June 2022

ಸುಳ್ಯ ಕಾಲೇಜು: ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ‍್ಯಾಗಾರ

ಸುಳ್ಯ: ಸ.ಪ್ರ.ದ. ಕಾಲೇಜು, ಸುಳ್ಯ ಇಲ್ಲಿ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆ ಮತ್ತು ಸ.ಪ್ರ.ದ. ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ ವತಿಯಿಂದ ““MATHS SHORT CUT TRICKS & TIPS FOR COMPETITIVE EXAMS” ” ಎಂಬ ವಿಷಯದ ಬಗ್ಗೆ ತರಬೇತಿ ಕರ‍್ಯಾಗಾರ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಸತೀಶ್ ಕುಮಾರ್ ಕೆ. ಆರ್ ವಹಿಸಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪುತ್ತೂರು ಮತ್ತು ಸುಳ್ಯ ಐಆರ್‌ಸಿಎಂಡಿ ಎಜ್ಯುಕೇಷನ್ ಸೆಂಟರ್‌ನ ಮುಖ್ಯಸ್ಥೆ ಶ್ರೀಮತಿ […]

ಸುಳ್ಯ ಕಾಲೇಜು: ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ‍್ಯಾಗಾರ Read More »

ಸುಳ್ಯ: ಅನುದಾನಿತ ಶಾಲೆಯಲ್ಲಿ ಅಕ್ಕಿ ಬದಲಾಯಿಸಿದ ಪ್ರಕರಣ| ಸ್ಪಷ್ಟನೆ ನೀಡಿದ ಶಾಲಾ ಮುಖ್ಯಸ್ಥರು

ಸಮಗ್ರ ನ್ಯೂಸ್: ಅನುದಾನಿತ ವಿದ್ಯಾಸಂಸ್ಥೆಗೆ ಸರ್ಕಾರದಿಂದ ಬಂದ ಬೆಳ್ತಿಗೆ ಅಕ್ಕಿಯನ್ನು ಕುಚ್ಚಲಕ್ಕಿ ಜೊತೆ ಬದಲಾವಣೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅಕ್ಷರ ದಾಸೋಹ ಅಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೂ. 8 ರಂದು ಬಿ.ಇ.ಒ. ಎಸ್.ಪಿ.ಮಹಾದೇವ್ ಹಾಗೂ ಅಕ್ಷರ ದಾಸೋಹ ಅಧಿಕಾರಿ ಶ್ರೀಮತಿ ವೀಣಾರವರು ಶಾಲೆಗೆ ಬಂದು ಅಕ್ಕಿ ದಾಸ್ತಾನು ಪರಿಶೀಲಿಸಿ ಸರಿಯಿದೆಯೆಂದು ಮನವರಿಕೆ ಮಾಡಿಕೊಂಡು ಹೋದರೆಂದು ತಿಳಿದು ಬಂದಿದೆ. ಬೆಳ್ತಿಗೆ ಅಕ್ಕಿಯ ಅನ್ನ

ಸುಳ್ಯ: ಅನುದಾನಿತ ಶಾಲೆಯಲ್ಲಿ ಅಕ್ಕಿ ಬದಲಾಯಿಸಿದ ಪ್ರಕರಣ| ಸ್ಪಷ್ಟನೆ ನೀಡಿದ ಶಾಲಾ ಮುಖ್ಯಸ್ಥರು Read More »

ಶಾಂತಿನಗರ ಕ್ರೀಡಾಂಗಣಕ್ಕೆ ಟಾರ್ಪಲ್ ಹೊದಿಕೆ ಸ್ಥಳ ಪರಿಶೀಲನೆ ನಡೆಸಿದ ನಿರ್ಮಿತಿ ಕೇಂದ್ರದ ಅಧಿಕಾರಿ

