Ad Widget .

ಅರ್ಧನಿಮಿಷದಲ್ಲಿ 60 ಬಾರಿ ಇರಿದು ಕೊಂದ ಹಂತಕರು| ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲು

ಸಮಗ್ರ ನ್ಯೂಸ್: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದರ ಸಿಸಿ ಟಿವಿ ಫುಟೇಜ್‌ ಈಗ ಬಹಿರಂಗವಾಗಿದ್ದು, ಇದರ ದೃಶ್ಯಗಳು ಎದೆ ನಡುಗಿಸುವಂತಿದೆ.

Ad Widget . Ad Widget .

ಚಂದ್ರಶೇಖರ ಗುರೂಜಿಯವರು ಹೋಟೆಲ್‌ ರಿಸೆಪ್ಶನ್‌ ಹಾಲ್‌ ಗೆ ಸಹಜವಾಗಿಯೇ ನಡೆದುಕೊಂಡು ಬಂದಿದ್ದಾರೆ. ಅವರಿಗಾಗಿಯೇ ಕಾದು ಕುಳಿತಿದ್ದ ಹಂತಕರ ಪೈಕಿ ಓರ್ವ ಕಾಲಿಗೆ ಬಿದ್ದಿದ್ದಾನೆ. ಆತನಿಗೆ ಚಂದ್ರಶೇಖರ ಗುರೂಜಿ ಆಶೀರ್ವದಿಸುವ ಸಂದರ್ಭದಲ್ಲಿಯೇ ಮತ್ತೊಬ್ಬ ಮೊದಲಿಗೆ ಎದೆಗೆ ಚಾಕು ಚುಚ್ಚಿದ್ದಾನೆ.

Ad Widget . Ad Widget .

ಬಳಿಕ ಕಾಲಿಗೆ ಬಿದ್ದಿದ್ದ ಮತ್ತೊಬ್ಬ ಹಂತಕ ಸಹ ಚಾಕು ಚುಚ್ಚಲು ಆರಂಭಿಸಿದ್ದು, ಇದರಿಂದ ಭಯಭೀತರಾಗಿ ಅಕ್ಕ ಪಕ್ಕದ ಸೋಫಾದಲ್ಲಿ ಕುಳಿತಿರುವವರು ಓಡಲು ಆರಂಭಿಸಿದ್ದಾರೆ.

ತಮ್ಮನ್ನು ರಕ್ಷಿಸಿಕೊಳ್ಳಲು ಗುರೂಜಿ ಎಷ್ಟೇ ಪ್ರಯತ್ನಪಟ್ಟರೂ ಅದಕ್ಕೆ ಅವಕಾಶವನ್ನೇ ಕೊಡದಂತೆ ಹಂತಕರು ಮನಬಂದಂತೆ ಚಾಕು ಚುಚ್ಚಿದ್ದು, 60 ಕ್ಕೂ ಹೆಚ್ಚು ಬಾರಿ ಚುಚ್ಚಲಾಗಿದೆ ಎಂದು ಹೇಳಲಾಗಿದೆ.

ಬಳಿಕ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಿದ್ದು, ಹಾಡಹಗಲೇ ಇಷ್ಟು ಬರ್ಬರವಾಗಿ ನಡೆದಿರುವ ಹತ್ಯೆಯಿಂದ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ.

Leave a Comment

Your email address will not be published. Required fields are marked *