June 2022

ರಾಜ್ಯಸಭೆ ಚುನಾವಣೆ: ಬಿಜೆಪಿ 2 ಕಾಂಗ್ರೆಸ್ 1ರಲ್ಲಿ ಗೆಲುವು ನಿಶ್ಚಿತ| 4 ನೇ ಸ್ಥಾನಕ್ಕಾಗಿ ಪೈಪೋಟಿ

ಸಮಗ್ರ ನ್ಯೂಸ್‌: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರಾಜ್ಯಸಭೆ ಚುನಾವಣೆಯ ಮತದಾನ ಇಂದು ನಡೆಯಲಿದ್ದು, ನಾಲ್ಕನೆಯ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಒಟ್ಟು ನಾಲ್ಕು ಸ್ಥಾನಗಳ ಪೈಕಿ ಮೊದಲ ಮೂರು ಸ್ಥಾನಗಳ ಗೆಲುವು ಬಹುತೇಕ ನಿಶ್ಚಿತವಾಗಿವೆ.ಆದರೆ, ನಾಲ್ಕನೇ ಸ್ಥಾನಕ್ಕಾಗಿ ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪೈಪೋಟಿ ನಡೆಸಿರುವುದರಿಂದ ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದಕ್ಕೆ ಇಂದಿನ ಸಂಜೆವರೆಗೆ ಕಾಯಬೇಕಾಗಿದೆ. ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನ ಖಚಿತವಾಗಿವೆ. ಬಿಜೆಪಿಯ ನಿರ್ಮಲಾ ಸೀತಾರಾಮನ್‌ […]

ರಾಜ್ಯಸಭೆ ಚುನಾವಣೆ: ಬಿಜೆಪಿ 2 ಕಾಂಗ್ರೆಸ್ 1ರಲ್ಲಿ ಗೆಲುವು ನಿಶ್ಚಿತ| 4 ನೇ ಸ್ಥಾನಕ್ಕಾಗಿ ಪೈಪೋಟಿ Read More »

ಪ್ರಮೋದ್ ಮುತಾಲಿಕ್ ವಿರುದ್ದ ಮತ್ತೊಂದು ದೂರು‌ ದಾಖಲು

ಸಮಗ್ರ ನ್ಯೂಸ್: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವೆಲ್ಫೇರ್ ಆಫ್ ಇಂಡಿಯಾ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಾದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ, ಕೋರ್ಟ್ ಆದೇಶ ಪಾಲಿಸದವರಿಗೆ ಗುಂಡು ಹೊಡೆಯುವ ಆದೇಶ ಜಾರಿಗೊಳಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ವಿರುದ್ಧ ತುಮಕೂರು ಎಸ್ ಪಿ

ಪ್ರಮೋದ್ ಮುತಾಲಿಕ್ ವಿರುದ್ದ ಮತ್ತೊಂದು ದೂರು‌ ದಾಖಲು Read More »

ಹೆಂಡತಿಗೆ ಕೈಕೊಟ್ಟು ಮತ್ತೊಬ್ಬಳೊಂದಿಗೆ ಪೊಲೀಸಪ್ಪನ ಚಕ್ಕಂದ

ಸಮಗ್ರ ನ್ಯೂಸ್: ವಿವಾಹೇತರ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ್ ವಿರುದ್ಧ ಅವರ ಪತ್ನಿ ದೂರು ನೀಡಿದ್ದು, ನಕಲಿ ಪೋಷಕರನ್ನು ಸೃಷ್ಟಿಸಿ ತನ್ನನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ ಎಂದು ಪಿಎಸ್​ಐ ರಮೇಶ್ ಕೆಲಸ ಮಾಡುತ್ತಿದ್ದ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿಯೇ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಅಲ್ಲದೆ, ರಮೇಶ್‍ಗೆ ಬೇರೆ, ಬೇರೆ ವಿವಾಹೇತರ ಸಂಬಂಧಗಳಿವೆ. ಈ

ಹೆಂಡತಿಗೆ ಕೈಕೊಟ್ಟು ಮತ್ತೊಬ್ಬಳೊಂದಿಗೆ ಪೊಲೀಸಪ್ಪನ ಚಕ್ಕಂದ Read More »

ಟ್ರಾಫಿಕ್ ನಿಯಮ ಉಲ್ಲಂಘಿಸಿ ” ನಾನು ಎಂಎಲ್ಎ ಮಗಳು” ಎಂದು ದರ್ಪ ಮೆರೆದ ಅರವಿಂದ ಲಿಂಬಾವಳಿ ಪುತ್ರಿ

