June 2022

ಔರಂಗಾಬಾದ್, ಉಸ್ಮಾನಾಬಾದ್ ಹೆಸರು ಬದಲಾಯಿಸಿದ ಮಹಾ ಸರ್ಕಾರ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಔರಂಗಾಬಾದ್, ಉಸ್ಮಾನಾಬಾದ್ ಮತ್ತು ಮುಂಬರುವ ಹೊಸ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡುವ ವಿವಾದಾತ್ಮಕ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು […]

ಔರಂಗಾಬಾದ್, ಉಸ್ಮಾನಾಬಾದ್ ಹೆಸರು ಬದಲಾಯಿಸಿದ ಮಹಾ ಸರ್ಕಾರ Read More »

ಕರಾವಳಿಯಲ್ಲಿ ಮಳೆ ಅಲರ್ಟ್| ಎರಡು ದಿನ ಭಾರೀ ಮಳೆ ಸಂಭವ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿ ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ವೇಗ ಪಡೆದುಕೊಂಡಿದೆ. ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.30 ಮತ್ತು ಜುಲೈ 1ರಂದು ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಮುಂದುವರಿಯಲಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಬುಧವಾರ ಬೆಳಗ್ಗಿನಿಂದಲೇ ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಮಳೆ ಸುರಿಯತೊಡಗಿತ್ತು. ದಿನವಿಡೀ ಮೋಡ ಹಾಗೂ ಮಳೆಯಾಗಿದ್ದು, ಜನತೆಯನ್ನು ಚಳಿ ಹಿಡಿಸಿದೆ. ಎಡೆಬಿಡದೆ ಸುರಿದ ಮಳೆಗೆ ಮಂಗಳೂರು ನಗರದ ತಗ್ಗು ಪ್ರದೇಶದ

ಕರಾವಳಿಯಲ್ಲಿ ಮಳೆ ಅಲರ್ಟ್| ಎರಡು ದಿನ ಭಾರೀ ಮಳೆ ಸಂಭವ Read More »

ಉದಯಪುರ ಕೊಲೆಗಾರರಿಗಿತ್ತು ಪಾಕ್ ಉಗ್ರರೊಂದಿಗೆ ಸಂಬಂಧ| ಕೊಲೆಮಾಡಿ ವಿಡಿಯೋ ಸಂದೇಶ ಕಳಿಸ್ತೇವೆ ಎಂದಿದ್ರಂತೆ ಪಾತಕಿಗಳು

ಸಮಗ್ರ ನ್ಯೂಸ್: ರಾಜಸ್ಥಾನದ ಉದಯಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಟೈಲರ್ ಕನ್ನಯ್ಯ ಲಾಲ್ ಪ್ರಕರಣವನ್ನು ಕೇಂದ್ರ ಸರ್ಕಾರ, ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಇದರ ಮಧ್ಯೆ ಹಂತಕರ ಕುರಿತು ಒಂದೊಂದೇ ಶಾಕಿಂಗ್ ಸಂಗತಿಗಳು ಬಹಿರಂಗವಾಗುತ್ತಿವೆ. ಮಹಮ್ಮದ್ ರಿಯಾಜ್ ಆಕ್ತಾರಿ ಮತ್ತು ಗೌಸ್ ಮಹಮ್ಮದ್ ಎಂಬ ಈ ಹಂತಕರು ಕನ್ನಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಬಳಿಕ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುವ ಪ್ಲಾನ್ ಮಾಡಿದ್ದರಾದರೂ ರಾಜ್ ಸಮಂದ್ ಬಳಿ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಅವರುಗಳ ವಿಚಾರಣೆ ವೇಳೆ ಈ

