Ad Widget .

ಬಿ.ಸಿ.ರೋಡ್: ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ

ಸಮಗ್ರ‌ನ್ಯೂಸ್: ಬಿ.ಸಿ.ರೋಡಿನ ಶಾಂತಿ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ನಿನ್ನೆ ತಡರಾತ್ರಿ ಉಂಟಾದ ಮಾತಿನ ಚಕಮಕಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.

Ad Widget . Ad Widget .

ಕೊಲೆಯಾದವರನ್ನು ಬಿ.ಸಿ.ರೋಡ್ ಬಂಟ್ವಾಳದ ಬಿ ಮೂಡ ಗ್ರಾಮದ ಶಾಂತಿಯಂಗಡಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಆಸೀಫ್‌ಎಂದು ಗುರುತಿಸಲಾಗಿದೆ. ಬಂಟ್ವಾಳದ ಮಾರಿಪಳ್ಳ ನಿವಾಸಿಗಳಾದ ಮಹಮ್ಮದ್ ನೌಫೆಲ್ ಮಾರಿಪಳ್ಳ ಹಾಗೂ ಮಹಮ್ಮದ್ ನೌಸೀರ ಮಾರಿಪಳ್ಳ ಕೊಲೆ ಆರೋಪಿಗಳು.

Ad Widget . Ad Widget .

ಬಿ.ಸಿ.ರೋಡಿನ ಬಸ್ ಡಿಪೋ ಬಳಿ ಬೈಕ್ ಹಾರ್ನ್ ವಿಚಾರದಲ್ಲಿ ಎರಡು ತಂಡಗಳ ನಡುವೆ ವಾಗ್ವಾದ ಉಂಟಾಗಿ ಜಗಳ ತಾರಕಕ್ಕೇರಿದ್ದು ,ಈ ಸಮಯದಲ್ಲಿ ಆಸಿಫ್ ಎಂಬವರನ್ನು ಚೂರಿ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ತೀವ್ರ ರಕ್ತಸ್ರಾವ ದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಹತ್ಯೆಯಾದ ಆಸೀಪ್‌ ಸ್ನೇಹಿತ ಶಾಂತಿಯಂಗಡಿ ನಿವಾಸಿ ಮಹಮ್ಮದ್ ನೌಫಲ್ ಎಂಬವರು ದೂರು ನೀಡಿದ್ದಾರೆ.

ಪ್ರತಿದಿನ ಪೊನ್ನೊಡಿಯಲ್ಲಿರುವ ಲಗೂನ ಕೊಕೊನೆಟ್ ಹೊಟೇಲ್ ಬಳಿ ಆಸೀಫ್ ನು ತನ್ನ ಡಿಯೋ ಮೋಟಾರ ಸೈಕಲ್ ನಲ್ಲಿ ಹೋಗುತ್ತಿರುವಾಗ ಆರೋಪಿಗಳಿಬ್ಬರನ್ನು ನೋಡಿ ಸುಖಾ ಸುಮ್ಮನೆ ಹಾರನ್ ಹಾಕುತ್ತಾನೆ. ಈ ದ್ವೇಷದಿಂದ ಕೈಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದಲ್ಲದೆ ವಿಚಾರಿಸಲು ಹೋದಾಗ ನೌಪಾಲ್ ನು ಚೂರಿಯಿಂದ ಆಸೀಫ್ ನಿಗೆ ತಿವಿದು ತ್ರೀವ ಗಾಯಗೊಳಿಸಿ ಕೊಲೆ ಮಾಡಿರುವುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಐಪಿಸಿ ಕಲಂ 323, 504, 324, 506, 302 ಜೊತೆ 34 ರಂತೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *