June 2022

ಮಂಗಳೂರು: ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಸಮಗ್ರ ನ್ಯೂಸ್: ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಗುರುವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಹರ್ಷದೀಪ್(20) ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಈತ ಗುರುವಾರ ಬಗಂಬಿಲದ ಮನೆಗೆ ಬಂದಿದ್ದು ಮನೆಯಲ್ಲಿ ತಾಯಿ ಮತ್ತು ಮಗ ವಾಸವಾಗಿದ್ದರು . ತಾಯಿಗೆ ತುಂಬ ಸಾಲ ಇರುವ ಬಗ್ಗೆ ಅರಿತ ವಿದ್ಯಾರ್ಥಿ ಹರ್ಷದೀಪ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ […]

ಮಂಗಳೂರು: ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ Read More »

ನಟಿ ಸಾಯಿಪಲ್ಲವಿ ವಿರುದ್ದ ದೂರು ನೀಡಿದ ಭಜರಂಗದಳ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ನರಮೇಧಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಸುಲ್ತಾನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಹೈದರಾಬಾದ್‌ನ ಭಜರಂಗ ದಳದ ಪದಾಧಿಕಾರಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತೀಚೆಗಿನ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು, “”ಹಿಂಸೆ ಎನ್ನುವುದು ಯಾವುದೇ ಪ್ರಕಾರದಲ್ಲಿರಲಿ ಅದು ತಪ್ಪು ಎಂಬುದು ನನ್ನ ಅಭಿಪ್ರಾಯ. ಆ ದೃಷ್ಟಿಯಲ್ಲಿ ಹೇಳುವುದಾದರೆ, ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಎಷ್ಟು ತಪ್ಪೋ,

ನಟಿ ಸಾಯಿಪಲ್ಲವಿ ವಿರುದ್ದ ದೂರು ನೀಡಿದ ಭಜರಂಗದಳ Read More »

ಉಡುಪಿ: ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕರೋರ್ವರು ಶವವಾಗಿ ಪತ್ತೆಯಾದ ಘಟನೆ ಉಡುಪಿಜಿಲ್ಲೆಯ ಹಿರಿಯಡ್ಕದಿಂದ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಹಿರಿಯಡ್ಕ ಮಹಾಲಸಾ ಆಯಿಲ್ ಇಂಡಸ್ಟ್ರಿ ಮಾಲಕ ಪ್ರಕಾಶ್ ಪೈ ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಪ್ಯಾಕ್ಟರಿ ನಡೆಸುತ್ತಿದ್ದ ಇವರು ಜೂ.14 ರಿಂದ ಕಾಣೆಯಾಗಿದ್ದರು. ಗುರುವಾರ ಹಿರಿಯಡ್ಕದ ಕುಕ್ಕೆಹಳ್ಳಿ ಬಳಿ ಇವರ ಶವ ಪತ್ತೆಯಾಗಿದೆ. ಆರ್ಥಿಕ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿ: ಸನತ್ ಹಿರಿಯಡ್ಕ

ಉಡುಪಿ: ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕ ಶವವಾಗಿ ಪತ್ತೆ Read More »

ಸುಳ್ಯ: ಅನ್ಯಜಾತಿಯ ಯುವಕನ ಪ್ರೇಮಿಸಿ ಮದುವೆಯಾದ ಯುವವೈದ್ಯೆ| ವಶೀಕರಣ ಆರೋಪ ಮಾಡಿದ ಯುವತಿಯ ಪೋಷಕರು

