ಕಾಣಿಯೂರು: ಸೇತುವೆಯಿಂದ ಕೆಳಗುರುಳಿ ನೀರು ಪಾಲಾದ ಕಾರು| 50 ಮೀಟರ್ ದೂರದಲ್ಲಿ ಪತ್ತೆ

ಸಮಗ್ರ ನ್ಯೂಸ್: ಮಂಜೇಶ್ವರ – ಪುತ್ತೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನೀರು ಪಾಲಾಗಿದ್ದು, 50 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

Ad Widget ... ..

ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಈ ಘಟನೆ ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ.

Ad Widget

ಘಟನೆ ಕುರಿತಂತೆ ಸ್ಥಳೀಯರು ಪರಿಶೀಲನೆ ನಡೆಸುತ್ತಿದ್ದು ವಿಟ್ಲ‌ ಕುಂಡಡ್ಕ ಮೂಲದ ಮೂವರು ನೀರುಪಾಲಾಗಿದ್ದಾರೆ ಎಂದು ಹೇಳಲಾಗಿದೆ. ನೀರುಪಾಲಾದವರಿಗಾಗಿ‌ ಶೋಧ ನಡೆಸಲಾಗುತ್ತಿದೆ.

ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿಯ ಸಮೀಪದ ಗೌರಿಹೊಳೆಯಲ್ಲಿ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಅವಘಡ ಸಂಭವಿಸಿದೆ. ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು. ಹೊಳೆಯಿಂದ ಕಾರನ್ನು ಮೇಲಕ್ಕೆತ್ತಲಾಗಿದ್ದು, ಕಾರಿನಲ್ಲಿ ಮೂವರು ಸಂಚರಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಪೈಕಿ ಓರ್ವನನ್ನು ಕುಂಡಡ್ಕದ ಧನುಷ್ ಮತ್ತೊಬ್ಬರನ್ನು ಮಂಜೇಶ್ವರದ ಧನುಷ್ ಎಂದು ಹೇಳಲಾಗಿದೆ.

ಮಾಹಿತಿ ನಿರೀಕ್ಷಿಸಲಾಗಿದೆ…

Leave a Comment

Your email address will not be published. Required fields are marked *