June 2022

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿ ಶೌಚಾಲಯದಲ್ಲಿ ಮಗುಹೆತ್ತು ಪರಾರಿ

ಸಮಗ್ರ ನ್ಯೂಸ್: ಹೊಟ್ಟೆನೋವು ಎಂದು ಜಿಲ್ಲಾ ಆಸ್ಪತ್ರೆಗೆ ಬಂದ ಬಾಲಕಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಪರಾರಿಯಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಸುದ್ದಿ ಆಸ್ಪತ್ರೆಯಲ್ಲಿ ಸಂಚಲನ ಮೂಡಿಸಿದೆ. ಮಗು ಮತ್ತು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಿತಿ ಸುಧಾರಿಸಿದ ಬಳಿಕ ಬಾಲಕಿ ಯಾರಿಗೂ ತಿಳಿಸದೆ ಆಸ್ಪತ್ರೆಯಿಂದ ತೆರಳಿದ್ದಾಳೆ. ಬಾಲಕಿ ಆಸ್ಪತ್ರೆಯಲ್ಲಿ ಯಾವುದೇ ಹೆಸರು ಅಥವಾ ವಿಳಾಸ ನೋಂದಾಯಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಯ […]

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿ ಶೌಚಾಲಯದಲ್ಲಿ ಮಗುಹೆತ್ತು ಪರಾರಿ Read More »

“ಹಿಜಾಬ್ ಧರಿಸಿದವರ ಅಮಾನತು ಮಾಡೋದಾದ್ರೆ ಕೇಸರಿ ಶಾಲು ಧಾರಕರ ಅಮಾನತು ಯಾಕಿಲ್ಲ? ಪತ್ರಕರ್ತರ ಮೇಲೆ ಹಲ್ಲೆ ನಡೆಸಿಲ್ಲ, ಹೆಣ್ಮಕ್ಕಳ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ್ದೇವೆ”

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬುಧವಾರ ಹಿಜಾಬ್ ಧರಿಸಿ ಬಂದ 6 ಮಂದಿ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದು, ಈ ವಿಚಾರವಾಗಿ ಒಂದು ಕೋಮಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಯೋರ್ವರ ಮೇಲೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಲ್ಲೆಗೆ ಯತ್ನಿಸಲಾಗಿದೆ ಎನ್ನಲಾಗಿದ್ದು, ಈ ವಿಚಾರವಾಗಿ ವಿಧ್ಯಾರ್ಥಿಗಳು ಸ್ಪಷ್ಟನೆ ನೀಡಿದ್ದಾರೆ. ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳ ವಿರುದ್ಧ ಯಾವುದೇ

“ಹಿಜಾಬ್ ಧರಿಸಿದವರ ಅಮಾನತು ಮಾಡೋದಾದ್ರೆ ಕೇಸರಿ ಶಾಲು ಧಾರಕರ ಅಮಾನತು ಯಾಕಿಲ್ಲ? ಪತ್ರಕರ್ತರ ಮೇಲೆ ಹಲ್ಲೆ ನಡೆಸಿಲ್ಲ, ಹೆಣ್ಮಕ್ಕಳ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ್ದೇವೆ” Read More »

ಜು.1ರಿಂದ ಮಂಗಳೂರು-ದೆಹಲಿ ವಿಮಾನ ಸಂಚಾರ ಆರಂಭ

ಸಮಗ್ರ ನ್ಯೂಸ್: ಮಂಗಳೂರು‌ – ದೆಹಲಿ ನೇರ ವಿಮಾನ ಸಂಚಾರ ಮತ್ತೆ ಆರಂಭವಾಲಿದ್ದು, ಜುಲೈ 1 ರಿಂದ ಇಂಡಿಗೋ ವಾಯುಯಾನ ಕಂಪನಿ ತಡೆ ರಹಿತ ವಿಮಾನ ಲಭ್ಯವಿರಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರದ್ದಾಗಿದ್ದ ಮಂಗಳೂರು-ದೆಹಲಿ ನಡುವಿನ ಇಂಡಿಗೋ ನೇರ ವಿಮಾನ ಸಂಚಾರ ಜುಲೈ 1 ರಿಂದ ಮತ್ತೆ ಆರಂಭವಾಗಲಿದೆ.ಈ ವಿಮಾನವು ವಾರಕ್ಕೆ ನಾಲ್ಕು ದಿನ ಸಂಚರಿಸಲಿದ್ದು, ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ವಿಮಾನಗಳು ಲಭ್ಯವಿರುತ್ತವೆ.

ಜು.1ರಿಂದ ಮಂಗಳೂರು-ದೆಹಲಿ ವಿಮಾನ ಸಂಚಾರ ಆರಂಭ Read More »

‘ಎಲ್ ಪಿಜಿಗೆ ಇಲ್ಲ ಸಬ್ಸಿಡಿ, ಮಾರ್ಕೆಟ್ ಬೆಲೆಯಲ್ಲೇ ಗ್ಯಾಸ್ ತಗೊಳ್ಳಿ’ | ಜನಸಾಮಾನ್ಯರಿಗೆ ಶಾಕ್ ನೀಡಿದ ಮೋದಿ ಸರ್ಕಾರ

ಸಮಗ್ರ ನ್ಯೂಸ್: ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಗೃಹ ಬಳಕೆಯ ಎಲ್‍ಜಿಪಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ. ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ. ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಮಾತನಾಡಿ, ಕೋವಿಡ್ ಶುರುವಾದ ದಿನದಿಂದ ಎಲ್‍ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಕೂಡ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರ ಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮಾತ್ರ ಈಗ ಸಬ್ಸಿಡಿ ನೀಡಲಾಗುತ್ತದೆ.

‘ಎಲ್ ಪಿಜಿಗೆ ಇಲ್ಲ ಸಬ್ಸಿಡಿ, ಮಾರ್ಕೆಟ್ ಬೆಲೆಯಲ್ಲೇ ಗ್ಯಾಸ್ ತಗೊಳ್ಳಿ’ | ಜನಸಾಮಾನ್ಯರಿಗೆ ಶಾಕ್ ನೀಡಿದ ಮೋದಿ ಸರ್ಕಾರ Read More »

ಕಲಬುರಗಿ: ಗೂಡ್ಸ್ ಲಾರಿಗೆ ಖಾಸಗಿ ಬಸ್ ಡಿಕ್ಕಿ| ಹೊತ್ತಿ ಉರಿದ ಬಸ್; ನಾಲ್ವರು ಸಜೀವ ದುರ್ಮರಣ

ಸಮಗ್ರ ನ್ಯೂಸ್: ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ವೊಂದು ಹೊತ್ತಿ ಉರಿದ ಪರಿಣಾಮ ನಾಲ್ವರು ಪ್ರಯಾಣಿಕರು ಸಜೀವ ದಹನವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ಹೊರವಲಯದ ಹೆದ್ದಾರಿಯಲ್ಲಿ ಬಸ್ ವೊಂದು ಹೊತ್ತಿ ಉರಿದ ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ. ಖಾಸಗಿ ಬಸ್ ಗೋವಾ ದಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗೂಡ್ಸ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ರಭಸಕ್ಕೆ ಖಾಸಗಿ

ಕಲಬುರಗಿ: ಗೂಡ್ಸ್ ಲಾರಿಗೆ ಖಾಸಗಿ ಬಸ್ ಡಿಕ್ಕಿ| ಹೊತ್ತಿ ಉರಿದ ಬಸ್; ನಾಲ್ವರು ಸಜೀವ ದುರ್ಮರಣ Read More »

ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ – ಮೋಹನ್ ಭಾಗವತ್

ಸಮಗ್ರ ನ್ಯೂಸ್: ಕಾಶಿ ಗ್ಯಾನವಾಪಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರೆಸ್ಸೆಸ್‌ ಪಾಲ್ಗೊಂಡಿತ್ತು ನಿಜ. ಇನ್ನು ಮುಂದೆ ಇಂತಹ ಹೋರಾಟದಲ್ಲಿ ಭಾಗಿಯಲ್ಲ

ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ – ಮೋಹನ್ ಭಾಗವತ್ Read More »

ಮಂಗಳೂರು: ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 4 ಕೋಟಿ ಮೌಲ್ಯದ ರಕ್ತಚಂದನ ವಶ

ಸಮಗ್ರ ನ್ಯೂಸ್: ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಸಿಬ್ಬಂದಿ, ಮೂಡುಬಿದಿರೆ ಪ್ರಾದೇಶಿಕ ವಲಯದ ಸಿಬ್ಬಂದಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಈಚರ್ ವಾಹನದಲ್ಲಿ ಬೈಹುಲ್ಲು ಹೊದೆಸಿ ಸಾಗಿಸಲಾಗುತ್ತಿದ್ದ 8308 ಕೆಜಿ ತೂಕದ ರೂ.4.15 ಕೋಟಿ ಮೌಲ್ಯದ , ರಕ್ತಚಂದನ ಮರದ 316 ದಿಮ್ಮಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದ ನೆಲ್ಲೂರಿನ ಅಲಾಡಿ

