ಮಗಳ ಮೇಲೆ ಅತ್ಯಾಚಾರ ಎಸಗಿದ ಕುಟುಂಬದ ಮೇಲೆ ಆಕೆಯ ತಂದೆ ಕತ್ತಿಯಿಂದ ಕಡಿದು ಕೊಲೆ

ಸಮಗ್ರ ನ್ಯೂಸ್ : ತನ್ನ ಮಗಳ ಅತ್ಯಾಚಾರ ನಡೆಸಿದ ಯುವಕನ ಕುಟುಂಬದ ಆರು ಮಂದಿ ಸದಸ್ಯರನ್ನು ಸಂತ್ರಸ್ತೆಯ ತಂದೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣ ಹತ್ತಿರ ನಡೆದಿದೆ.

Ad Widget ... ..

ಒಂದೇ ಕುಟುಂಬದ ಆರು ಮಂದಿ ಮೃತ ಪಟ್ಟಿದ್ದಾರೆ. ವಿಶಾಖಪಟ್ಟಣಂನ ಜತ್ತಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

Ad Widget

ಇದೀಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಎರಡು ಕುಟುಂಬಗಳ ನಡುವೆ ಹಳೆ ವೈಷಮ್ಯವಿದ್ದು, ಮೃತ ಕುಟುಂಬದ ಸದಸ್ಯರು ಕೊಲೆ ಆರೋಪಿಯ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಈ ವಿಷಯ ಸಂತ್ರಸ್ತೆಯ ತಂದೆಗೆ ತಿಳಿಯುತ್ತಲೇ ಕೋಪಗೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *