June 2022

ನಾಳೆ(ಜೂ.27)ಯಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ|

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ಜೂನ್ 27ರ ಸೋಮವಾರದಿಂದ ಜುಲೈ 4ರವರೆಗೆ ನಡೆಯಲಿದ್ದು, ಈ ಬಾರಿ 94649 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ವಹಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಅಳವಡಿಸಿಕೊಂಡಿದ್ದ ಮಾರ್ಗಸೂಚಿಯನ್ನೇ ಪೂರಕ […]

ನಾಳೆ(ಜೂ.27)ಯಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ| Read More »

ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ ಆಡಳಿತ ಸಮಿತಿ ಸಾಮಾನ್ಯ ಸಭೆ

ಸಮಗ್ರ ನ್ಯೂಸ್: ಅರೆಭಾಷೆ ಸಾಂಸ್ಕೃತಿಕ ಕ್ಷೇತ್ರದ ಪ್ರಗತಿ ಮತ್ತು ಭಾಷಾ ಬೆಳವಣಿಗೆಗೆ ಕಲಾವಿದರ ಕೊಡುಗೆ ಅಪಾರ, ಇತ್ತೀಚಿನ ದಿನಗಳಲ್ಲಿ ಅರೆಭಾಷೆ ರಂಗಭೂಮಿ ಮತ್ತು ಸಿನಿಮಾ ರಂಗ ಶ್ರೀಮಂತಿಕೆಯನ್ನು ಕಂಡು ಕೊಳ್ಳುತಿದ್ದು ಅರೆಭಾಷೆಯ ಗೌರವ ಮತ್ತು ಹಿರಿಮೆಯನ್ನು ಇಮ್ಮಡಿ ಗೊಳಿಸುತ್ತಿದೆ. ಅರೆಭಾಷೆ ಕಲಾವಿದರ ಒಗ್ಗಟ್ಟು ಮತ್ತು ಅರೆಭಾಷೆ ಕಲಾ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ ಇದರ ಆಡಳಿತ ಮಂಡಳಿಯ ಸಾಮಾನ್ಯ ಸಭೆ ದಿನಾಂಕ 25 ಜೂನ್ 2022 ಶನಿವಾರ ಸಮಯ ಬೆಳಿಗ್ಗೆ 10

ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ ಆಡಳಿತ ಸಮಿತಿ ಸಾಮಾನ್ಯ ಸಭೆ Read More »

ಚುರುಕಾದ ನೈಋತ್ಯ ಮುಂಗಾರು| ಕರಾವಳಿ ಸೇರಿದಂತೆ ರಾಜ್ಯದಲ್ಲಿ ಇನ್ನೆರಡು ದಿನ ವರುಣಾರ್ಭಟ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ನೈಋತ್ಯ ಮುಂಗಾರು ಮಳೆ ಚುರುಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಬೀದರ್‌, ಕೊಪ್ಪಳ, ಹಾವೇರಿ ಧಾರವಾಡ ಜಿಲ್ಲೆಯಲ್ಲಿಯೂ ಮಳೆ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಉತ್ತರ ಕರ್ನಾಟಕ ಭಾಗದಲ್ಲಿ ಯೆಲ್ಲೋ ಅಲರ್ಟ್‌

ಚುರುಕಾದ ನೈಋತ್ಯ ಮುಂಗಾರು| ಕರಾವಳಿ ಸೇರಿದಂತೆ ರಾಜ್ಯದಲ್ಲಿ ಇನ್ನೆರಡು ದಿನ ವರುಣಾರ್ಭಟ Read More »