ಸಮಗ್ರ ನ್ಯೂಸ್: ಯುವವೈದ್ಯೆಯೋರ್ವಳು ಅನ್ಯ ಜಾತಿಯ ಯುವಕನನ್ನು ಪ್ರೇಮಿಸಿ ಮದುವೆಯಾಗಿದ್ದು, ಯುವಕನ ಮೇಲೆ ವಶೀಕರಣದ ಆರೋಪ ಹೊರಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ತಾಲೂಕಿನ ಗ್ರಾಮ ಪಂಚಾಯತ್ ಪ್ರತಿನಿಧಿಯೋರ್ವರ ಮಗಳಾಗಿರುವ ಯುವತಿಯು ಕಾಂಞಂಗಾಡ್ ಮೂಲದ ಯುವಕನನ್ನು ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಇಲ್ಲದ ಕಾರಣ ಇವರಿಬ್ಬರೂ ರಿಜಿಸ್ಟ್ರಾರ್ ವಿವಾಹವಾಗಿದ್ದಾರೆ. ಈ ಹಿಂದೆ ಹುಡುಗಿಯ ಮನೆಯವರು ಈಕೆಗಾಗಿ ಬೇರೆ ಹುಡುಗನ ಜೊತೆ ವಿವಾಹ ಗೊತ್ತುಮಾಡಿದ್ದು, ಇದು ಆಕೆಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೀಗ ವಿವಾಹವಾದ ಬಳಿಕವೂ ಪ್ರತಿಷ್ಟಿತ ಮನೆತನದವಳಾದ ಆಕೆಯನ್ನು ಮನೆಯವರು ಮನವೊಲಿಸಲು

ಸುಳ್ಯ: ಅನ್ಯಜಾತಿಯ ಯುವಕನ ಪ್ರೇಮಿಸಿ ಮದುವೆಯಾದ ಯುವವೈದ್ಯೆ| ವಶೀಕರಣ ಆರೋಪ ಮಾಡಿದ ಯುವತಿಯ ಪೋಷಕರು Read More »

ಮಂಗಳೂರು: ಚಾಲಿ ಅಡಿಕೆ ಮಾರುಕಟ್ಟೆ ಕೊಂಚ ಚೇತರಿಕೆ| ಆಮದು ಸುಂಕ ಹೆಚ್ಚಳಕ್ಕೆ ಆಗ್ರಹ

ಸಮಗ್ರ ನ್ಯೂಸ್: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದ ಹೊಸ ಅಡಿಕೆ ಧಾರಣೆಯಲ್ಲಿ ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದಿದೆ. ಅಡಿಕೆ ಸುಲಿದು ಮಾರಾಟ ಮಾಡುವ ಸಂದರ್ಭದಲ್ಲಿ ಏಕಾಏಕಿ ಧಾರಣೆ ಕುಸಿತ ಆಗಿರುವುದರಿಂದ ಬೆಳೆಗಾರರಿಗೆ ನಷ್ಟದ ಭೀತಿ ಉಂಟಾಗಿತ್ತು. ಆದರೆ ಇದೀಗ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು ಇನ್ನಷ್ಟು ಹೆಚ್ಚಳದ ನಿರೀಕ್ಷೆ ಮೂಡಿಸಿದೆ. ಹೊರ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ 435-440 ರೂ. ತನಕ ಇದ್ದ ಧಾರಣೆ ಜೂನ್‌ ಮೊದಲ ವಾರದಲ್ಲಿ 400 ರೂ.ಗಿಂತ ಕೆಳಗೆ ಇಳಿದಿತ್ತು.

ಮಂಗಳೂರು: ಚಾಲಿ ಅಡಿಕೆ ಮಾರುಕಟ್ಟೆ ಕೊಂಚ ಚೇತರಿಕೆ| ಆಮದು ಸುಂಕ ಹೆಚ್ಚಳಕ್ಕೆ ಆಗ್ರಹ Read More »

