June 2022

ಕೋವಿಡ್ ಕೇಸ್ ಹೆಚ್ಚಳ; ಮಾಸ್ಕ್ ಧರಿಸದಿದ್ದರೆ ದಂಡ ಫಿಕ್ಸ್

ಬೆಂಗಳೂರು : ಇದೀಗ ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆ ನಡೆಸಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದರು ಮತ್ತು ಮಾಸ್ಕ್ ಧರಿಸದವರಿಗೆ ಸರ್ಕಾರಿ ಸಂಸ್ಥೆಗಳನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿದರು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, […]

ಕೋವಿಡ್ ಕೇಸ್ ಹೆಚ್ಚಳ; ಮಾಸ್ಕ್ ಧರಿಸದಿದ್ದರೆ ದಂಡ ಫಿಕ್ಸ್ Read More »

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ

ಬೆಂಗಳೂರು: ನಗರದ ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಪೂರ್ಣ ದರ್ಗಾ ಹೊತ್ತಿ ಉರಿದಿದೆ. ಫ್ರೇಜರ್​ ಟೌನ್ ಬಳಿಯ ಟ್ಯಾನಿ ರಸ್ತೆಯಲ್ಲಿರುವ ಮಸ್ತಾನಿ ದರ್ಗಾದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡುತ್ತಿದ್ದಂತೆ ದರ್ಗಾ ಹೊತ್ತಿ ಉರಿದಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ Read More »

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ

ಬಂಟ್ವಾಳ: ತಾಲೂಕಿನ ಸಜೀಪನಡುವಿನ ಲಕ್ಷ್ಮಣಕಟ್ಟೆ ಎಂಬಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯ ಅಶ್ವತ್ಥ ಮರ ಉರುಳಿಬಿದ್ದಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಲುಕ್ಮಾನ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರನ್ನು ಮರದ ಬಳಿ ನಿಲ್ಲಿಸಿ ಕಾರಿನೊಳಗಿದ್ದ ತನ್ನ ಸಂಬಂಧಿ ಮಹಿಳೆಯರಿಬ್ಬರನ್ನು ಇಳಿಸಿ ತಾನೂ ಇಳಿಯಲು ಹೊರಟಾಗ ಈ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ Read More »

ಬೈಕ್ ನಲ್ಲಿ ಸಂಡೆ ಜಾಲಿ ರೈಡ್ ಯುವಕ ಅಪಘಾತ ದಲ್ಲಿ ಸಾವು

ಸಮಗ್ರ ನ್ಯೂಸ್:  ಜಾಲಿ ರೈಡ್​ ಹೊರಟಿದ್ದ ಬೈಕ್​ ರೈಡರ್​ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯೊಂದು ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ನಡೆದಿದೆ. ಬೆಂಗಳೂರಿನ ಬನಶಂಕರಿ ನಿವಾಸಿ ಸೂರಜ್ (27) ಮೃತ ದುರ್ದೈವಿ. ಸೂರಜ್ ಬೆಂಗಳೂರಿನಿಂದ ರೈಡ್ ಹೊರಟಿದ್ದು, ಗವಿಮಠ ಬಳಿ ಬರುತ್ತಿದ್ದಂತೆ ಬೈಕ್​ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ. ನಂತರ ನಿಯಂತ್ರಣ ತಪ್ಪಿ ಬೈಕ್​ ಸೇತುವೆಯಿಂದ ಕೆಳಗೆ ಬಿದ್ದಿದೆ. ರೈಡರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್ ನಲ್ಲಿ ಸಂಡೆ ಜಾಲಿ ರೈಡ್ ಯುವಕ ಅಪಘಾತ ದಲ್ಲಿ ಸಾವು Read More »

ಪತ್ರಕರ್ತ ಹೇಮಂತ್ ಸಂಪಾಜೆಗೆ ‘ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ’ ರಾಜ್ಯ ಪ್ರಶಸ್ತಿ ಪ್ರಧಾನ