ಸುಳ್ಯದ ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣದ ಮಣ್ಣು ಕುಸಿಯುವ ಜಾಗಕ್ಕೆ ಟಾರ್ಪಲ್ ಹೊದಿಕೆಯನ್ನು ಹಾಕಲಾಗಿದ್ದು, ಇದರ ವೀಕ್ಷಣೆಯನ್ನು ಇಂದು ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ವೀಕ್ಷಣೆ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಸುಂದರ ಕೇನಾಜೆ, ಹಾಗೂ ನವನೀತ್ ಬೆಟ್ಟಂಪಾಡಿ ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿ ಅವರೊಂದಿಗೆ ಕ್ರೀಡಾಂಗಣಕ್ಕೆ ಹೊದಿಸಿದ ಟಾರ್ಪಲ್ ಮೇಲ್ಭಾಗದಲ್ಲಿ ವಿಸ್ತೀರ್ಣ ಕಡಿಮೆಯಾಗಿದ್ದು ಇನ್ನು ಸ್ವಲ್ಪ ಹೆಚ್ಚಿಸುವಂತೆ ಕೇಳಿಕೊಂಡರು.ಕ್ರೀಡಾಂಗಣದ ಮಣ್ಣು ತುಂಬಿರುವ ಜಾಗದ ಮೇಲ್ಭಾಗದಲ್ಲಿ ಮಳೆ ನೀರು ನಿಲ್ಲುವ ಸಾಧ್ಯತೆಯಿದ್ದು ಆ

ಶಾಂತಿನಗರ ಕ್ರೀಡಾಂಗಣಕ್ಕೆ ಟಾರ್ಪಲ್ ಹೊದಿಕೆ ಸ್ಥಳ ಪರಿಶೀಲನೆ ನಡೆಸಿದ ನಿರ್ಮಿತಿ ಕೇಂದ್ರದ ಅಧಿಕಾರಿ Read More »

ಉಪ್ಪಿನಂಗಡಿ: ಹಿಜಾಬ್ ಬದಿಗಿಟ್ಟು ತರಗತಿಗೆ ಹಾಜರಾದ ವಿದ್ಯಾರ್ಥಿನಿಯರು

ಸಮಗ್ರ ನ್ಯೂಸ್: ಹೈಕೋರ್ಟ್‌ ಆದೇಶ, ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂ ಸಿ ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸಲು ಯತ್ನಿಸುತ್ತಿದ್ದ 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಬಳಿಕ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿವರ್ತನೆಯ ನಡೆ ಗೋಚರಿಸಿದ್ದು, ಬುಧವಾರ 46 ವಿದ್ಯಾರ್ಥಿನಿಯರು ಹಿಜಾಬ್‌ ಬೇಡಿಕೆ ಬದಿಗಿಟ್ಟು ತರಗತಿಗೆ ಹಾಜರಾಗಿದ್ದಾರೆ. ಸೋಮವಾರ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಅಮಾನತಾಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಮಂಗಳವಾರ ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದ ಘಟನೆಯ ಬೆನ್ನಲ್ಲೇ ಎಲ್ಲ ವಿದ್ಯಾರ್ಥಿನಿಯರ

ಉಪ್ಪಿನಂಗಡಿ: ಹಿಜಾಬ್ ಬದಿಗಿಟ್ಟು ತರಗತಿಗೆ ಹಾಜರಾದ ವಿದ್ಯಾರ್ಥಿನಿಯರು Read More »

ಸರ್ಕಾರಿ ವಾಹನದಲ್ಲೇ ಗ್ಯಾಂಗ್ ರೇಪ್| ನಾಲ್ವರು ಅಪ್ರಾಪ್ತರು ಸೇರಿ ಆರು ಮಂದಿ ಅರೆಸ್ಟ್

ಸಮಗ್ರ ನ್ಯೂಸ್: ಹೈದರಾಬಾದ್ ನಲ್ಲಿ ನಡೆದ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಪ್ರಕಾರ, ಅತ್ಯಾಚಾರ ನಡೆದಿದ್ದ ಇನ್ನೋವಾ ಕಾರು ಸರ್ಕಾರಿ ವಾಹನ ಎಂಬುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರು ಸೇರಿದಂತೆ ಆರು ಆರೋಪಿಗಳನ್ನು ಎಫ್​ಐಆರ್​ನಲ್ಲಿ ಸೇರಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೇ.28ರಂದು 17 ವರ್ಷದ ಅಪ್ರಾಪ್ತೆ ಪಾರ್ಟಿಗೆಂದು ಪಬ್​ಗೆ ಹೋಗಿದ್ದಳು. ಈ ವೇಳೆ ಹುಡುಗನೊಬ್ಬನನ್ನು ಆಕೆ ಭೇಟಿಯಾಗಿದ್ದಳು. ಪಾರ್ಟಿಯ ಬಳಿಕ ಪರಿಚಿತ ಹುಡುಗ ಮತ್ತು ಆತನ ಸ್ನೇಹಿತರೊಂದಿಗೆ ಕ್ಲಬ್​ನಿಂದ ಹೊರಬಂದಿದ್ದಳು. ಪಾರ್ಟಿ ಮುಗಿದ