ಉದಯಪುರ ಕೊಲೆಗಾರರಿಗಿತ್ತು ಪಾಕ್ ಉಗ್ರರೊಂದಿಗೆ ಸಂಬಂಧ| ಕೊಲೆಮಾಡಿ ವಿಡಿಯೋ ಸಂದೇಶ ಕಳಿಸ್ತೇವೆ ಎಂದಿದ್ರಂತೆ ಪಾತಕಿಗಳು Read More »

ಸುಪ್ರೀಂ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಮೈತ್ರಿ ಸರ್ಕಾರ ನಾಳೆ ವಿಶ್ವಾಸ ಮತಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​​ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ವಿಶ್ವಾಸ ಮತಯಾಚನೆ ನಡೆಸಲು ರಾಜ್ಯಪಾಲರು ನೀಡಿರುವ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಠಾಕ್ರೆ ಗೆ ಭಾರೀ ಹಿನ್ನೆಡೆಯಾಗಿದ್ದು, ಇದಾದ ಬಳಿಕ ಸುದ್ದಿಗೋಷ್ಠಿ ಕರೆದು ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ‘ಮಹಾ ವಿಕಾಸ್ ಅಘಾಡಿ’ ಸರಕಾರದ ಆಡಳಿತ ಅಂತ್ಯವಾಗಿದೆ.

ಸುಪ್ರೀಂ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ Read More »

“ವಿಶ್ವಾಸ ಮತ ಯಾಚನೆ ಮಾಡ್ಲೇಬೇಕು” ಸರ್ವೋಚ್ಚ ನ್ಯಾಯಾಲಯದ ಆದೇಶ| ಮಹಾಪತನಕ್ಕೆ ಕೌಂಟ್ ಡೌನ್ ಶುರು

ಸಮಗ್ರ ನ್ಯೂಸ್: ಕುತೂಹಲ ಹೆಚ್ಚಿರುವ ಶಿವಸೇನಾ ಬಂಡಾಯ ಶಾಸಕರ ಮತ್ತು ಮುಖ್ಯಮಂತ್ರಿ ತಂಡದ‌ ನಡುವಿನ ಒಡಕು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು ರಾಜ್ಯಪಾಲರ ಆದೇಶವನ್ನು ನ್ಯಾಯಾಲಯ‌ ಎತ್ತಿ ಹಿಡಿದಿದೆ. ವಿಶ್ವಾಸ ಮತ ಯಾಚನೆ ಕುರಿತಂತೆ ಠಾಕ್ರೆ ಅರ್ಜಿ ವಿಚಾರಿಸಿದ ಸುಪ್ರೀಂ ಕೋರ್ಟ್ ಮತಯಾಚನೆ ಮಾಡಲೇಬೇಕೆಂದು ಆದೇಶಿಸಿದೆ. ಬಂಡಾಯ 16 ಶಾಸಕರೂ ಮತ ಚಲಾವಣೆ ಮಾಡಲು ನ್ಯಾಯಾಲಯ ಅನುಮತಿಸಿದ್ದು ಇದಕ್ಕಾಗಿ 11:00ಗಂಟೆಗೆ ಸಮಯ ನಿಗದಿಪಡಿಸಿದ್ದು ಮಹಾರಾಷ್ಟ್ರ ಸರಕಾರ ಪತನ ಖಚಿತವಾಗಿದೆ.

“ವಿಶ್ವಾಸ ಮತ ಯಾಚನೆ ಮಾಡ್ಲೇಬೇಕು” ಸರ್ವೋಚ್ಚ ನ್ಯಾಯಾಲಯದ ಆದೇಶ| ಮಹಾಪತನಕ್ಕೆ ಕೌಂಟ್ ಡೌನ್ ಶುರು Read More »

