ಪುತ್ತೂರು: ಕಾಲುಸಂಕ ನಿರ್ಮಿಸಿ ಸ್ಥಳೀಯ ಬಡ ಕುಟುಂಬದವರ ಕೃಷಿಗೆ ಹಾನಿ ಮಾಡಿದ್ದಲ್ಲದೆ ಪರಿಹಾರ ಕೊಡುವುದಾಗಿ ಹೇಳಿಕೊಂಡು ವಂಚಿಸುತ್ತಿರುವ ಘಟನೆ ಪುತ್ತೂರು ತಾಲೂಕಿನ ಪೆರ್ಲಂಪಾಡಿ ಗ್ರಾಮದ ಪಾಂಬಾರು ಎಂಬಲ್ಲಿ ನಡೆದಿದೆ.
ಪಾಂಬಾರು ನಿವಾಸಿಯಾಗಿರುವ ಬಾಬು ಗೌಡರ ಕುಟುಂಬ ಈ ಸಮಸ್ಯೆಗೆ ಒಳಗಾದವರು. ಇವರು ಸರಿಸುಮಾರು 50 ವರ್ಷಗಳಿಂದ ಆ ಜಾಗದಲ್ಲಿ ವಾಸಮಾಡುತ್ತಿದ್ದು, ಸದ್ಯ ಬಾಬು ಗೌಡ ಮತ್ತು ಅವರ ಪತ್ನಿ ಹಾಗು ಒರ್ವ ಮಗ ವಸಂತ ಕುಮಾರ್ ವಾಸಿಸುತ್ತಿದ್ದಾರೆ. ಇವರಿಗೆ ವಯಸ್ಸಾಗಿದ್ದು ಮಗ ವಸಂತ್ ಕುಮಾರ್ ಮನೆಯ ಎಲ್ಲಾ ಜವಾಬ್ದಾರಿಯನ್ನು ನಡೆಸುತ್ತಿದ್ದಾನೆ. ಇವರ ಮನೆಯ ಬಳಿ ತೋಡು ಇದ್ದು ಅದರಿಂದಾಚೆ ಅಡಿಕೆ ತೋಟ ಇದೆ. ಇವರ ಮಗ ಕೆಲಸದ ನಿಮಿತ್ತ ಕೆಲವು ದಿನಗಳ ಕಾಲ ಮನೆಯಲ್ಲಿ ಇಲ್ಲದ ವೇಳೆ ಪಂಚಾಯತ್ ಸದಸ್ಯ ಯತೀಂದ್ರ ಕೊಚ್ಚಿ ಹಾಗೂ ಕಾಂಟ್ರಾಕ್ಟರ್ ಬಂದು ಬಾಬು ಗೌಡರ ಬಳಿ `ನಿಮ್ಮ ತೋಟದ ಬದಿಯಲ್ಲಿ ಕಾಲು ಸಂಕ ನಿರ್ಮಿಸಲಿಕ್ಕಿದೆ ಹಾಗಾಗಿ ಒಂದೆರಡು ಅಡಿಕೆ ಮರವನ್ನು ಕಡಿವುದಾಗಿ ಹೇಳಿದ್ದಾರೆ.” ಈ ವೇಳೆ ಬಾಬು ಗೌಡರು “ಈ ವಿಷಯವನ್ನು ನನ್ನ ಮಗನ ಬಳಿ ಕೇಳಬೇಕು ಎಂದು ಹೇಳಿದ್ದಾರೆ” ಈ ವೇಳೆ ಆತನ ಬಳಿ ಬಂದು ಅಲ್ಲೆ ಇರುವ ಬೇರೆ ಪಕ್ಕದ ಜಾಗವನ್ನು ತೋರಿಸಿ ಇಲ್ಲಿ ಕಾಲು ಸಂಕ ನಿರ್ಮಿಸುತ್ತೇವೆ ಹಾಗಾಗಿ ನಿಮ್ಮ ಜಾಗದಲ್ಲಿ ಇರುವ ಒಂದೆರಡು ಅಡಿಕೆ ಮರವನ್ನು ಕಡಿಯುವುದಾಗಿ ಕೇಳಿದ್ದಾರೆ. ಈ ವೇಳೆ ಆತ ನಾಲ್ಕು ಜನರಿಗೆ ಉಪಯೋಗ ಆಗಲೆಂದು ಒಂದೆರಡು ಅಡಿಕೆ ಮರ ಕಡಿಯಲು ಒಪ್ಪಿಕೊಂಡಿದ್ದಾನೆ.
ಕೆಲವು ದಿನ ಕಳೆದ ನಂತರ ಮಗ ಮನೆಯಲ್ಲಿ ಇಲ್ಲದ ವೇಳೆ ಸ್ಥಳಕ್ಕೆ ಬಂದ ಯತೀಂದ್ರ ಮತ್ತು ಕಾಂಟ್ರಾಕ್ಟರ್ ಜೆಸಿಬಿ ತರಿಸಿ ಕೆಲಸ ಪ್ರಾರಂಭಿಸಿದ್ದಾರೆ. ಅದರೆ ಅವರ ತೋರಿಸಿದ ಜಾಗದ ಬದಲು ಬಾಬು ಗೌಡರ ತೋಟದ ಬದಿಯನ್ನು ಅಗೆದಿದಲ್ಲದೆ 13 ರಿಂದ 15 ಫಲ ಕೊಡುವ ಅಡಿಕೆ ಮರ ಹಾಗೂ 4 ತೆಂಗಿನ ಮರವನ್ನು ಕಡಿದು ಕಾಲು ಸಂಕ ನಿರ್ಮಿಸಲು ಅಡಿಪಾಯ ಹಾಕಿದ್ದಾರೆ. ಈ ವೇಳೆ ಬಾಬು ಗೌಡರು ಕೇಳಿದಾಗ ಪರಿಹಾರ ಕೊಡಿಸುವುದಾಗಿ ನಂಬಿಸಿ ಕೆಲಸ ಮುಂದುವರೆಸಿದ್ದಾರೆ.
ಬಳಿಕ ಮಗ ವಸಂತ ಕುಮಾರ್ ಮನೆಗೆ ಬಂದು ನೋಡಿದಾಗ ತನಗೆ ತೋರಿಸದ ಜಾಗವನ್ನು ಬಿಟ್ಟು ಬೇರೆ ಕಡೆ ಕೆಲಸ ಪ್ರಾರಂಭಿಸಿದ್ದು, ಕೃಷಿ ಹಾನಿಯಾಗಿದ್ದು, ಸುಮಾರು ನಷ್ಟ ಉಂಟಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಆತ ಸಮಸ್ಯೆಯನ್ನು ಮನವಿ ಮುಖಾಂತರ ಪಂಚಾಯತ್ ಅಭಿವೃದ್ಧಿ ಅದಿಕಾರಿಯವರಿಗೆ ತಿಳಿಸಿದ್ದಾರೆ. ತಕ್ಷಣ ವಾರ್ಡ್ ಮೆಂಬರ್ ಯತೀಂದ್ರ ಕೊಚ್ಚಿ ಮತ್ತು ಕೆಲ ಬಿಜೆಪಿ ಸದಸ್ಯರು ಬಂದು ಅಲ್ಲಿ ಉಂಟಾದ ಹಾನಿ ಮತ್ತು ನಷ್ಟಕ್ಕೆ ಪರಿಹಾರ ಕೊಡುವುದಾಗಿ ಹೇಳಿ ಕ್ಯಾಶ್ ಮುಖಾಂತರ 15 ಸಾವಿರ ಹಣವನ್ನು ಆತನ ಕೈಗಿಟ್ಟು ಮುಂದೆ 1 ಲಕ್ಷ ರೂ. ಪರಿಹಾರವನ್ನು ಕೊಡುವುದಾಗಿ ಭರವಸೆ ನೀಡಿ ಹೋಗಿದ್ದಾರೆ. ಆದರೆ ಮತ್ತೆ ಜನ ಪ್ರತಿನಿಧಿಗಳು ಆತ್ತ ತಲೆ ಹಾಕದೆ, ಅವರ ಸಮಸ್ಯೆ ಕೇಳದೆ ಕುಳಿತಿದ್ದಾರೆ ಎಂದು ದೂರಲಾಗಿದೆ.
ಅದರೆ ಈ ಕಾಲು ಸಂಕದ ಕಾಮಗಾರಿಯನ್ನು ಪೂರ್ತಿ ಮಾಡಿದ್ದರೂ ತೋಟದ ಬದಿ ಮಣ್ಣು ತೆಗೆದ ಜಾಗಕ್ಕೆ ಸರಿಯಾದ ತಡೆ ಗೋಡೆ ಕಟ್ಟಿಕೊಡದೆ ಕೆಲಸ ಮುಗಿಸಿದ್ದಾರೆ. ಅದರೆ ಈ ತಡೆ ಗೋಡೆ ನಿರ್ಮಿಸದಿರುವುದರಿಂದ ಹತ್ತಿರದ ತೋಡಿನಲ್ಲಿ ಬರುವ ನೀರಿನ ರಭಸಕ್ಕೆ ತೋಟದ ಬದಿ ಕೊರೆತ ಉಂಟಾಗಿದೆ. ಇದರಿಂದ ಬದಿಯಲ್ಲಿರುವ ಅಡಿಕೆ ಮರ ಮತ್ತು ತೆಂಗಿನ ಮರ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಗೆ ತಲುಪಿದೆ.
