Ad Widget .

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ| ಗ್ರಾಮಸ್ಥರ ಹೋರಾಟಕ್ಕೆ ಸಿಗಬಹುದೇ ಶಾಶ್ವತ ಗೆಲುವು?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ‌ ತಾಲೂಕಿನ ಮರ್ಕಂಜದ ಅಳವುಪಾರೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಾತ್ಕಾಲಿಕ ಬಂದ್ ಮಾಡಿರುವುದಾಗಿ ವರದಿಯಾಗಿದೆ.

Ad Widget . Ad Widget .

ಕೆಲ ದಿನಗಳಿಂದ ಉಂಟಾಗುತ್ತಿರುವ ಭೂಕಂಪನದಿಂದ ಭಯಗೊಂಡಿರುವ ಮರ್ಕಂಜ ಗ್ರಾಮಸ್ಥರು ಇದಕ್ಕೆ ಗಣಿಗಾರಿಕೆಯ ಪ್ರಭಾವ ಕೂಡ ಇದೆಯೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಗಣಿ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಹಾಗಾಗಿ ಅದರ ವರದಿ ಬರುವ ತನಕ ಗಣಿಯನ್ನು ಬಂದ್ ಮಾಡಿಸುವಂತೆ ಗ್ರಾಮಸ್ಥರು ಪ್ರತಿಭಟನೆಯ ನಡೆಸಿದ್ದರು. ಈ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಜೆ, ಜಿಲ್ಲಾ ಸಂಚಾಲಕ ಪರಮೇಶ್ವರ್ ಕೆಮಿಂಜೆ ಮತ್ತು ಅಲೇಟಿ ಘಟಕ ಅಧ್ಯಕ್ಷ ಆನಂದ ರಂಗತಮಳೆಯವರು ಕೂಡ ಸಾಥ್ ನೀಡಿದ್ದರು.

Ad Widget . Ad Widget .

ಈ ವೇಳೆ ಮಾಹಿತಿ ತಿಳಿದು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಮರ್ಕಂಜ ಗ್ರಾ.ಪಂ ಪಿಡಿಓ ಹಾಗು ಅಧ್ಯಕ್ಷರು ಬಂದು ಪ್ರತಿಭಟನಾಕಾರರ ಮನವಿಯಂತೆ ತಾತ್ಕಾಲಿಕವಾಗಿ ಬಂದ್ ಮಾಡಿಸುವಂತೆ ಭರವಸೆ ನೀಡಿದ್ದಾರೆ.

ಅದರಂತೆ ಜು.2 ರಿಂದ ಗಣಿಗಾರಿಕೆಯಲ್ಲಿ ಯಾವುದೆ ಕೆಲಸ ನಿರ್ವಹಿಸದೆ ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Your email address will not be published. Required fields are marked *