June 2022

ಮಂಗಳೂರು: ವಿವಿ ಕಾಲೇಜಿನಲ್ಲಿ ಗುಂಪು ಘರ್ಷಣೆ ಪ್ರಕರಣ| 6 ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಿದ ಪೊಲೀಸರು

ಸಮಗ್ರ ನ್ಯೂಸ್: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಬಗೆಹರಿಯುವ ಮೊದಲೇ ಇನ್ನೊಂದು ವಿವಾದ ಶುರುವಾಗಿದೆ. ನಿನ್ನೆ ಸಾವರ್ಕರ್‌ ಫೋಟೋ ವಿವಾದ ಸಂಬಂಧಿಸಿದ ಜಗಳವಾಡಿಕೊಂಡ ಮಂಗಳೂರು ವಿಶ್ವವಿದ್ಯಾಲಯ 6 ವಿದ್ಯಾರ್ಥಿಗಳ ಮೇಲೆ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರ್ಕಝ್‌, ಅಬೂಬುಕ್ಕರ್‌ ಸಿದ್ದಿಕ್‌, ಮಹಮ್ಮದ್‌ ಅಫಾಜ್‌,ಪ್ರಜನ್‌, ಸ್ವಸ್ತಿಕ್ ಮತ್ತು ಗುರುಕಿರಣ್‌ ಎಂದು ಗುರುತಿಸಲಾಗಿದೆ. ಕಾಲೇಜಿನ ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಸಾವರ್ಕರ್‌ ಫೋಟೊ ಹಾಕಿದ್ದು, ಬಳಿಕ ತೆರವುಗೊಳಿಸಲಾಗಿದೆ. ಕಾಲೇಜಿನ ಕಾಮರ್ಸ್‌ ಬ್ಲಾಕ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು […]

ಮಂಗಳೂರು: ವಿವಿ ಕಾಲೇಜಿನಲ್ಲಿ ಗುಂಪು ಘರ್ಷಣೆ ಪ್ರಕರಣ| 6 ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಿದ ಪೊಲೀಸರು Read More »

ಮಂಗಳೂರು: ಬೆಳ್ಳಂಬೆಳಗ್ಗೆ ಗುಂಡಿ ಸದ್ದು| ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಗುಂಡೇಟು|

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿದೆ. ಕೊಲೆ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಖದೀಮರ ಕಾಲಿಗೆ ಖಾಕಿ ಪಡೆ ಗುಂಡು ಹಾರಿಸಿ ಬಂಧಿಸಿದೆ. ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಯಾನೆ ಬಿಂದಾಸ್ ಬಂಧಿತರು. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಲ್ಕಿಯ ಗ್ಲೋಬಲ್ ಹೆರಿಟೇಜ್ ಲೇಔಟ್​ಗೆ ಹೋದಾಗ ಘಟನೆ ನಡೆದಿದೆ. ಆರೋಪಿಗಳನ್ನ ಬಂಧಿಸಲು ಮುಂದಾದ ಪೊಲೀಸರ

ಮಂಗಳೂರು: ಬೆಳ್ಳಂಬೆಳಗ್ಗೆ ಗುಂಡಿ ಸದ್ದು| ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಗುಂಡೇಟು| Read More »

ನೆಲ್ಯಾಡಿ: ಕಂದಕಕ್ಕೆ ಉರುಳಿದ ಸಿಮೆಂಟ್ ತುಂಬಿದ ಲಾರಿ| ಚಾಲಕ ಜಖಂ

ಸಮಗ್ರ ನ್ಯೂಸ್: ಬಸ್ ಗಳ ಓವರ್ ಟೇಕ್ ನಿಂದಾಗಿ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸಿಮೆಂಟ್ ಹೊತ್ತ ಲಾರಿಯೊಂದು ಕಂದಕಕ್ಕೆ ಉರುಳಿಬಿದ್ದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಇಂದು ಮುಂಜಾನೆ 4ರ ಸುಮಾರಿಗೆ ನಡೆದಿದೆ. ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು ಗಾಯಗೊಂಡ ಚಾಲಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೆಲ್ಯಾಡಿ: ಕಂದಕಕ್ಕೆ ಉರುಳಿದ ಸಿಮೆಂಟ್ ತುಂಬಿದ ಲಾರಿ| ಚಾಲಕ ಜಖಂ Read More »