ಕುಂದಾಪುರ: ಲಾರಿ ಡಿಕ್ಕಿ ಹೊಡೆದ ಬೈಕ್ |ಐಟಿಐ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್ : ಕುಂದಾಪುರ ಸಮೀಪದ ಹೊಸಂಗಡಿ ಕೆರೆಕಟ್ಟೆ ಬಳಿ ಶುಕ್ರವಾರ ಸಂಜೆ ಬೈಕ್‌ಗೆ ಗ್ಯಾಸ್‌ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಮೃತರನ್ನು ಬೈಕ್‌ ಹಿಂಬದಿ ಸವಾರ, ಗಂಗನಾಡು ಕ್ಯಾತ್ತೂರು ನಿವಾಸಿ ಸೃಜನ್ ನಾಗರಾಜ ಮರಾಠಿ(19) ಎಂದು ಗುರುತಿಸಲಾಗಿದ್ದು, ಬೈಕ್‌ ಸವಾರ ದಿವಾಕರ ನಾಯ್ಕ (19) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೃಜನ್ ಗಂಗನಾಡಿಂದ ಹೊಸಂಗಡಿ ಅಜ್ಜಿ ಮನೆಗೆ ಬಂದಿದ್ದು, ಸಂಬಂಧಿ ದಿನಕರ ಜತೆ ಬೈಕಲ್ಲಿ ತೆರಳುತ್ತಿರುವಾಗ ಲಾರಿ ಬೈಕಿಗೆ ಡಿಕ್ಕಿ

ಕುಂದಾಪುರ: ಲಾರಿ ಡಿಕ್ಕಿ ಹೊಡೆದ ಬೈಕ್ |ಐಟಿಐ ವಿದ್ಯಾರ್ಥಿ ಸಾವು Read More »

ಮಂಗಳೂರು: ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತನ..!!

ಸಮಗ್ರ ನ್ಯೂಸ್: ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತನವಾಗಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ. ಕಂಪನಿಯೊಂದು ಸ್ಥಾಪಿಸಿದ್ದ ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತನವಾಗಿದೆ ಎಂದು ಆ ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಕಂಪನಿಯು ಕಸಬಾ ಬಜಾರ್ ಬಳಿಯ ಸೈಟ್‌ನಲ್ಲಿ ಏಪ್ರಿಲ್ 6, 2009 ರಂದು ಟವರ್ ಅನ್ನು ಸ್ಥಾಪಿಸಿತ್ತು. ಕಂಪನಿಯ ತಂತ್ರಜ್ಞರು ಮೇ 31, 2021 ರಂದು ಸ್ಥಳಕ್ಕೆ ಭೇಟಿ ನೀಡಿದಾಗ, ಟವರ್ ಕಾಣೆಯಾಗಿತ್ತು. ನಾಪತ್ತೆಯಾಗಿರುವ ಗೋಪುರದ ಬೆಲೆ 22.45

ಮಂಗಳೂರು: ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತನ..!! Read More »

ನಾವು ಶಿಕ್ಷಣ ನಿಷ್ಠರಾಗಿ ಪರಿಷ್ಕರಣೆ ಮಾಡಿದ್ದೇವೆ, ಕಮ್ಯೂನಿಸ್ಟರಾಗಿ‌ ಅಲ್ಲ; ಟೀಕೆ ಮಾಡುವುದು ಬಿಟ್ಟು ಮಾತುಕತೆಗೆ ಬರಲಿ| ಸಚಿವರ ಆರೋಪಗಳಿಗೆ ತಿರುಗೇಟು ನೀಡಿದ ಬರಗೂರು|

ಸಮಗ್ರ ನ್ಯೂಸ್: ಕಮ್ಯುನಿಸ್ಟರಾಗಿ ನಾವು ಪಠ್ಯ ಪರಿಷ್ಕರಣೆ ಮಾ‌ಡಲಿಲ್ಲ. ಶಿಕ್ಷಣ ನಿಷ್ಠರಾಗಿ ಮಾಡಿದೆವು. ಪಠ್ಯ ಪರಿಷ್ಕರಣೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೇವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ವಿವರವಾದ ಪತ್ರಿಕಾ ಹೇಳಿಕೆ ಮೂಲಕ ಸರ್ಕಾರದ ನಾಲ್ವರು ಸಚಿವರುಗಳು ಈ ಹಿಂದೆ ಮಾಡಿದ್ದ ಪ್ರತಿ ಆರೋಪಕ್ಕೂ ಅವರು ವಿವರಣೆಗಳ ಮೂಲಕ ತಿರುಗೇಟು ನೀಡಿದ್ದಾರೆ. ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ

ನಾವು ಶಿಕ್ಷಣ ನಿಷ್ಠರಾಗಿ ಪರಿಷ್ಕರಣೆ ಮಾಡಿದ್ದೇವೆ, ಕಮ್ಯೂನಿಸ್ಟರಾಗಿ‌ ಅಲ್ಲ; ಟೀಕೆ ಮಾಡುವುದು ಬಿಟ್ಟು ಮಾತುಕತೆಗೆ ಬರಲಿ| ಸಚಿವರ ಆರೋಪಗಳಿಗೆ ತಿರುಗೇಟು ನೀಡಿದ ಬರಗೂರು| Read More »

ಶ್ರೀರಂಗಪಟ್ಟಣ: ಮಗನಿಗೆ ಪಿಎಸ್ಐ ಕೆಲಸ ಕೊಡಿಸಲು 38ಲಕ್ಷ ಕಳೆದುಕೊಂಡ ತಂದೆ| ವಿಜಯೇಂದ್ರನ ಆಪ್ತನೆಂಬ ಸೋಗಿನಲ್ಲಿ ಹಣ ಪಡೆದು ಪಂಗನಾಮ|

ಸಮಗ್ರ ನ್ಯೂಸ್: ತನ್ನ ಮಗನಿಗೆ ಪಿಎಸ್‌ಐ ಕೆಲಸ ಕೊಡಿಸುವ ಆಸೆಗೆ ಬಿದ್ದ ರೈತನೊಬ್ಬ 38 ಲಕ್ಷ ರೂ. ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ನಿವಾಸಿ ನಿಂಗರಾಜು ಮೋಸ ಹೋದ ರೈತ.ಕೋಲಾರ ಮೂಲದ ಮಂಜುನಾಥ್ ಅಲಿಯಾಸ್ ಅಕ್ಷಯ್ ಎಂಬುವನ ವಿರುದ್ಧ ಮೋಸಹೋದ ರೈತ ನಿಂಗರಾಜು ವಂಚನೆ ಆರೋಪದ ಮೇಲೆ ಮಂಡ್ಯ ಎಸ್ಪಿಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ. ನಿಂಗರಾಜು ಮಗ ಅರುಣ್ ಕುಮಾರ್

ಶ್ರೀರಂಗಪಟ್ಟಣ: ಮಗನಿಗೆ ಪಿಎಸ್ಐ ಕೆಲಸ ಕೊಡಿಸಲು 38ಲಕ್ಷ ಕಳೆದುಕೊಂಡ ತಂದೆ| ವಿಜಯೇಂದ್ರನ ಆಪ್ತನೆಂಬ ಸೋಗಿನಲ್ಲಿ ಹಣ ಪಡೆದು ಪಂಗನಾಮ| Read More »

ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ರವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸನಾ ಪತ್ರ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಅಭಿಯೋಜಕ ಅಧಿಕಾರಿಗಳ ಸಮನ್ವಯ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಶಂಸನಾ ಪತ್ರ ವನ್ನು ನೀಡಿ ಗೌರವಿಸಲಾಗಿದೆ. ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ ರವರು ಜನಾರ್ಧನ್ ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳ ಸರ್ಕಾರಿ ಅಭಿಯೋಜಕರು, ಸಹಾಯಕ

ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ರವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸನಾ ಪತ್ರ Read More »

