June 2022

“ನಳಿನ್ ಕುಮಾರ್ ಓರ್ವ ಬೆಸ್ಟ್ ಕಾಮಿಡಿಯನ್, ಡಾಲರ್, ಮರಳಿನ ರೇಟ್ ಕಡಿಮೆ ಮಾಡಿ ಸಕ್ಸಸ್ ಆಗಿದ್ದಾರೆ” – ರಮಾನಾಥ ರೈ

ಸಮಗ್ರ ನ್ಯೂಸ್: ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ನಾಯಕರ ಮಕ್ಕಳನ್ನು ಕೇಳಿಲ್ಲ ಎಂದಿದ್ದ ನಳಿನ್ ಕುಮಾರ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ರಮಾನಾಥ ರೈ, ನಳಿನ್ ಒಬ್ಬ ಹಾಸ್ಯಗಾರ, ಅವರ ಹೇಳಿಕೆಯನ್ನು ಗಂಭೀರ ಪರಿಗಣಿಸಲ್ಲ.‌ ಡಾಲರ್ ರೇಟ್, ಹೊಯ್ಗೆ ದರದ ಬಗ್ಗೆ ಹೇಳಿ ಜನರ ನಡುವೆ ನಗೆಪಾಟಲಿಗೆ ಈಡಾಗಿದ್ದಾರೆ. ಕಾಂಗ್ರೆಸ್ ಮಕ್ಕಳ ವಿಚಾರ ಅಲ್ಲ, ನಾವು ದೇಶದ ಮಕ್ಕಳ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ದೇಶಕ್ಕಾಗಿ ಹೋರಾಡಿದ […]

“ನಳಿನ್ ಕುಮಾರ್ ಓರ್ವ ಬೆಸ್ಟ್ ಕಾಮಿಡಿಯನ್, ಡಾಲರ್, ಮರಳಿನ ರೇಟ್ ಕಡಿಮೆ ಮಾಡಿ ಸಕ್ಸಸ್ ಆಗಿದ್ದಾರೆ” – ರಮಾನಾಥ ರೈ Read More »

ಚುಚ್ಚುಮದ್ದು ನೀಡಿ 14 ಮಕ್ಕಳಿಗೆ ಅಡ್ಡ ಪರಿಣಾಮ

ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಚುಚ್ಚುಮದ್ದು ನಿಂದ 14 ಮಕ್ಕಳಿಗೆ ಅಡ್ಡ ಪರಿಣಾಮ ಬೀರಿದ ಘಟನೆಯೊಂದು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಮಕ್ಕಳಿಗೆ ಆಂಟಿಬಯಾಟಿಕ್ ಇಂಜೆಕ್ಷನ್ ನೀಡಲಾಗಿತ್ತು. ನಿನ್ನೆ ತಡರಾತ್ರಿ ಏಕಾಎಕಿ ಅಡ್ಡ ಪರಿಣಾಮ ಉಂಟಾಗಿದ್ದು, ನಾಲ್ಕು ಮಕ್ಕಳಿಗೆ ತೀವ್ರ ಜ್ವರ ಹಾಗೂ ಇನ್ನೂ ನಾಲ್ಕು ಮಕ್ಕಳ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಒಟ್ಟು 14 ಮಕ್ಕಳನ್ನು ಕೂಡಲೇ ಮೆಗ್ಗಾನ್ ಸೇರಿದಂತೆ ನಗರದ ವಿವಿಧ​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆ, ಶಿವಮೊಗ್ಗದ

ಚುಚ್ಚುಮದ್ದು ನೀಡಿ 14 ಮಕ್ಕಳಿಗೆ ಅಡ್ಡ ಪರಿಣಾಮ Read More »

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ 4ನೇ ಬಾರಿಗೆ ಆಯ್ಕೆ

ಬೆಂಗಳೂರು : ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಭಾನುವಾರದಂದು ಚುನಾಯಿತರಾಗಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಬಿ.ಎಲ್.ಶಂಕರ್ ಅವರು ಒಟ್ಟು 122 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಪ್ರೊ.ಕೆ.ಇ.ರಾಧಾಕೃಷ್ಣ ಕೇವಲ 20 ಮತಗಳನ್ನು ಪಡೆದರು. ಬಹುಮತ ಪಡೆಯುವ ಮೂಲಕ ಬಿ.ಎಲ್.ಶಂಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ 4ನೇ ಬಾರಿಗೆ ಆಯ್ಕೆ Read More »

ಗೆಳೆಯರ ಜೊತೆ ಸೇರಿ ಪತ್ನಿಯನ್ನೇ ಸಾಮೂಹಿಕ ಅತ್ಯಾಚಾರ ಮಾಡಿದ ಭೂಪ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ 17 ವರ್ಷದ ಬಾಲಕಿಯನ್ನು ಬೆದರಿಸಿ ಮದುವೆಯಾಗಿದ್ದ ವ್ಯಕ್ತಿ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮದುವೆಯಾದ ನಂತರ ಪತ್ನಿಯ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ ಆರೋಪಿ, ಜೂನ್ 7 ರಂದು ಚಿತ್ರದುರ್ಗ ಹೊರವಲಯಕ್ಕೆ ಕರೆದೊಯ್ದು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಹಲ್ಲೆ ನಡೆಸಿ,

ಗೆಳೆಯರ ಜೊತೆ ಸೇರಿ ಪತ್ನಿಯನ್ನೇ ಸಾಮೂಹಿಕ ಅತ್ಯಾಚಾರ ಮಾಡಿದ ಭೂಪ Read More »

ಜೆಡಿಎಸ್ ನ ಮತ್ತೊಂದು ಪ್ರಬಲ ವಿಕೆಟ್ ಪತನ!!?

ಸಮಗ್ರ ನ್ಯೂಸ್: ಜೆಡಿಎಸ್‌ ಪಕ್ಷದ ವಾಟ್ಸಾಪ್‌ ಗ್ರೂಪ್‌ನಿಂದ ಶಿವಲಿಂಗೇಗೌಡ ಎಕ್ಸಿಟ್‌ ಆಗಿದ್ದು, ಅವ್ರು ಸಧ್ಯದಲ್ಲೇ ಪಕ್ಷ ತೊರೆಯಲಿದ್ದಾರೆ ಎಂಬ ಗುಸುಗುಸು ಕೇಳಿ ಬರ್ತಿದೆ. ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕರಾಗಿರುವ ಶಿವಲಿಂಗೇಗೌಡ ಜೆಡಿಎಸ್‌ನ ಪ್ರಮುಖ ವಾಟ್ಸಾಪ್‌ ಗ್ರೂಪ್‌ಗಳಿಂದ ಎಕ್ಸಿಟ್‌ ಆಗಿದ್ದು, ನಿನ್ನೆ ಸಂಜೆಯಿಂದ ಪಕ್ಷದ ಎಲ್ಲಾ ಗ್ರೂಪ್‌ಗಳಿಂದ ಎಕ್ಸಿಟ್‌ ಆಗುತ್ತಿದ್ದಾರೆ. ಇನ್ನು ಜೆಡಿಎಸ್‌ ನಾಯಕರ ಜೊತೆ ಶಿವಲಿಂಗೇಗೌಡ ಅಂತರ ಕಾಯ್ದುಕೊಳ್ಳುತ್ತಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಗೌಡರು ಶೀಘ್ರ ಜೆಡಿಎಸ್‌ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಜೆಡಿಎಸ್ ನ ಮತ್ತೊಂದು ಪ್ರಬಲ ವಿಕೆಟ್ ಪತನ!!? Read More »

ದೆಹಲಿಯ ಪ್ಲಾಸ್ಟಿಕ್ ಗೋದಾಮು ನಲ್ಲಿ‌ ಬೆಂಕಿ ದುರಂತ

ನವದೆಹಲಿ: ವಾಯುವ್ಯ ದೆಹಲಿಯ ಬಾದ್ಲಿ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದ್ದ ಗೋದಾಮಿನಲ್ಲಿ ಭಾನುವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ರೋಬೊಟ್ ಅನ್ನು ಬಳಸಲಾಗಿದ್ದು, ಯಾವುದೇ ಅಪಾಯ ಸಂಭವಿಸಲಿಲ್ಲ. ಈ ವೇಳೆ ಸ್ಥಳಕ್ಕೆ ತೆರಳಿ, 36 ಅಗ್ನಿಶಾಮಕದಳದ ವಾಹನಗಳ ಸಿಬ್ಬಂದಿ ಮತ್ತು ರೊಬೋಟ್ ಅನ್ನು ಬಳಸಿ ಬೆಂಕಿ ನಿಯಂತ್ರಿಸಲಾಯಿತು’ ಎಂದು ತಿಳಿಸಿದರು.

ದೆಹಲಿಯ ಪ್ಲಾಸ್ಟಿಕ್ ಗೋದಾಮು ನಲ್ಲಿ‌ ಬೆಂಕಿ ದುರಂತ Read More »

ಆನ್ಲೈನ್ ಕ್ಲಾಸ್ನಲ್ಲಿ ಹೋಂ ವರ್ಕ್ ಬದಲು ಸೆಕ್ಸ್ ವಿಡಿಯೋ ಕಳಿಸಿದ ವಿದ್ಯಾರ್ಥಿ!!

ಸಮಗ್ರ ನ್ಯೂಸ್: ಕೊವೀಡ್ ಕಾರಣದಿಂದ ಆನ್ ಲೈನ್ ಕ್ಲಾಸ್ ಮುಗಿದಿದ್ದು ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಆದರೆ ದೆಹಲಿಯ ಕೆಲವು ಶಾಲೆಗಳಲ್ಲಿ ಆನ್ ಕ್ಲಾಸ್ ಇನ್ನೂ ಮುಂದುವರೆದಿದೆ. ಆದರೆ ಇದೇ ಆನ್ ಲೈನ್ ಕ್ಲಾಸ್ ನಿಂದ ವಿದ್ಯಾರ್ಥಿಯೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆನ್‌ಲೈನ್ ನಲ್ಲಿ ತರಗತಿ ನಡೆಸೋ ಶಿಕ್ಷಕರು, ಆನ್ ಲೈನ್ ನಲ್ಲೇ ಹೋಮ್ ವರ್ಕ್ ಕಳುಹಿಸೋಕೆ ಹೇಳ್ತಾರೆ. ಆದರೆ 6ನೇ ತರಗತಿಯ ವಿದ್ಯಾರ್ಥಿಯೋರ್ವ ಹೋಂ ವರ್ಕ್‌ ಕಳುಹಿಸುವ ಬದಲಾಗಿ ಅಶ್ಲೀಲ ವೀಡಿಯೋ ಕ್ಲಿಪ್ ಕಳುಹಿಸಿ

ಆನ್ಲೈನ್ ಕ್ಲಾಸ್ನಲ್ಲಿ ಹೋಂ ವರ್ಕ್ ಬದಲು ಸೆಕ್ಸ್ ವಿಡಿಯೋ ಕಳಿಸಿದ ವಿದ್ಯಾರ್ಥಿ!! Read More »

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು| ಫೀಲ್ಡಿಗಿಳಿದ ಠಾಕ್ರೆ ಪತ್ನಿ| ಜಡೆಗಳಿಂದ ಜಗಳ ಮುಗಿಯುವುದೇ?

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಹೊಸ ಟ್ವಿಸ್ಟ್ ಒಂದು ಹೊರಬಿದ್ದಿದೆ. ಮೂಲಗಳ ಪ್ರಕಾರ ಬಂಡಾಯ ಶಾಸಕರ ಮನವೊಲಿಸಲು ಶಿವಸೇನೆ ಶತಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಶಿವಸೇನೆಯ ಹಿರಿಯ ನಾಯಕರ ನಂತರ ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ಶಾಸಕರ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಶಾಸಕರನ್ನು ವಾಪಸ್ ಪಕ್ಷಕ್ಕೆ ಕರೆತರಲು ವಿಶೇಷ ಯೋಜನೆ ರೂಪಿಸಿದ್ದಾರೆ. ಮಾಹಿತಿ ಪ್ರಕಾರ, ಸಿಎಂ ಉದ್ಧವ್ ಠಾಕ್ರೆ ಅವರ

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು| ಫೀಲ್ಡಿಗಿಳಿದ ಠಾಕ್ರೆ ಪತ್ನಿ| ಜಡೆಗಳಿಂದ ಜಗಳ ಮುಗಿಯುವುದೇ? Read More »

ಕುಸಿದ ಟೊಮ್ಯಾಟೊ ಧಾರಣೆ| ಸಂಕಷ್ಟದಲ್ಲಿ ಬೆಳೆಗಾರ

ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳ ಹಿಂದೆ 100 ರ ಗಡಿ ದಾಟಿದ್ದ ಟೊಮೆಟೋ ಬೆಲೆ ದಿಢೀರ್‌ ಕುಸಿದಿದ್ದು ಸಗಟು ವ್ಯಾಪಾರದಲ್ಲಿ ಶನಿವಾರ ಪ್ರತಿ ಕೆ.ಜಿಗೆ 26ಕ್ಕೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಟೊಮೆಟೋ ಬೆಳೆ ನೆಲಕಚ್ಚಿದ ಪರಿಣಾಮ ಬೆಲೆಯೂ ಗಗನಕ್ಕೇರಿತ್ತು. ಇದೀಗ ಮಳೆ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ, ಬೆಂಗಳೂರು ಸುತ್ತ ಮುತ್ತ ಉತ್ತಮ ಫಸಲು ಬಂದಿರುವುದು ಹಾಗೂ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಟೊಮೆಟೋ ಪ್ರಮಾಣವೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆಯಾಗಿದೆ. ಇದರಿಂದ ಗ್ರಾಹಕರು ಖುಷಿಯಾಗಿದ್ದರೆ,

ಕುಸಿದ ಟೊಮ್ಯಾಟೊ ಧಾರಣೆ| ಸಂಕಷ್ಟದಲ್ಲಿ ಬೆಳೆಗಾರ Read More »

ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಮಹಾರಾಷ್ಟ್ರ ಬಿಕ್ಕಟ್ಟು| ತುರ್ತು ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಭವಿಷ್ಯದ ರಾಜಕೀಯ ಹೋರಾಟ ಭಾನುವಾರ ಕಾನೂನು ವಲಯಕ್ಕೆ ಹೋಗಿದ್ದು, ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರು ತಮ್ಮ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಿದ ಶಿವಸೇನೆಯ ಕ್ರಮವನ್ನು ಸರ್ವೊಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ. ಉಪಸಭಾಪತಿ ನರಹರಿ ಝಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿ ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಏಕನಾಥ್ ಶಿಂಧೆ ಬಣವು ಪ್ರಶ್ನಿಸಿದೆ

ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಮಹಾರಾಷ್ಟ್ರ ಬಿಕ್ಕಟ್ಟು| ತುರ್ತು ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ Read More »