ಮಂಗಳೂರು: ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 4 ಕೋಟಿ ಮೌಲ್ಯದ ರಕ್ತಚಂದನ ವಶ Read More »

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ

ಸಮಗ್ರ ನ್ಯೂಸ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದನ್ನು ಸಂಘದ ಮುಖಂಡರು ಖಂಡಿಸಿದ್ದಾರೆ. ಇಡಿಯು ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ವಿರುದ್ಧ ಧಮನಕಾರಿ ನೀತಿಯನ್ನು ಪ್ರಕಟಿಸುತ್ತಿದ್ದು ಅದರ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಂಡಿದೆ. ಜನಪರ ಚಳವಳಿಗಳು, ಎನ್‌ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೇ ಪ್ರಜಾಸತ್ತಾತ್ಮ ಧ್ವನಿಗಳನ್ನು ಗಮನಿಸುವ ಮೂಲಕ ಏಜೆನ್ಸಿಯು

ಇಡಿ ಯಿಂದ ಪಿಎಫ್ಐ ಬ್ಯಾಂಕ್ ಖಾತೆಗಳ ಮುಟ್ಟುಗೋಲಿಗೆ ಖಂಡನೆ Read More »

ಮೊಬೈಲ್ ಗ್ರಾಹಕರ ಜೇಬಿಗೆ ಕತ್ತರಿ ಸಾಧ್ಯತೆ| ಕರೆ ದರಗಳು ಮತ್ತೆ ದುಬಾರಿ!

ಸಮಗ್ರ ನ್ಯೂಸ್: ಹಣದುಬ್ಬರ ಏರಿಕೆಯ ನಡುವೆ ಟೆಲಿಕಾಂ ಸೇವೆಗಳು ಮತ್ತೊಮ್ಮೆ ದುಬಾರಿಯಾಗಬಹುದು. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ಸುಂಕದ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು ಚಂದಾದಾರರ ಬೇಸ್ 37 ಮಿಲಿಯನ್ ಕಡಿಮೆಯಾಗಿದೆ. ಆದರೆ, ಅವರ ಸಕ್ರಿಯ ಚಂದಾದಾರರ ಬೇಸ್ 3% ರಷ್ಟು ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಸೇವಾ ಸುಂಕಗಳಲ್ಲಿ ಮತ್ತೊಂದು ಹೆಚ್ಚಳದ ಬಗ್ಗೆ ಯೋಚಿಸಬಹುದು ಎನ್ನಲಾಗಿದೆ. CRISIL ನ ವರದಿಯ ಪ್ರಕಾರ, ಆಗಸ್ಟ್

ಮೊಬೈಲ್ ಗ್ರಾಹಕರ ಜೇಬಿಗೆ ಕತ್ತರಿ ಸಾಧ್ಯತೆ| ಕರೆ ದರಗಳು ಮತ್ತೆ ದುಬಾರಿ! Read More »

ಪುತ್ತೂರು: ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಅಮಾನತು ಪ್ರಶ್ನಿಸಿ ಪ್ರತಿಭಟನೆ| ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಯನ್ನು ಕೂಡಿ ಹಾಕಿ ವಿಕೃತಿ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಪುತ್ತೂರು ಸಮೀಪದ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ ಬೆನ್ನಲ್ಲೇ ಒಂದು ಕೋಮಿನ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ವೇಳೆ ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆಗೆ ಯತ್ನಿಸಿ, ವರದಿಗಾರರನ್ನು ಕೊಠಡಿಯೊಳಗೆ ಕೂಡಿ ಹಾಕಿ ವಿಕೃತಿ ಮೆರೆದಿದ್ದಾರೆ. ವರದಿ ಮಾಡದಂತೆ ವಿದ್ಯಾರ್ಥಿಗಳು ತಾಕೀತು ಮಾಡಿದ್ದಾರೆ. ವರದಿಗಾಗಿ ಮಾಡಿದ ವಿಡಿಯೋಗಳನ್ನು ವಿದ್ಯಾರ್ಥಿಗಳು ಬಲತ್ಕಾರವಾಗಿ

ಪುತ್ತೂರು: ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಅಮಾನತು ಪ್ರಶ್ನಿಸಿ ಪ್ರತಿಭಟನೆ| ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಯನ್ನು ಕೂಡಿ ಹಾಕಿ ವಿಕೃತಿ Read More »