುದು. ಹಾಗಾಗಿ ಹಣದ ನಿರ್ವಹಣೆ ಅಗತ್ಯವಿದೆ. ಈ ವಾರ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮವಾಗುತ್ತೀರಿ ನೀವು ಸಮಾಜದ ಅನೇಕ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದ ನಿರ್ಧಾರ ಖಂಡಿತ ಬೇಡ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಇರುತ್ತದೆ. ಅಲಂಕಾರಿಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *