ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ತೊಂದರೆಗೆ ಸಿಲುಕಿದ ಯುವಕ ಮರಳಿ ಊರಿಗೆ

ಸಮಗ್ರ ನ್ಯೂಸ್ : ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ತೊಂದರೆಗೆ ಸಿಲುಕಿದ್ದ ಕಾರ್ಕಳ ನಿವಾಸಿ ಜಯೇಶ್‌ ಅವರು ಮುಂಬಯಿ ತಲುಪಿ ಅಲ್ಲಿಂದ ಊರಿಗೆ ಪ್ರಯಾಣ ಬೆಳೆಸಿದ್ದಾರೆ.

Ad Widget ... ..

ಕುವೈಟ್‌ನಲ್ಲಿ ಮನೆ ನಿರ್ವಹಣೆಯ ಉದ್ಯೋಗವಿದೆ ಎಂದು ಶೃಂಗೇರಿಯ ಸಚಿನ್‌ ವೀಸಾ ಕಳುಹಿಸಿಕೊಟ್ಟಿದ್ದರು.

Ad Widget

ಅದನ್ನು ನಂಬಿದ ಜಯೇಶ್‌ ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲಿ ಅರಬೀ ಪ್ರಜೆಯೋರ್ವ ಕುರಿ, ಆಡು ಸಾಕುವ ಫಾರ್ಮ್ಹೌಸ್‌ನಲ್ಲಿ ಕೆಲಸಕ್ಕೆ ನಿಯೋಜಿಸಿದ್ದ. ದಿನಕ್ಕೆ ಸುಮಾರು 12ರಿಂದ 14 ಗಂಟೆ ದುಡಿಯಬೇಕಿತ್ತು.

ಊಟ, ತಿಂಡಿ ಸರಿಯಾಗಿ ನೀಡುತ್ತಿರಲಿಲ್ಲ. ಹಲ್ಲೆ ಕೂಡ ನಡೆಸುತ್ತಿದ್ದ. ಈ ಬಗ್ಗೆ ಸಚಿನ್‌ನನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ದೊರೆತಿರಲಿಲ್ಲ.

ಆ ನಂತರ ಜಯೇಶ್‌ ತುಳುಕೂಟದ ರೋಶನ್‌ ಅವರಲ್ಲಿ ಸಹಾಯ ಯಾಚಿಸಿದ್ದರು. ರೋಶನ್‌ ಕುವೈಟ್‌ನಲ್ಲಿರುವ ಮಂಜೇಶ್ವರ ಮೋಹನದಾಸ್‌ ಕಾಮತ್‌ ಅವರಿಗೆ ತಿಳಿಸಿದ್ದರು.

ಈ ವೇಳೆ ಜಯೇಶ್‌ ಫಾರ್ಮ್ಹೌಸ್‌ನಿಂದ ತಪ್ಪಿಸಿಕೊಂಡು ಕುವೈಟ್‌ನ ರಾಯಭಾರ ಕಚೇರಿ ತಲುಪಿ ಊರಿಗೆ ಬರಲು ಪ್ರಯತ್ನಿಸಿದರು.

ಈ ವೇಳೆ ಮೋಹನ್‌ದಾಸ್‌ ಕಾಮತ್‌ ಹಾಗೂ ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ನೆರವಾದರು.

Leave a Comment

Your email address will not be published. Required fields are marked *