ಹಿಂದೂಗಳ ಪ್ರಸಿದ್ದ ತೀರ್ಥ ಕ್ಷೇತ್ರ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ಅನೇಕರು ಸಾವು ನೋವಿನ ನಡುವೆ ಹೋರಾಡಿದ್ದಾರೆ.
ಶುಕ್ರವಾರ( ಜು .8)ರ ಸಂಜೆ 5.30 ಸುಮಾರಿಗೆ
ಈ ವೇಳೆಗೆ ಇಲ್ಲಿಗೆ ಯಾತ್ರೆ ಕೈಗೊಂಡಿದ್ದ ಸುಳ್ಯ ತಾಲೂಕಿನ 11 ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಅಮರನಾಥದ ಪವಿತ್ರ ಗುಹೆ ದೇಗುಲದ ಬಳಿ ಉಂಟಾದ ಹಠಾತ್ ಪ್ರವಾಹದಿಂದ ಈ ವರೆಗೆ ಒಟ್ಟು 16 ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಆದರೇ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಲು ಸುಳ್ಯದಿಂದ 11 ಜನರ ಗೆಳೆಯರ ತಂಡ ಜುಲೈ 6 ರಂದು ಹೊರಟ್ಟಿತ್ತು. ಜುಲೈ 12ರಂದು ಈ ತಂಡಕ್ಕೆ ಅಮರನಾಥ ದರ್ಶನ ಮಾಡಲು ದಿನ ನಿಗದಿಯಾಗಿತ್ತು.
ನಿನ್ನೆ ಸಂಜೆ ದುರಂತ ಸಂಭವಿಸಿದ ಸಂದರ್ಭ ಅನಾಹುತ ಸಂಭವಿಸಿದ ಕೆಲ ಕಿಮೀ ದೂರದಲ್ಲಿ ಈ ತಂಡವೂ ತಮ್ಮ ಸರದಿಗಾಗಿ ಕಾಯುತ್ತಿತ್ತು.
ಗುರುಪ್ರಸಾದ್ ಪಂಜ,ಮಂಜುನಾಥ್ ಚೆಂಬು,ಶರತ್ ಅಡ್ಯಡ್ಕ, ದುರ್ಗೇಶ್ ಹೊಸೊಳಿಕೆ, ಸಂಪ್ರೀತ್ ರಾವ್, ತಾರನಾಥ ಕೊಡೆಂಚಿಕಾರು, ರವಿರಾಜ್ ಕರ್ಲಪ್ಪಾಡಿ, ದಿನೇಶ್ ನಾರಾಳು, ವಿನಯ ಕುಮಾರ್ ನಾರಾಳು, ಸೀತಾರಾಮ ಕರ್ಲಪ್ಪಾಡಿ ಮತ್ತು ಯತೀಶ್ ಐವರ್ನಾಡು ಈ ತಂಡದಲ್ಲಿದ್ದವರು.
ಈ ತಂಡವೂ ಅದಕ್ಕೂ ಮೊದಲು ಜುಲೈ 8 ರಂದು ಅಮೃತಸರ ದ ಗೋಲ್ಡನ್ ಟೆಂಪಲ್ ಮತ್ತು ಭಾರತ ಹಾಗೂ ಪಾಕಿಸ್ತಾನದ ಗಡಿ ಪ್ರದೇಶವಾದ ವಾಘ ಗಡಿಗೂ ಭೇಟಿ ನೀಡಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೇರೆ ರಾಜ್ಯದ ಸಿಮ್ ಗಳು ಕಾರ್ಯನಿರ್ವಹಿಸದಂತೆ ನಿರ್ಬಂಧಿಸಲಾಗಿದೆ.
ಹೀಗಾಗಿ ಸಿಮ್ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಆತ್ಮೀಯರಿಗೆ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಮಗೂ ಕೂಡ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಇಂದು ನಾವು ಇಲ್ಲಿನ ಸಿಮ್ ಖರೀದಿಸಿದ್ದು ಇದರ ಸಹಾಯದಿಂದ ಇದೀಗ ಊರವರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ದುರ್ಘಟನೆ ಸಂಭವಿಸುತ್ತಲೇ ನಮ್ಮನ್ನು ಸುರಕ್ಷತಾ ಸಿಬ್ಬಂದಿಗಳು ಜಮ್ಮು ಕಾಶ್ಮೀರ ದ ಬೇಸ್ ಕ್ಯಾಂಪ್ ಸ್ಥಳಾಂತರಿಸಿದ್ದು ಅಲ್ಲಿ ಸೇಫ್ ಆಗಿದ್ದೇವೆ ಎಂದು ಗುರು ಪ್ರಸಾದ್ ತಿಳಿಸಿದ್ದಾರೆ.