ಸೈಕಲ್ ಸವಾರನ ಮೇಲೆರಗಿದ ಚೀತಾ| ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಸಮಗ್ರ ನ್ಯೂಸ್: ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ ಕಾಡುಪ್ರಾಣಿಗಳಾದ ಚಿರತೆ, ಹುಲಿ, ಆನೆಗಳು ಕಾಡಾಂಚಿನ ಗ್ರಾಮಗಳಿಗೆ ಬಂದು ಬೆಳೆ ನಾಶ ಮಾಡುವುದು, ಕುರಿ ಕೋಳಿಗಳನ್ನು ಹೊತ್ತೊಯ್ಯುವುದು ಸಾಮಾನ್ಯ ಎನಿಸಿದೆ. ಈ ಮಧ್ಯೆ ಅಸ್ಸಾಂನಲ್ಲಿ ಚಿರತೆಯೊಂದು ದಾರಿಯಲ್ಲಿ ಸಾಗುತ್ತಿದ್ದ ಸೈಕಲ್ ಸವಾರನ ಮೇಲೆರಗಿದ್ದು, ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಘಟನೆ ನಡೆದಿದೆ. ಸೈಕಲ್ ಸವಾರ ತನ್ನ ಪಾಡಿಗೆ ತಾನು ಯಾವುದೇ

ಸೈಕಲ್ ಸವಾರನ ಮೇಲೆರಗಿದ ಚೀತಾ| ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು Read More »

ಪುತ್ತೂರು:ಗೃಹರಕ್ಷಕ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟ| ಸುದ್ದಿಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ದೂರು‌ ದಾಖಲು

ಸಮಗ್ರ ನ್ಯೂಸ್: ಗೃಹರಕ್ಷಕದಳದ ಮಹಿಳಾ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟಿಸಿದ ಸುದ್ದಿ ಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ಪುತ್ತೂರು ಡಿವೈಎಸ್ ಪಿ ಗಾನ ಪಿ. ಕುಮಾರ್ ಗೆ ದೂರು ನೀಡಲಾಗಿದೆ. ಗೃಹರಕ್ಷಕ ದಳದ ಪುತ್ತೂರು ಘಟಕವು ಜೂ.16ರಂದು ದೂರು ನೀಡಿದ್ದು, ಸಿಬ್ಬಂದಿ ವಿರುದ್ದ ಮಾನಹಾನಿಕರವಾಗಿ, ಅವಹೇಳನಕಾರಿಯಾಗಿ ವರದಿ ಪ್ರಕಟಿಸಲಾಗಿದೆ, ಈ ಕುರಿತಂತೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ. ಪುತ್ತೂರಿನ ಭವನವೊಂದಕ್ಕೆ ಆ ಭವನದಲ್ಲಿ ಕಚೇರಿ ಹೊಂದಿರುವ ಪ್ರತಿಷ್ಠಿತ ವ್ಯಕ್ತಿಯೋರ್ವರು ಗೃಹರಕ್ಷಕ

ಪುತ್ತೂರು:ಗೃಹರಕ್ಷಕ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟ| ಸುದ್ದಿಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ದೂರು‌ ದಾಖಲು Read More »

ರಾಜ್ಯದಲ್ಲಿ ಏರಿಕೆ ಕಂಡ ಕೊರೊನಾ ಪಾಸಿಟಿವಿಟಿ ದರ| ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ದರ ಶೇ.2.56ಕ್ಕೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೋವಿಡ್ ತಜ್ಞರ ಸಲಹಾ ಸಮಿತಿ ಸಲಹೆಯಂತೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಆರೋಗ್ಯ ಆಯುಕ್ತ ಡಾ.ರಣದೀಪ್ ಮಾತನಾಡಿ, ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಆದರೆ ಆಸ್ಪತ್ರೆಗೆ ದಾಖಲೆಯಾಗುವವರ ಸಂಖ್ಯೆ ಕಡಿಮೆ ಇದೆ.ಮುಂದಿನ ದಿನಗಳಲ್ಲಿ ಸೋಂಕು ತ್ವರಿತ ಪತ್ತೆ ಹಾಗೂ ನಿಯಂತ್ರಣಕ್ಕಾಗಿ ಹೆಚ್ಚಿನ ಗಮನ ಹರಿಸುತ್ತಿದ್ದು, ಕೊರೊನಾ ಲಸಿಕಾಕರಣಕ್ಕೆ ಹೆಚ್ಚಿನ‌ ಒತ್ತು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕೊರೋನಾ ಶೀಘ್ರ ಪತ್ತೆಗೆ ಕೊರೋನಾ ಪರೀಕ್ಷೆ, ಐಸೋಲೇಶನ್

