Ad Widget .

ರಾಜ್ಯದಲ್ಲಿ ಪ.ಪೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಭರ್ತಿಗೆ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Ad Widget . Ad Widget .

ಅತಿಥಿ ಉಪನ್ಯಾಸಕರಿಗೆ ಈಗಿನ 9 ಸಾವಿರ ರೂ. ಗೌರವ ಸಂಭಾವನೆಯನ್ನು 12 ಸಾವಿರ ರೂ.ಗೆ ಹೆಚ್ಚಿಸಲು ಸರಕಾರವು ಅನುಮೋದನೆ ನೀಡಿದೆ. ಗೌರವ ಸಂಭಾವನೆಯನ್ನು ಹದಿನೈದು ಸಾವಿರ ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದ್ದರೂ, ಸರಕಾರವು ಮಾಸಿಕವಾಗಿ ಮೂರು ಸಾವಿರ ರೂ. ಹೆಚ್ಚಿಸಿದೆ.

Ad Widget . Ad Widget .

ರಾಜ್ಯ ಸರಕಾರವು ಒಟ್ಟು 3708 ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಇವುಗಳಲ್ಲಿ ೨೦೨೩ರ ಏಪ್ರಿಲ್‌ ಒಂದರವರೆಗೆ ಖಾಲಿಯಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ಸಂಖ್ಯೆ 3271 ಇದೆ. ಬಡ್ತಿ, ವಯೋನಿವೃತ್ತಿ, ನಿಧನ ಮತ್ತು ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳ ಸಂಖ್ಯೆ 100 ಇದೆ.

Leave a Comment

Your email address will not be published. Required fields are marked *