ಸುಳ್ಯ: ಹಲವು ಕಡೆಗಳಲ್ಲಿ ಭೂಕಂಪನ!; ಆತಂಕಗೊಂಡ ಜನತೆ

ಸಮಗ್ರ ನ್ಯೂಸ್: ಮಡಿಕೇರಿ ತಾಲೂಕಿನ ಪೆರಾಜೆ ಹಾಗೂ ಸುಳ್ಯ ಅಡ್ತಲೆ ಭಾಗದಲ್ಲಿ ಭೂಮಿ ಕಂಪಿಸಿದ ಘಟನೆ ಇಂದು ಬೆಳಿಗ್ಗೆ 9.10 ವೇಳೆ ನಡೆದಿದೆ. ಪೆರಾಜೆ, ಅಡ್ತಲೆ ಸೇರಿದಂತೆ ಹಲವು ಕಡೆಗಳಲ್ಲಿ 45 ಸೆಕೆಂಡು ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಮೂಲಗಳ ಮಾಹಿತಿ ಲಭಿಸಿದೆ. ಇನ್ನು ತಾಲೂಕಿನ, ಸಂಪಾಜೆ, ಕೊಯನಾಡು, ಐವರ್ನಾಡು, ಪೇರಾಲು, ಮಂಡೆಕೋಲು ಭಾಗಗಳಲ್ಲಿ ಭೂಕಂಪವಾಗಿದ್ದು, ಹಲವು ಕಡೆಗಳಲ್ಲಿ ಮನೆ ಗೋಡೆ ಬಿರುಕು ಬಿಟ್ಟಿದೆ. ಕಳೆದ ಕೆಲದಿನಗಳ ಹಿಂದೆ ಮಡಿಕೇರಿ, ಹಾಸನ ಜಿಲ್ಲೆಗಳಲ್ಲಿ ಭೂಕಂಪನವಾಗಿದ್ದು ಇದರ

ಸುಳ್ಯ: ಹಲವು ಕಡೆಗಳಲ್ಲಿ ಭೂಕಂಪನ!; ಆತಂಕಗೊಂಡ ಜನತೆ Read More »

ಸುಳ್ಯ: “ನನ್ನ ಅಣ್ಣನನ್ನು ಹುಡುಕಿಕೊಡಿ”| ಪೊಲೀಸ್ ಠಾಣೆ ಮೆಟ್ಟಿಲೇರಿದ ತಮ್ಮ

ಸಮಗ್ರ ನ್ಯೂಸ್: ಮೂರು ತಿಂಗಳಿಂದ ನಾಪತ್ತೆಯಾಗಿರುವ ತನ್ನ ಅಣ್ಣನನ್ನು ಹುಡುಕಿಕೊಡಿ ಎಂದು ಸುಳ್ಯದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಉಬರಡ್ಕ ನಿವಾಸಿಯಾಗಿರುವ ಪ್ರವೀಣ್ ಕ್ರಾಸ್ತಾ ಎಂಬವರು ನನ್ನ ಸಹೋದರ ನವೀನ್ ಕ್ರಾಸ್ತಾ ಮೂರು ತಿಂಗಳಿಂದ ನಾಪತ್ತೆಯಾಗಿದ್ದಾರೆ ಎಂದು ನೀಡಿದ್ದಾರೆ. ಮಾರ್ಚ್ 3 ರಂದು ರಾತ್ರಿ ಊಟ ಮಾಡಿ ಮಲಗಿದ್ದರು. ಮಾರ್ಚ್ 4 ರಂದು ಬೆಳಗ್ಗೆ ಎಂದು ನೋಡಿದಾಗ ನಾಪತ್ತೆಯಾಗಿದ್ದಾರೆ. ಕುಡಿತದ ಚಟವಿದ್ದ ನವೀನ್ ಇದೇ ರೀತಿ ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸ್ವಲ್ಪ

ಸುಳ್ಯ: “ನನ್ನ ಅಣ್ಣನನ್ನು ಹುಡುಕಿಕೊಡಿ”| ಪೊಲೀಸ್ ಠಾಣೆ ಮೆಟ್ಟಿಲೇರಿದ ತಮ್ಮ Read More »