ರಾಜ್ಯದಲ್ಲಿ ಏರಿಕೆ ಕಂಡ ಕೊರೊನಾ ಪಾಸಿಟಿವಿಟಿ ದರ| ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ Read More »

ಜು.18 ರಾಷ್ಟ್ರಪತಿ ಚುನಾವಣೆ| ದೇವೇಗೌಡ ಅಭ್ಯರ್ಥಿ ಸಾಧ್ಯತೆ

ಸಮಗ್ರ ನ್ಯೂಸ್: ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿರುವ ಸಮಾನ ಮನಸ್ಕ ಪಕ್ಷಗಳ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಗೆ ದೇವೇಗೌಡರ ಹೆಸರು ಬಲವಾಗಿ ಕೇಳಿಬಂದಿದೆ. ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್‌ ಸೇರಿ ಸುಮಾರು ಹದಿನಾರು ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆ. ಇದರಲ್ಲಿ ಎಲ್ಲರೂ ದೇವೇಗೌಡರ ಹೆಸರು ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಬಿಜೆಪಿಗೆ ವಿರುದ್ಧವಾಗಿ ದೇವೇಗೌಡರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಕಂಡುಬರುತ್ತಿದೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೆಸರು ರಾಷ್ಟ್ರಪತಿ ಹುದ್ದೆಗೆ ಕೇಳಿಬಂದಿತ್ತು. ಆದ್ರೆ ನನಗೆ ಆ ಬಗ್ಗೆ ಆಸಕ್ತಿ ಇಲ್ಲ ಎಂದು

ಜು.18 ರಾಷ್ಟ್ರಪತಿ ಚುನಾವಣೆ| ದೇವೇಗೌಡ ಅಭ್ಯರ್ಥಿ ಸಾಧ್ಯತೆ Read More »

ಮುಂದಿನ ಚುನಾವಣೆಯಲ್ಲಿ ಎಸ್.ಅಂಗಾರಗೆ ಗೇಟ್‌ಪಾಸ್!?
ಸಚಿವರಾಗಿಯೂ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲವಂತೆ ಸುಳ್ಯ ಶಾಸಕ!!

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತದಲ್ಲಿ 6 ಬಾರಿಯ ಶಾಸಕರಾಗಿ ಇದೀಗ ಸಚಿವರಾಗಿರುವ ಎಸ್ ಅಂಗಾರರು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ ಎಂಬ ಸುದ್ದಿಗಳು ಸ್ವಪಕ್ಷದಲ್ಲೇ ಕೇಳಿ ಬರುತ್ತಿದೆ. ಹಾಗಿದ್ದರೆ ಮುಂದೆ ಬಿಜೆಪಿಯಿಂದ ಸುಳ್ಯ ‌ಕ್ಷೇತ್ರದಲ್ಲಿ ಸ್ಷರ್ದಿಸುವವರು ಯಾರು? ಎಂಬ ಕುತೂಹಲ ಮೂಡಿದೆ. ೧೯೯೪ರಿಂದ ಸುಳ್ಯ ಕ್ಷೇತ್ರದ ಶಾಸಕರಾಗಿರುವ ಅಂಗಾರರು ಜನಾನುರಾಗಿ ಹಾಗೂ ಅಜಾತ ಶತ್ರು ಎಂದೇ ಖ್ಯಾತರು. ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ ಅಲ್ಲಿನ ಜನಸ್ತೋಮಕ್ಕೆ ಮೆಚ್ಚುಗೆಯಾದುದರಿಂದಲೇ ಅವರು ಹೀಗೆ ಸತತವಾಗಿ ಗೆಲುವಿನ ನಗೆ

ಮುಂದಿನ ಚುನಾವಣೆಯಲ್ಲಿ ಎಸ್.ಅಂಗಾರಗೆ ಗೇಟ್‌ಪಾಸ್!?
ಸಚಿವರಾಗಿಯೂ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲವಂತೆ ಸುಳ್ಯ ಶಾಸಕ!!
Read More »