ಸರ್ಕಾರಿ ವಾಹನದಲ್ಲೇ ಗ್ಯಾಂಗ್ ರೇಪ್| ನಾಲ್ವರು ಅಪ್ರಾಪ್ತರು ಸೇರಿ ಆರು ಮಂದಿ ಅರೆಸ್ಟ್ Read More »

ಅಕ್ಕಿ ಮೂಟೆ ಎತ್ತಲು‌ ವಿದ್ಯಾರ್ಥಿಗಳ ಬಳಸಿದ ಶಾಲಾ ಅಧ್ಯಾಪಕ ಹಾಗೂ ಸೊಸೈಟಿ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ದೂರು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅಡ್ಕಾರು ಅನುದಾನಿತ ಶಾಲೆಯೊಂದರ ಅಧ್ಯಾಪಕರು ಪಡಿತರ ಕೇಂದ್ರದಲ್ಲಿ ಶಾಲೆಯ ಅಕ್ಕಿಯನ್ನು ಬದಲಾಯಿಸಲು ವಿದ್ಯಾರ್ಥಿಗಳನ್ನು ಬಳಸಿರುವ ವಿಡಿಯೋ ಚಿತ್ರಣ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಇಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿದ್ದು ದೂರಿನಲ್ಲಿ ವಿದ್ಯಾರ್ಥಿಗಳನ್ನು ಅಕ್ಕಿ ಚೀಲ ಎತ್ತಲು ಬಳಸಿದ ಅಧ್ಯಾಪಕರು ಮತ್ತು ಸೊಸೈಟಿ ಸಿಬ್ಬಂದಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಲಾಗಿದೆ.

ಅಕ್ಕಿ ಮೂಟೆ ಎತ್ತಲು‌ ವಿದ್ಯಾರ್ಥಿಗಳ ಬಳಸಿದ ಶಾಲಾ ಅಧ್ಯಾಪಕ ಹಾಗೂ ಸೊಸೈಟಿ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ದೂರು Read More »

ಮಂಗಳೂರು: ವಿವಿ ಕಾಲೇಜಿನಲ್ಲಿ ಸಾವರ್ಕರ್ ಭಾವಚಿತ್ರ| ಪ್ರಾಂಶುಪಾಲರಿಂದ ಸೂಚನೆ ಮೇರೆಗೆ ತೆರವು

ಸಮಗ್ರ ನ್ಯೂಸ್: ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ಮಂಗಳವಾರ ಅಳವಡಿಸಲಾಗಿದೆ. ಇದನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ತಕ್ಷಣ ಪ್ರಾಂಶುಪಾಲೆಯ ಗಮನಕ್ಕೆ ತಂದಿದ್ದು, ಬಳಿಕ ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ತರಗತಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಮಧ್ಯೆಯೇ ಇಬ್ಬರು ವಿದ್ಯಾರ್ಥಿಗಳು ತರಗತಿಯೊಳಗೆ ಸಾವರ್ಕರ್ ಫೋಟೋವನ್ನು ಅಳವಡಿಸಿದ್ದರು

ಮಂಗಳೂರು: ವಿವಿ ಕಾಲೇಜಿನಲ್ಲಿ ಸಾವರ್ಕರ್ ಭಾವಚಿತ್ರ| ಪ್ರಾಂಶುಪಾಲರಿಂದ ಸೂಚನೆ ಮೇರೆಗೆ ತೆರವು Read More »

