Ad Widget .

ನಾಲ್ಕೇ ಗಂಟೆಗಳಲ್ಲಿ ಹಂತಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು| ಇಬ್ಬರು ಆರೋಪಿಗಳು ಅಂದರ್

ಸಮಗ್ರ ನ್ಯೂಸ್: ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ ಬಳಿಯಲ್ಲಿ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಹಂತಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಲೆಯಾದ‌ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Ad Widget . Ad Widget .

ಹಂತಕರಾದ ಕಲಘಟಗಿ ತಾಲೂಕು ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ, ಮಂಜುನಾಥ ಮರೇವಾಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಇಬ್ಬರು ಕಾರಿನಲ್ಲಿ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತನಿಖಾ ತಂಡವು ಇಬ್ಬರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget . Ad Widget .

ಇದಲ್ಲದೆ ಚಂದ್ರಶೇಖರ ಗುರೂಜಿಯವರ ಕೊಲೆಗೆ ಸಂಬಂಧಿಸಿದಂತೆ ಗೋಕುಲ್ ರಸ್ತೆಯ ಗುರೂಜಿ ಅಪಾರ್ಟ್ಮೆಂಟ್ ನಲ್ಲಿ ಆರೋಪಿ ಮಹಾಂತೇಶ ಶಿರೂರ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಗುರೂಜಿಯ ಆಪ್ತ ಮಹಾಂತೇಶ ಶಿರೂರ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರಿಂದ ತೀವ್ರ ವಿಚಾರಣೆ ನಡೆಸಿದ್ದಾರೆ. ಗುರೂಜಿ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.‌ ಗೋಕುಲ ರಸ್ತೆ ಗುರೂಜಿ ಅಪಾರ್ಟ್​ಮೆಂಟ್​ನಲ್ಲೇ ಮಹಾಂತೇಶ ಶಿರೂರು 308 ರಲ್ಲಿ ವಾಸವಾಗಿದ್ದರು.

Leave a Comment

Your email address will not be published. Required fields are marked *