ವಿಟ್ಲ: ಬಸ್ಸು ತಂಗುದಾಣದಲ್ಲಿ ರಕ್ತ ಪತ್ತೆಯಾದ ಪ್ರಕರಣ

*ಸತ್ಯಾಂಶ ಬಯಲಿಗೆ* ಸಮಗ್ರ ನ್ಯೂಸ್ : ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿದ್ದು ಸಾರ್ವಜನಿಕರ ಬಸ್ಸು ತಂಗುದಾಣದಲ್ಲಿ ರಕ್ತ ಪತ್ತೆಯಾಗಿರುವ ಘಟನೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ -ಪುತ್ತೂರು ರಸ್ತೆಯ ಬದನಾಜೆಯಲ್ಲಿ ನಡೆದಿದೆ. ಬದನಾಜೆ ಬಸ್ಸು ತಂಗುದಾಣದ ಪಕ್ಕದಲ್ಲಿ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ರಕ್ತವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿದ ವಿಟ್ಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ. ನೆಲ್ಲಿಗುಡ್ಡೆ ಮೂಲದ ವ್ಯಕ್ತಿ ಕುಡಿತದ

ವಿಟ್ಲ: ಬಸ್ಸು ತಂಗುದಾಣದಲ್ಲಿ ರಕ್ತ ಪತ್ತೆಯಾದ ಪ್ರಕರಣ Read More »

ಕೆ.ಎಸ್.ಆರ್.ಟಿ.ಸಿ ಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಬಸ್ ಪಾಸ್ ಅವಧಿ ವಿಸ್ತರಣೆ

ಸಮಗ್ರ ನ್ಯೂಸ್ : 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿಯ ನಂತರವೂ ಪರೀಕ್ಷೆ ನಿಗದಿಯಾಗಿದ್ದು, ಈ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪಾಸ್ ಅವಧಿಯನ್ನು ವಿಸ್ತರಿಸಿ ಕೆಎಸ್ಸಾರ್ಟಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಕೆಎಸ್ಸಾರ್ಟಿಸಿ ಪತ್ರಿಕಾ ಮಾಹಿತಿ ನೀಡಿದ್ದು, 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ವರೆಗೂ ತರಗತಿಗಳು ಹಾಗೂ ಪರೀಕ್ಷೆ ನಡೆಯುವುದರಿಂದ

ಕೆ.ಎಸ್.ಆರ್.ಟಿ.ಸಿ ಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಬಸ್ ಪಾಸ್ ಅವಧಿ ವಿಸ್ತರಣೆ Read More »

ಮಂಗಳೂರು; ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿ , ಓರ್ವ ಮೃತ್ಯು, ಇಬ್ಬರಿಗೆ ಗಾಯ

ಸಮಗ್ರ ನ್ಯೂಸ್ : ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆಯೊಂದು ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಮೃತಚಾಲಕನನ್ನು ಕೆಎಸ್.ರಾವ್ ನಗರ ವಿಜಯಪುರ ಕಾಲೊನಿ ನಿವಾಸಿ ಯಶವಂತರಾಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಭಗವಂತರಾಯ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸಕ್ಕೆಂದು ಟೆಂಪೋದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್

ಮಂಗಳೂರು; ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿ , ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರು ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಸಮಗ್ರ ನ್ಯೂಸ್ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಂಡ ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.50 ಹಾಗೂ ಇತರೆ ವರ್ಗದ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಶೇ.30 ಸಹಾಯಧನ ಪಡೆಯಲು ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಂಬಂಧಿಸಿದ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದು ಜುಲೈ 31ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ

ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರು ಸಹಾಯಧನ ಪಡೆಯಲು ಅರ್ಜಿ ಆಹ್ವಾನ Read More »

ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ| “ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು”

ಸಮಗ್ರ ನ್ಯೂಸ್: ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ ಸರ್ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ನೂಫುರ್ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಹತ್ಯೆ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿದ ಸಂಸದರು, ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತವಾದಿಗಳು ದೇಶದ ಶಾಂತಿ ಕೆಡಿಸುವ ಯತ್ನವಿದು. ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು. ಬ್ರದರ್ ಬ್ರದರ್ ಎಂದು ಹೇಳುವ

ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ| “ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು” Read More »