ಸಮಗ್ರ ನ್ಯೂಸ್: ಕಾರು ತಡೆದ ಒಂದೇ ಒಂದು ಕಾರಣಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರೊಂದಿಗೆ ವಾಗ್ವಾದಕ್ಕಿಳದ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಶಾಸಕರ ಪುತ್ರಿ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆ ಟ್ರಾಫಿಕ್ ಪೊಲೀಸರು ಲಿಂಬಾವಳಿ ಪುತ್ರಿ ಕಾರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿದ್ದು, ಮಾಧ್ಯಮದವರ ಮೇಲೂ ಚೀರಾಡಿದ್ದಾಳೆ. ಇದು ಎಂಎಲ್​ಎ ಗಾಡಿ, ಲಿಂಬಾವಳಿ ಕಾರು ಇದು ಗೊತ್ತಾ? ನಾನು ಶಾಸಕ ಅರವಿಂದ

ಟ್ರಾಫಿಕ್ ನಿಯಮ ಉಲ್ಲಂಘಿಸಿ ” ನಾನು ಎಂಎಲ್ಎ ಮಗಳು” ಎಂದು ದರ್ಪ ಮೆರೆದ ಅರವಿಂದ ಲಿಂಬಾವಳಿ ಪುತ್ರಿ Read More »

ಸುಳ್ಯ: ಯುವಕನ ಮೇಲೆ ಗುಂಡಿನ ದಾಳಿ ಪ್ರಕರಣ; 3 ಮಂದಿ ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯದಲ್ಲಿ ಜೂ.6 ರಂದು ರಾತ್ರಿ ಸ್ಜಾರ್ಪಿಯೋ ವಾಹನದಲ್ಲಿ ಬಂದ ತಂಡ ಸುಳ್ಯ ಜಯನಗರದ ಮಹಮ್ಮದ್ ಸಾಯಿ(39) ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಭೇಧಿಸಿರುವ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಡಗು ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34) ಹೆಚ್.ಎಸ್ ಮನೋಜ್ (25) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲು ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವೊಂದು ವಿಚಾರದಲ್ಲಿ

ಸುಳ್ಯ: ಯುವಕನ ಮೇಲೆ ಗುಂಡಿನ ದಾಳಿ ಪ್ರಕರಣ; 3 ಮಂದಿ ಆರೋಪಿಗಳ ಬಂಧನ Read More »

ಪ್ರತೀಬಾರಿಯೂ ಕಾಂಗ್ರೆಸ್ ಮಾತ್ರವೇ ಯಾಕೆ ಬೆಂಬಲಿಸಬೇಕು? ಜೆಡಿಎಸ್ ಗೆ ಸಿದ್ದರಾಮಯ್ಯ ಪ್ರಶ್ನೆ

ಸಮಗ್ರ ನ್ಯೂಸ್: ಕೋಮುವಾದಿ ಪಕ್ಷವನ್ನು ಸೋಲಿಸುವ ಬದ್ಧತೆ ಇದ್ದರೆ ಜೆಡಿಎಸ್ ಅಭ್ಯರ್ಥಿ ನಿವೃತ್ತಗೊಳಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಬಾರಿ ಕಾಂಗ್ರೆಸ್ ಪಕ್ಷವೇ ಏಕೆ ಬೆಂಬಲ ನೀಡಬೇಕು. ಜೆಡಿಎಸ್‍ನವರು ಕಣಕ್ಕಿಳಿಸಲಾಗಿರುವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಬೆಂಬಲ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಏಕೆ ಸಹಕರಿಸಬಾರದು ಎಂದು ಪ್ರಶ್ನಿಸಿದರು. ಈ ಮೊದಲು ಕಾಂಗ್ರೆಸ್ ಬೆಂಬಲದಿಂದ ದೇವೇಗೌಡರು ಪ್ರಧಾನಿಯಾಗಿದ್ದರು. ಜೆಡಿಎಸ್‍ನಲ್ಲಿ 37 ಶಾಸಕರಿದ್ದರು. 80 ಶಾಸಕರಿದ್ದ ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿ

ಪ್ರತೀಬಾರಿಯೂ ಕಾಂಗ್ರೆಸ್ ಮಾತ್ರವೇ ಯಾಕೆ ಬೆಂಬಲಿಸಬೇಕು? ಜೆಡಿಎಸ್ ಗೆ ಸಿದ್ದರಾಮಯ್ಯ ಪ್ರಶ್ನೆ Read More »

ತಮಿಳುನಾಡಿನಲ್ಲಿ ಅರಳಿತೇ ಕಮಲ!? ಎಡಿಟ್ ಮಾಡಿ‌ ಮಾನ ಕಳೆದುಕೊಂಡ ಬಿಜೆಪಿ

ಸಮಗ್ರ ನ್ಯೂಸ್: ಕೆಲವು ಯುವಕರು ವಿದ್ಯುತ್ ಕಂಬಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾಕುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ತಮಿಳುನಾಡಿನ ಚಿತ್ರ ಎಂದು ಪ್ರತಿಪಾದಿಸಿ ಹಂಚಲಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಹೆಜ್ಜೆಗುರುತು ಮೂಡಿಸುತ್ತಿದೆ ಎಂಬರ್ಥದ ಹಲವಾರು ಪೋಸ್ಟ್‌ ಗಳು ಈ ಚಿತ್ರದೊಂದಿಗೆ ವೈರಲ್‌ ಆಗಿತ್ತು. ಆದರೆ, ಇದು ತಮಿಳುನಾಡಿನ ಚಿತ್ರ ಅಲ್ಲ ಎಂದು Altnews.in ವರದಿ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಈ ಚಿತ್ರವನ್ನು ಟ್ವೀಟ್ ಮಾಡಿ ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ

ತಮಿಳುನಾಡಿನಲ್ಲಿ ಅರಳಿತೇ ಕಮಲ!? ಎಡಿಟ್ ಮಾಡಿ‌ ಮಾನ ಕಳೆದುಕೊಂಡ ಬಿಜೆಪಿ Read More »

ಪ್ರಚೋದನಕಾರಿ ಹೇಳಿಕೆ| ನೂಪುರ್ ಶರ್ಮಾ ಬಳಿಕ ಓವೈಸಿ ವಿರುದ್ದ ಕೇಸ್ ದಾಖಲು

ಸಮಗ್ರ ನ್ಯೂಸ್: ಪ್ರಚೋದನಕಾರಿ ಹೇಳಿಕೆಗಳನ್ನ ನೀಡಿದ ಆರೋಪದ ಮೇಲೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ದೆಹಲಿ ಸೈಬರ್‌ ಪೊಲೀಸ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಇನ್ನು ಇದರೊಂದಿಗೆ, ಯತಿ ನರಸಿಂಗಾನಂದ್ ಹೆಸರನ್ನ ಸಹ ಎಫ್‌ಐಆರ್ ನಲ್ಲಿ ಸೇರಿಸಲಾಗಿದೆ. ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಸೇರಿದಂತೆ ಎಂಟು ಜನರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರುಗಳನ್ನು ಸೇರಿಸಲಾಗಿದೆ. ವಾತಾವರಣವನ್ನು ಕಲುಷಿತಗೊಳಿಸಿದ ಪ್ರಕರಣದಲ್ಲಿ ದಾಖಲಾದ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮ

ಪ್ರಚೋದನಕಾರಿ ಹೇಳಿಕೆ| ನೂಪುರ್ ಶರ್ಮಾ ಬಳಿಕ ಓವೈಸಿ ವಿರುದ್ದ ಕೇಸ್ ದಾಖಲು Read More »

ಟಿಕೆಟ್ ಇಲ್ಲದೆ‌ ಪ್ರಯಾಣಿಸುತ್ತಿದ್ದವನ ಕೈಯಲ್ಲಿತ್ತು 2 ಕೋಟಿ ಹಣ!

ಸಮಗ್ರ ನ್ಯೂಸ್: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ 2 ಕೋಟಿ ರೂ. ಹಣವನ್ನು ರೈಲ್ವೆ ಪೊಲೀಸರು ಕಾರವಾರ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಲಾಗಿದೆ. ರೈಲು ಸಂಖ್ಯೆ.12133 (CSMT-ಮಂಗಳೂರು ಜೆಎನ್‌ಎಕ್ಸ್‌ಪ್ರೆಸ್) ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯಿಂದ ಎರಡು ಕೋಟಿ ರೂ.ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ. ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರಾಜಸ್ಥಾನದ ಚೆನ್ ಸಿಂಗ್ ಯಾನೆ ಮನೋಹರ್ ಹೇಮ ಸಿಂಗ್

ಟಿಕೆಟ್ ಇಲ್ಲದೆ‌ ಪ್ರಯಾಣಿಸುತ್ತಿದ್ದವನ ಕೈಯಲ್ಲಿತ್ತು 2 ಕೋಟಿ ಹಣ! Read More »

ಬೆಳ್ತಂಗಡಿ: ಕಾಂಗ್ರೆಸ್ ಮುಖಂಡ ಮತ್ತು ಕಾರ್ಯಕರ್ತನ ನಡುವೆ ಮಾರಾಮಾರಿ

ಸಮಗ್ರ ನ್ಯೂಸ್: ಕಾಂಗ್ರೆಸ್‌ ಮುಖಂಡ ಹಾಗೂ ಕಾರ್ಯಕರ್ತ ನಡು ಬೀದಿಯಲ್ಲಿ ರಾತ್ರಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ. ವೈಯುಕ್ತಿಕ ವಿಷಯಕ್ಕೆ ಇಬ್ಬರೂ ಅವಾಚ್ಯ ಶಬ್ದಗಳಿಂದ ಬೈಯ್ದು ಕೊನೆಗೆ ಗಲಾಟೆ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೀಡಿಯೋವನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ಸದ್ಯ ಈ ವೀಡಿಯೋ ವೈರಲ್‌ ಆಗಿದೆ.

ಬೆಳ್ತಂಗಡಿ: ಕಾಂಗ್ರೆಸ್ ಮುಖಂಡ ಮತ್ತು ಕಾರ್ಯಕರ್ತನ ನಡುವೆ ಮಾರಾಮಾರಿ Read More »