ಇಂದು ರಾಜ್ಯಾದ್ಯಂತ ಪಿಯು‌ ತರಗತಿಗಳು ಆರಂಭ| ಹಿಜಾಬ್ ಗೆ ನೋ ಎಂಟ್ರಿ; ಸಮವಸ್ತ್ರವೇ ಕಡ್ಡಾಯ

ಸಮಗ್ರ ನ್ಯೂಸ್: ಕೊರೊನಾ ಕಾರಣದಿಂದ 2 ವರ್ಷಗಳಿಂದ ಸರಿಯಾಗಿ ನಡೆಯದಿದ್ದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಭೌತಿಕ ತರಗತಿಗಳು ಜೂನ್ 9 ರ ಇಂದಿನಿಂಧ ಪೂರ್ಣ ಪ್ರಮಾಣದಲ್ಲಿ ಅರಂಭವಾಗಲಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ 2022-23 ನೇ ಸಾಲಿನ ತರಗತಿಗಳು ಆರಂಭವಾಗಲಿದ್ದು, ತರಗತಿ ಆರಂಭಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕೊರೊನಾ ವೈರಸ್ ಕಾರಣದಿಂದ ಕಳೆದ 2 ವರ್ಷಗಳಿಂದ ಸರಿಯಾಗಿ ತರಗತಿಗಳು ನಡೆದಿಲ್ಲ. ಈ ಬಾರಿ 2022-23 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ

ಇಂದು ರಾಜ್ಯಾದ್ಯಂತ ಪಿಯು‌ ತರಗತಿಗಳು ಆರಂಭ| ಹಿಜಾಬ್ ಗೆ ನೋ ಎಂಟ್ರಿ; ಸಮವಸ್ತ್ರವೇ ಕಡ್ಡಾಯ Read More »

ರಾಜಕೀಯದ ದೊಡ್ಮನೆಯಲ್ಲಿ ಸಂಭ್ರಮ| ನಿಖಿಲ್ ಪುತ್ರನಿಗೆ‌ ನೆರವೇರಿದ ನಾಮಕರಣ ಶಾಸ್ತ್ರ

ಸಮಗ್ರ ನ್ಯೂಸ್: ರಾಜಕೀಯ ಧುರೀಣ ದೇವೇಗೌಡರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಗೌಡರ ಮರಿ ಮೊಮ್ಮಗನಿಗೆ ನಾಮಕರಣ ಮಾಡಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ, ರಾಜಕೀಯ ಹಾಗೂ ಚಿತ್ರರಂಗ ಎರಡಲ್ಲೂ ಬ್ಯುಸಿ ಇರುವ ನಿಖಿಲ್ ಕುಮಾರಸ್ವಾಮಿ ಮಗನ ನಾಮಕರಣ ಶಾಸ್ತ್ರ ಇಂದು ನೆರವೇರಿದ್ದು ಅವ್ಯನ್ ದೇವ್ ಎಂದ ಹೆಸರಿಡಲಾಗಿದೆ. ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಮಾಡಲಾಗಿದ್ದು, ಬೆಳಗ್ಗೆ 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆಯಿತು.

ರಾಜಕೀಯದ ದೊಡ್ಮನೆಯಲ್ಲಿ ಸಂಭ್ರಮ| ನಿಖಿಲ್ ಪುತ್ರನಿಗೆ‌ ನೆರವೇರಿದ ನಾಮಕರಣ ಶಾಸ್ತ್ರ Read More »

ಕ್ರಿಕೆಟ್ ಗೆ ಗುಡ್ ಬೈ‌ ಹೇಳಿದ ಮಿಥಾಲಿ ರಾಜ್

ಸಮಗ್ರ ನ್ಯೂಸ್: ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ‘ವರ್ಷಗಳಿಂದ ನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನಾನು ನನ್ನ 2 ನೇ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿದ್ದೇನೆ’ ಎಂದು ಮಿಥಾಲಿ ಟ್ವೀಟ್ ಮಾಡಿದ್ದಾರೆ. 1999ರಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಿಥಾಲಿ, ಇಂದು ತಮ್ಮ 23 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ

ಕ್ರಿಕೆಟ್ ಗೆ ಗುಡ್ ಬೈ‌ ಹೇಳಿದ ಮಿಥಾಲಿ ರಾಜ್ Read More »