ಅಗತ್ಯ ವಸ್ತುಗಳಲ್ಲಿ ಒಂದಾದ ಎಸಿ, ಫ್ರಿಡ್ಜ್ ವಾಷಿಂಗ್ ಮೇಷಿನ್,ಮುಂತಾದವುಗಳ ಬೆಲೆ ಇಳಿಕೆಯಾಗಲಿದೆ. ಏಕೆಂದರೆ ಅವುಗಳ ಉತ್ಪಾದನೆ ಬೇಕಾಗುವ ತಾಮ್ರ ಮತ್ತು ಸ್ಟೀಲ್‌ಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
ಫೆ.24ರಿಂದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶುರುವಾದ ಬಳಿಕ ತಾಮ್ರ, ಉಕ್ಕು ಅಲ್ಯುಮಿನಿಯಂ ದರ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿತ್ತು. ತಾಮ್ರ ಈಗ ಶೇ21, ಉಕ್ಕು ಶೇ.19, ಅಲ್ಯುಮಿನಿಯಂ ಶೇ.19ರಷ್ಟು ಇಳಿಯಾಗಿದೆ.
ಕಂಪನಿಗಳು ಕೂಡಾ ಅವುಗಳ ಲಾಭವನ್ನು ಗ್ರಾಹಕರಿಗೆ ಕೊಡುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಫ್ರಿಡ್ಜ್, ಎಸಿ, ವಾಷಿಂಗ್ ಮಷೀನ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಲಿದ್ದಾರೆ ಮತ್ತು ಹಣದುಬ್ಬರ ಪ್ರಮಾಣ ಇಳಿಯಾಗಲು ನೆರವಾಗಲಿದೆ.
ಹಲವು ಕಾರಣಗಳಿಂದ ಎರಡು ವರ್ಷಗಳ ಅವಧಿಯಲ್ಲಿ ಗೃಹಪಯೋಗಿ ವಸ್ತುಗಳ ದರ ಶೇ.20 ಏರಿಕೆಯಾಗಿದೆ ಎಂದು ಐಸಿಐಸಿ ಸೆಕ್ಯುರಿಟೀಸ್ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.
ಗ್ರಾಹಕರಿಗೆ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳು ಸಿಗುವುದರಿಂದ ಕಂಪನಿಗಳಿಗೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಅನುಕೂಲವಾಗುತ್ತದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕಂಪನಿಗಳಿಗೆ ಕೂಡಾ ಅನಾನುಕೂಲವಾಗಿ ಪರಿಣಮಿಸಲಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ತನ್ನ ವರದಿ ಅಭಿಪ್ರಾಯಪಟ್ಟಿದೆ.