ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡಿದೆ. ಒಂದೇ ಸಮನೆ ಸುರಿದ ಭಾರೀ ಮಳೆಗೆ ಅಮರನಾಥ ಯಾತ್ರಾರ್ಥಿಗಳು ನಿಧನರಾಗಿದ್ದು ಹಲವರು ಗಾಯಗೊಂಡಿದ್ದಾರೆ.
ಪವಿತ್ರ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಬಳಿ ನದಿಗಳು ಉಕ್ಕಿ ಹರಿದಿದೆ. ಬೆಟ್ಟ ಗುಡ್ಡಗಳು ಕುಸಿದಿವೆ. ಅಮರನಾಥ ಯಾತ್ರೆ ಬೇಸ್‌ಕ್ಯಾಂಪ್‌ನಲ್ಲಿ ತಂಗಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಗಳು ಚುರುಕುಗೊಂಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನಿರಂತರ ಕಾರ್ಯನಿರ್ವಹಿಸುತ್ತಿದೆ.
ಶುಕ್ರವಾರ ಸಂಜೆ 5.30ಕ್ಕೆ ಮೇಘಸ್ಫೋಟ ಸಂಭವಿಸಿದೆ. ಭಾರಿ ಮಳೆಗೆ ಮತ್ತೆ ಹಿಮಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗ ತತ್ತರಿಸಿದೆ.