ಸ್ಥಳಕ್ಕೆ ಭೇಟಿ ನೀಡಿದ ಸಮಗ್ರ ಸಮಾಚಾರ ಟೀಂ ಪರಿಶೀಲನೆ ನಡೆಸಿದೆ. ಈ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತೋಡಿನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಈ ರಭಸಕ್ಕೆ ಇನ್ನಷ್ಟೂ ಮಣ್ಣಿ ಕೊರೆತ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಇನ್ನೂ ಹಾನಿ ಉಂಟಾಗುವ ಸಂಭವ ಹೆಚ್ಚಿದೆ. ಹಾಗಾಗಿ ಈ ಸಮಸ್ಯೆಯಲ್ಲಿ ಬಳಲುತ್ತಿರುವ ಬಡ ಕುಟುಂಬದ ಕಣ್ಣೀರು ಒರೆಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಅಗುವ ಅನಾಹುತವನ್ನು ತಪ್ಪಿಸ ಬೇಕಾಗಿದೆ.
ಕೈ ಕಟ್ಟಿ ಕುಳಿತ ಪಿಡಿಒ:
ಗ್ರಾಮ ಪಂಚಾಯತ್ ನ ಈ ಅವೈಜ್ಞಾನಿಕ ಕಾಮಗಾರಿ ಕುರಿತಂತೆ ಕೊಳ್ತಿಗೆ- ಪೆರ್ಲಾಂಪಾಡಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು. ಅದರೆ ಈ ಮನವಿ ಕೊಟ್ಟು 4 ತಿಂಗಳು ಕಳೆದರೂ ಯಾವುದೆ ಪರಿಶೀಲನೆಯಾಗಲೀ ಪರಿಹಾರವಾಗಲಿ ಕೊಡಲು ಮುಂದಾಗದಿರುವುದು ಆಶ್ಚರ್ಯ.
ಈ ಕುರಿತು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಮನೆಯವರಿಗಾದ ಸಮಸ್ಯೆಯ ಬಗ್ಗೆ ವಿಚಾರಿಸಿದಾಗ ಅವರು ಮನವಿಯನ್ನು ಕೊಡಲಿ ಮುಂದಿನ ಸಭೆಯಲ್ಲಿ ಮಾತಾಡುವುದಾಗಿ ಹೇಳಿದರು. ಈ ವೇಳೆ ವಸಂತ ಕುಮಾರ್ ನಾನು ಈಗಾಗಲೇ ಮನವಿಯನ್ನು ಕೊಟ್ಟಿರುದಾಗಿ ಹೇಳಿದ್ದಾರೆ. ತಕ್ಷಣ ಹುಡುಕಿದಾಗ ಮಾರ್ಚ್ ತಿಂಗಳಿನಲ್ಲಿ ಕೊಟ್ಟಿರುವುದು ಕಂಡುಬಂದಿದೆ. ಈ ಎಲ್ಲಾ ವ್ಯವಸ್ಥೆಯನ್ನು ನೋಡಿದಾಗ ಮನವಿಯನ್ನು ತೆಗೆಕೊಂಡ ಅಧಿಕಾರಿ ಅದನ್ನು ಹಾಗೆಯೆ ಕಪಾಟಿನಲ್ಲಿ ಇಟ್ಟು ಕೈ ಕಟ್ಟಿ ಕುಳಿತ್ತಿರುವುದು ಕಂಡು ಬರುತ್ತದೆ.
ಅಂಬೇಡ್ಕರ್ ರಕ್ಷಣ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ:
ಸಮಸ್ಯೆ ಬಗ್ಗೆ ವಸಂತ್ ಕುಮಾರರು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಾಜೆಯವರಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸುದರ ಪಾಟಜೆ ಸಮಸ್ಯೆ ಬಗ್ಗೆ ಕಂಡುಕೊಂಡಿದ್ದಾರೆ. ಬಳಿಕ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಬಳಿ ಮಾತನಾಡಿದಾಗ. ಈ ಬಗ್ಗೆ ಸ್ಥಳೀಯ ವಾರ್ಡ್ ಮೆಂಬರ್ ಬಳಿ ವಿಚಾರಿಸಿ ಮುಂದಿನ ಕ್ರಮ ಕೈಕೊಳ್ಳುವುದಾಗಿ ಹೇಳಿದ್ದಾರೆ. ಅದರೆ ಈ ಸಮಸ್ಯೆ ಶೀಘ್ರ ಪರಿಹಾರ ಕೊಡದಿದ್ದಲ್ಲಿ ಪಂಚಾಯತ್ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಸಮಗ್ರ ಸಮಾಚಾರಕ್ಕೆ ಮಾಹಿತಿ ನೀಡಿದ್ದಾರೆ.
ಕಾನೂನು ರೀತಿಯ ಯಾವುದೇ ನಡೆದಿಲ್ಲ:
ಇನ್ನೂ ಕೆಲಸ ಪ್ರಾರಂಭಿಸುವ ಮೊದಲು ಆಗಲಿ, ೧೫ ಸಾವಿರ ಹಣ ಕೊಡುವ ವೇಳೆಯಾಗಲಿ, ಮತ್ತು ಪರಿಹಾರ ಕೊಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದಲ್ಲದೆ ಯಾವುದೇ ಕಾನೂನು ರೀತಿಯಲ್ಲಿ ಬರವಣಿಗೆ ಮುಖಾಂತರ ಯುವುದು ನಡೆದಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.