ಸುಳ್ಯ: ಕಾರುಗಳ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿ ಜಖಂಗೊಂಡ ಘಟನೆ ‌ಮಾಣಿ- ಮೈಸೂರು ರಸ್ತೆಯ ಅರಂತೋಡು ಬಳಿ ನಡೆದಿದೆ. ಅರಂತೋಡು ಸುಳ್ಯ ದಿಂದ ಮಡಿಕೇರಿ ತೆರಳುತ್ತಿದ್ದ ಕಾರು ಮತ್ತು ಸಂಪಾಜೆಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರುಗಳ ನಡುವೆ ಕೊಡಂಕೇರಿ ತಿರುವು ಬಳಿ ಈ ಅಪಘಾತ ಸಂಭವಿಸಿದ್ದು, ಎರಡು ಕಾರಿಗಳ ಮುಂಭಾಗ ಜಖಂ ಆಗಿವೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸುಳ್ಯ: ಕಾರುಗಳ ಮುಖಾಮುಖಿ ಡಿಕ್ಕಿ Read More »

ಪುತ್ತೂರು: ರೈಲ್ವೆ ನಿಲ್ದಾಣದಲ್ಲಿ ಭಿನ್ನಕೋಮಿನ ಜೋಡಿ

ಸಮಗ್ರ ನ್ಯೂಸ್: ಭಿನ್ನಕೋಮಿನ ಜೋಡಿಯೊಂದು ನಿನ್ನೆ ರಾತ್ರಿ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಕುರಿತು ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನ್ಯಕೋಮಿನ ಜೋಡಿಯನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪುತ್ತೂರಿನ ಬನ್ನೂರಿನ ಅನ್ಯಕೋಮಿನ ಯುವಕನೋರ್ವ ಜೊತೆ ಬೆಂಗಳೂರು ಮೂಲದ ಹಿಂದೂ ಯುವತಿಯೊಬ್ಬಳು ಆತನ ಸಂಬಂಧಿಕರ ಮದುವೆಗೆ ಬಂದು ಬೆಂಗಳೂರಿಗೆ ಹಿಂತಿರುಗುತ್ತಿದ್ದಳು. ಈ ವೇಳೆ ಇಬ್ಬರು ರೈಲ್ವೇ ನಿಲ್ದಾಣದಲ್ಲಿರುವುದನ್ನು ಗಮನಿಸಿದ ಭಜರಂಗದಳದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪುತ್ತೂರು: ರೈಲ್ವೆ ನಿಲ್ದಾಣದಲ್ಲಿ ಭಿನ್ನಕೋಮಿನ ಜೋಡಿ Read More »

ಸಾವರ್ಕರ್ ಫೋಟೋ ತೆರವು ವಿಚಾರ| ಮಂಗಳೂರು ವಿವಿ ಕಾಲೇಜಿನಲ್ಲಿ ಇತ್ತಂಡಗಳ ನಡುವೆ ಘರ್ಷಣೆ|

ಸಮಗ್ರ ನ್ಯೂಸ್: ತರಗತಿಯಲ್ಲಿ ಸಾವರ್ಕರ್‌ ಫೋಟೋ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳು ಪರಸ್ಪರ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಮಧ್ಯಾಹ್ನ ಭೋಜನ ವಿರಾಮದ ವೇಳೆ ಈ ಘಟನೆ ನಡೆದಿದ್ದು, ಲಭ್ಯ ಮಾಹಿತಿಯಂತೆ ಕೆಲವು ವಿದ್ಯಾರ್ಥಿಗಳು ಕೆಲ ದಿನ ಹಿಂದೆ ತರಗತಿಯಲ್ಲಿ ಸಾವರ್ಕರ್ ಫೊಟೊ ಹಾಕಿದ್ದನ್ನು ಆಕ್ಷೇಪಿಸಿದ್ದಾರೆ. ಇಂದು ಈ ವಿಚಾರವಾಗಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದೆ.

ಸಾವರ್ಕರ್ ಫೋಟೋ ತೆರವು ವಿಚಾರ| ಮಂಗಳೂರು ವಿವಿ ಕಾಲೇಜಿನಲ್ಲಿ ಇತ್ತಂಡಗಳ ನಡುವೆ ಘರ್ಷಣೆ| Read More »

ಮಣ್ಣುಮುಕ್ಕಿದ ಆತ್ಮಸಾಕ್ಷಿ| ಬಿಜೆಪಿಯ ಲೆಹರ್ ಸಿಂಗ್ ಗೆ ರೋಚಕ ಗೆಲುವು

ಸಮಗ್ರ‌ ನ್ಯೂಸ್: ರಣರೋಚಕತೆ ಸೃಷ್ಟಿಸಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಗೆಲುವಿನ ನಗೆ ಬೀರಿದ್ದಾರೆ.ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಆತ್ಮಸಾಕ್ಷಿಯ ಕಚ್ಚಾಟದಲ್ಲಿ ಬಿಜೆಪಿ ಲಾಭ ಮಾಡಿಕೊಂಡಿದ್ದು, ಈ ಮೂಲಕ ಕಾಂಗ್ರೆಸ್‌ ತೀವ್ರ ಮುಖಭಂಗ ಅನುಭವಿಸಿದೆಕಾಂಗ್ರೆಸ್‌ನ ಮನ್ಸೂರ್‌ ಅಲಿಖಾನ್‌ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿಯವರು ಸೋಲನುಭವಿಸಿದ್ದಾರೆ.

ಮಣ್ಣುಮುಕ್ಕಿದ ಆತ್ಮಸಾಕ್ಷಿ| ಬಿಜೆಪಿಯ ಲೆಹರ್ ಸಿಂಗ್ ಗೆ ರೋಚಕ ಗೆಲುವು Read More »

ಸುರತ್ಕಲ್: ಕೆನರಾ ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಕಂಗೆಟ್ಟ ಬ್ಯಾಂಕ್ ಗ್ರಾಹಕಿಯಿಂದ ಬ್ಯಾಂಕ್ ಎದುರು ಗಲಾಟೆ

ಸಮಗ್ರ ನ್ಯೂಸ್: ಸರ್ವರ್ ಸಮಸ್ಯೆಯಿಂದ ಕಂಗೆಟ್ಟ ಗ್ರಾಹಕಿಯೊಬ್ಬರು ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಸುರತ್ಕಲ್ ನ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಎರಡು ಗಂಟೆಗಳಿಗೂ ಹೆಚ್ಚು ಕಾಲ ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಸತಾಯಿಸಿ ನಂತರ ಕೆಲಸ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ಬ್ಯಾಂಕ್ ಗೆ ಕಲ್ಲೆಸೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ನೂರಾರು ಜನ ಜಮಾಯಿಸಿದ್ದು, ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬ್ಯಾಂಕ್ ಅಧಿಕಾರಿಗಳು ಸಮಜಾಯಿಷಿ ನೀಡಿದರೂ ಗ್ರಾಹಕರು ಒಪ್ಪದೆ ಪ್ರತಿಭಟನೆ ನಡೆಸಿದರು.

ಸುರತ್ಕಲ್: ಕೆನರಾ ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಕಂಗೆಟ್ಟ ಬ್ಯಾಂಕ್ ಗ್ರಾಹಕಿಯಿಂದ ಬ್ಯಾಂಕ್ ಎದುರು ಗಲಾಟೆ Read More »

ವಿಧಾನ ಪರಿಷತ್ ಚುನಾವಣೆ ಹಿನ್ನಲೆ| ಜೂ.13ರಂದು ಶಾಲಾ-ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ದಿನಾಂಕ 13-06-2022ರಂದು ನಡೆಯಲಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಜೂ.13ರಂದು ವಿಧಾನಪರಿಷತ್ತಿನ ವಾಯುವ್ಯ ಪದವೀಧರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರ ಹಾಗೂ ವಾಯುವ್ಯ ಶಿಕ್ಷಕರ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ಮತದಾನ ನಡೆಯಲಿರುವ ವಾಯುವ್ಯ ಪದವೀಧರ

ವಿಧಾನ ಪರಿಷತ್ ಚುನಾವಣೆ ಹಿನ್ನಲೆ| ಜೂ.13ರಂದು ಶಾಲಾ-ಕಾಲೇಜುಗಳಿಗೆ ರಜೆ Read More »

ವಿಟ್ಲ: ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಲಾರಿ ಡಿಕ್ಕಿಯಾಗಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಟ್ಲ-ಕಾಸರಗೋಡು ರಸ್ತೆಯ ಪ್ರಭಾ ವೈನ್ ಶಾಪ್ ಬಳಿ ನಡೆದಿದೆ. ವ್ಯಕ್ತಿಯೋರ್ವರು ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದ್ದು, ಅಪಘಾತದಿಂದಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಟ್ಲ: ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು Read More »