ಸಮಗ್ರ ನ್ಯೂಸ್: ಭಾರತೀಯ ಸೇನೆಯ ಮೊದಲ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಹೆಸರಿನಲ್ಲಿ ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಲ ಕೊಡಮಾಡಲಾದ ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ರಾಜ್ಯ ಪ್ರಶಸ್ತಿಯನ್ನು ಪತ್ರಕರ್ತ ಹೇಮಂತ್ ಸಂಪಾಜೆಗೆ ಮೈಸೂರಿನಲ್ಲಿ ಶನಿವಾರ ಪ್ರದಾನ ಮಾಡಲಾಯಿತು. ಮಾಜಿ ಸೈನಿಕ ಹಾಲಿ ಶಾಸಕ ಸಿ.ಎನ್.ಮಂಜೇಗೌಡ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ವೇಳೆ ಹೇಮಂತ್ ಸಂಪಾಜೆಯವರನ್ನು ಅಭಿನಂದಿಸಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ ಎನ್ .ಕೆ.ಶಿವಣ್ಣ,

ಪತ್ರಕರ್ತ ಹೇಮಂತ್ ಸಂಪಾಜೆಗೆ ‘ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ’ ರಾಜ್ಯ ಪ್ರಶಸ್ತಿ ಪ್ರಧಾನ Read More »

ಮೂಲ್ಕಿ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ| ಓರ್ವ ವಿದ್ಯಾರ್ಥಿ ದುರ್ಮರಣ, ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ರಾತ್ರಿ ಮೂಲ್ಕಿಯಲ್ಲಿ ಸಂಭವಿಸಿದೆ. ಮನೀಷ್ ಮೃತ ವಿದ್ಯಾರ್ಥಿಯಾಗಿದ್ದು, ಕೊಲಕಾಡಿ ನಿವಾಸಿಯಾಗಿದ್ದು, ಮೂಲ್ಕಿಯ ಖಾಸಗಿ ಕಾಲೇಜ್ ಒಂದರಲ್ಲಿ ಅಂತಿಮ ಬಿಸಿಎ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಇನ್ನೊಂದು ಬೈಕ್ ನಲ್ಲಿದ್ದ ಅದೇ ಕಾಲೇಜಿನ ದೀಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಮನೀಷ್ ದೀಕ್ಷಿತ್ ಕಾಲು ತುಂಡಾಗಿ, ತಲೆಗೆ ಗಂಭೀರ

ಮೂಲ್ಕಿ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ| ಓರ್ವ ವಿದ್ಯಾರ್ಥಿ ದುರ್ಮರಣ, ಮತ್ತೊಬ್ಬ ಗಂಭೀರ Read More »

ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ನಾಲೆಗೆ ಬಿದ್ದು 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೋಕಾಕ್‍ನಿಂದ ಬೆಳಗಾವಿಗೆ ಬೆಳಗ್ಗೆ 7.30ರ ಸಮಯದಲ್ಲಿ ಬರುತ್ತಿದ್ದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆ ಬಳಿ ಪಲ್ಟಿಯಾಗಿ ಉರುಳಿಬಿದ್ದಿದೆ. ಈ ವೇಳೆ ಕ್ರೂಸರ್‍ನಲ್ಲಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 18 ಮಂದಿ ರೈಲುಹಳಿ ಜೋಡಣೆ ಕೆಲಸಕ್ಕೆಂದು ಅಕ್ಕತಂಗಿಯರ ಹಾಳದಿಂದ ಬಳ್ಳಾರಿಗೆ

ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು Read More »

ಕುಮಟಾ ಬೀಚ್ ನಲ್ಲಿ ನಾಲ್ವರು ನೀರು ಪಾಲು; ಇಬ್ಬರ ಶವ ಪತ್ತೆ

ಸಮಗ್ರ ನ್ಯೂಸ್: ಸಮುದ್ರಕ್ಕಿಳಿದ ನಾಲ್ವರು ಪ್ರವಾಸಿಗರು, ಅಲೆಗಳ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದಲ್ಲಿ ಶನಿವಾರ ನಡೆದಿದೆ. ಸಮುದ್ರ ಪಾಲಾದವರ ಪೈಕಿ ಇಬ್ಬರ ಮೃತದೇಹಗಳು ಸಿಕ್ಕಿದ್ದು, ಇನ್ನಿಬ್ಬರಿಗೆ ಹುಡುಕಾಟ ಮುಂದುವರಿದಿದೆ. ಮೃತರನ್ನು ಬೆಂಗಳೂರಿನ ಕಸ್ತೂರಬಾ ನಗರದ ಅರ್ಜುನ್ (23) ಹಾಗೂ ಪೀಣ್ಯದ ಚೈತ್ರಶ್ರೀ (27) ಎಂದು ಗುರುತಿಸಲಾಗಿದೆ. ರಾಜಾಜಿನಗರದ ತೇಜಸ್.ಡಿ (22) ಹಾಗೂ ಕನಕಪುರ ರಸ್ತೆಯ ಕಿರಣಕುಮಾರ (27) ಎಂಬುವವರಿಗೆ ಶೋಧ ಕಾರ್ಯ ಮಾಡಲಾಗುತ್ತಿದೆ. ಅವರು ಬೆಂಗಳೂರಿನ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ

ಕುಮಟಾ ಬೀಚ್ ನಲ್ಲಿ ನಾಲ್ವರು ನೀರು ಪಾಲು; ಇಬ್ಬರ ಶವ ಪತ್ತೆ Read More »

ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಕಡ್ಡಾಯ – ಕಸಾಪ ಅಧ್ಯಕ್ಷ ಮಹೇಶ್ ಜೋಶಿ

ಸಮಗ್ರ ನ್ಯೂಸ್: ಸರ್ಕಾರಿ ಶಾಲಾ ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆಡಳಿತಾತ್ಮಕ ಆದೇಶವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದ್ದಾರೆ. ಕನ್ನಡ ಶಾಲೆಗಳ ಸ್ಥಿತಿ ದುಸ್ಥಿತಿಗೆ ತಲುಪಿವೆ. ಇದೇ ರೀತಿ ಮುಂದುವರಿದರೆ 10 ವರ್ಷದಲ್ಲಿ ಕನ್ನಡ ಉಳಿಯುವುದಿಲ್ಲ. ಕನ್ನಡ ಸಂಘಟನೆಗಳು, ಕಸಾಪ ಯಾವುದೂ ಇರುವುದಿಲ್ಲ. ಕನ್ನಡ ಮಾಧ್ಯಮ ಕಡ್ಡಾಯ ವಿಚಾರವಾಗಿ ಸಾಹಿತಿ ಎಸ್. ಎಲ್. ಭೈರಪ್ಪ ನೇತೃತ್ವದ ಸಮಿತಿ ರಚಿಸಲಾಗಿದೆ. ಶಿಕ್ಷಕರು ಜನರ

ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಕಡ್ಡಾಯ – ಕಸಾಪ ಅಧ್ಯಕ್ಷ ಮಹೇಶ್ ಜೋಶಿ Read More »

ಕರಾಮುವಿಯಲ್ಲಿ ಏಕಕಾಲಕ್ಕೆ ದ್ವಿಪದವಿ ಪಡೆಯುವ ಅವಕಾಶ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇದೇ ಪ್ರಥಮ ಬಾರಿಗೆ ಯುಜಿಸಿ ನಿಯಮಾವಳಿಯಂತೆ ಏಕಕಾಲಕ್ಕೆ ದ್ವಿಪದವಿ ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ. ಮುಕ್ತ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಯಾವುದೇ ಪದವಿಯನ್ನು ಅಧ್ಯಯನ ಮಾಡುತ್ತಲೇ ಮತ್ತೊಂದು ಪದವಿ ಪಡೆಯುವಂತೆ ಯುಜಿಸಿ ಅನುಕೂಲ ಮಾಡಿ ಕೊಟ್ಟಿದೆ. ಬಿಎ, ಬಿ.ಕಾಂ, ಬಿಎಸ್ಸಿ ಪದವಿಯನ್ನು ಪ್ರತ್ಯೇಕವಾಗಿ ವ್ಯಾಸಂಗ ಮಾಡುತ್ತಿರುವವರು ಜೊತೆಯಲ್ಲೇ ಇನ್ನೊಂದು ಪದವಿಯನ್ನೂ ಅಧ್ಯಯನ ಮಾಡಬಹುದು. ಯಾವುದೇ ಸ್ನಾತಕೋತ್ತರ ಪದವಿ ಪಡೆಯುತ್ತಲೇ

ಕರಾಮುವಿಯಲ್ಲಿ ಏಕಕಾಲಕ್ಕೆ ದ್ವಿಪದವಿ ಪಡೆಯುವ ಅವಕಾಶ Read More »