June 2022

ಬೆಚ್ಚಿಬಿದ್ದ ಕನ್ನಡ ಚಿತ್ರರಂಗ| ನಟ ಸತೀಶ್ ವಜ್ರ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಯುವ ನಟ ಸತೀಶ್ ವಜ್ರನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ನಡೆದಿದೆ. ಮನೆಯಲ್ಲಿಯೇ ದುಷ್ಕರ್ಮಿಗಳು ಸತೀಶ್ ನನ್ನು ಹತ್ಯೆಗೈದಿದ್ದು, ಚಾಕುವಿನಿಂದ ಇರಿದು ಕೊಂದಿದ್ದಾರೆ.ಸ್ಥಳಕ್ಕೆ ಆರ್.ಆರ್.ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತೀಶ್ ಕನ್ನಡದ ಲಗೋರಿ ಚಿತ್ರದಲ್ಲಿ ನಟಿಸಿದ್ದರು. ಮೂಲತ: ಮದ್ದೂರು ಮೂಲದವರಾದ ಸತೀಶ್ ವಜ್ರ, ಪ್ರೀತಿಸಿ ವಿವಾಹವಾಗಿದ್ದರು. ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸತೀಶ್ ಕಿರುಕುಳದಿಂದಲೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು […]

ಬೆಚ್ಚಿಬಿದ್ದ ಕನ್ನಡ ಚಿತ್ರರಂಗ| ನಟ ಸತೀಶ್ ವಜ್ರ ಬರ್ಬರ ಹತ್ಯೆ Read More »

ಪಿಯುಸಿ ಫಲಿತಾಂಶ ಪ್ರಕಟ| ಶೇ.61.88 ಫಲಿತಾಂಶ ದಾಖಲು| ದ.ಕ, ಉಡುಪಿ ಟಾಪರ್

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ. 61.88 ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಎಂದಿನಂತೆ ಈ ಸಾಲಿನಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಾಥಮಿಕ ಮತ್ತು ಫ್ರೌಡ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ ವಿವರಣೆ ನೀಡಿದರು. ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ ಸೈಟ್‌ www.karresults.nic.in ಗೆ ಭೇಟಿ ನೀಡಬಹುದು. 4,02,697 ಹೊಸ ವಿದ್ಯಾರ್ಥಿಗಳು, 14,403 ಪುನರಾವರ್ತಿತ ವಿದ್ಯಾರ್ಥಿಗಳು, 5,866 ಖಾಸಗಿ ವಿದ್ಯಾರ್ಥಿಗಳು ಸೇರಿ

ಪಿಯುಸಿ ಫಲಿತಾಂಶ ಪ್ರಕಟ| ಶೇ.61.88 ಫಲಿತಾಂಶ ದಾಖಲು| ದ.ಕ, ಉಡುಪಿ ಟಾಪರ್ Read More »

100ರ ವಸಂತಕ್ಕೆ ಕಾಲಿಟ್ಟ ಮೋದಿ ತಾಯಿ ಹೀರಾಬೆನ್| ಮಾತೆಯ ಆಶೀರ್ವಾದ ಪಡೆದ ನಮೋ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಜನ್ಮದಿನದಂದು ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಹೀರಾಬೆನ್ ಮೋದಿ ಇಂದು ತಮ್ಮ ಜೀವನದ 100 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.ಗಾಂಧಿನಗರದಲ್ಲಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರ ನಿವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಡ್ನಗರ್‌ನ ಹಟಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವಯಸ್ಸಿನಲ್ಲೂ ಹೀರಾಬೆನ್ ಮೋದಿ ಆರೋಗ್ಯವಾಗಿದ್ದಾರೆ. ಅವರು ತಮ್ಮ ಕಿರಿಯ ಮಗ ಪಂಕಜ್ ಮೋದಿ ಜೊತೆಗೆ

100ರ ವಸಂತಕ್ಕೆ ಕಾಲಿಟ್ಟ ಮೋದಿ ತಾಯಿ ಹೀರಾಬೆನ್| ಮಾತೆಯ ಆಶೀರ್ವಾದ ಪಡೆದ ನಮೋ Read More »

ಕಾಸರಗೋಡು: ಎದೆಹಾಲು ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ನಿವಾಸಿ ಅಪ್ತಾಬ್‌ ಅವರ ಪುತ್ರಿ ಒಂದೂವರೆ ವರ್ಷದ ಇನಿಯ ಕಾರ್ತೋನ್‌ ಮಗು ಎದೆಹಾಲು ಗಂಟಲಲ್ಲಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ನಡೆದಿದೆ. ತಾಯಿ ಎದೆಹಾಲನ್ನು ಮಗುವಿಗೆ ಉಣಿಸುತ್ತಿರುವಾಗ ಹಾಲು ಗಂಟಲಲ್ಲಿ ಸಿಲುಕಿ ಮಗು ಒದ್ದಾಡಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ ಹಾಲುಣಿಸುತ್ತಿರುವಾಗ ಮಗುವಿನ ಗಂಟಲಲ್ಲಿ ಹಾಲು ಸಿಲುಕಿ ಉಸಿರಾಟ ತೊಂದರೆಯಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಕಾಸರಗೋಡು: ಎದೆಹಾಲು ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು Read More »

ವರ್ಗಾವಣೆ ಎಡವಟ್ಟು; ಆರೋಗ್ಯ ಇಲಾಖೆಯ ಚಾಲಕನಿಗೆ ಒಲಿದ ಸಹಾಯಕ ನಿರ್ದೇಶಕ ಹುದ್ದೆ!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಲು ಸಿಎಂ ಬೊಮ್ಮಾಯಿಯವರು ಸಚಿವರಿಗೆ ಹೊಣೆಗಾರಿಕೆ ನೀಡಿದ್ದಾರೆ. ಈ ಹೊಣೆಗಾರಿಕೆಯ ಯಡವಟ್ಟಿನಿಂದ ಆರೋಗ್ಯ ಇಲಾಖೆಯ ಚಾಲಕರೊಬ್ಬರು ಸಹ ನಿರ್ದೇಶಕರ ಹುದ್ದೆಗೆ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿದೆ. ರಾಜ್ಯ ಆರೋಗ್ಯ ಇಲಾಖೆ ಇತ್ತೀಚಿಕೆ ಬಿಡುಗಡೆ ಮಾಡಿರುವ ವರ್ಗಾವಣೆ ಪಟ್ಟಿಯಲ್ಲಿ, ಚಾಲಕರೊಬ್ಬರನ್ನು, ಸಹ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲಕರಾಗಿದ್ದ ಶಾಂತವೀರಪ್ಪ ಅವರನ್ನು ವರ್ಗಾವಣೆಗೊಳಿಸಿದೆ. ಚಾಲಕರಾಗಿದ್ದ ಅವರನ್ನು, ಕಲಬುರ್ಗಿಯ ಆರೋಗ್ಯ

ವರ್ಗಾವಣೆ ಎಡವಟ್ಟು; ಆರೋಗ್ಯ ಇಲಾಖೆಯ ಚಾಲಕನಿಗೆ ಒಲಿದ ಸಹಾಯಕ ನಿರ್ದೇಶಕ ಹುದ್ದೆ! Read More »

ಚುರುಕುಗೊಂಡ ಮುಂಗಾರು| ಐದು ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಂಭವ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಾರುತಗಳು ಚುರುಕುಗೊಂಡಿದ್ದು, ಮುಂದಿನ ಐದು ದಿನಗಳ ಕಾಲ ಉತ್ತಮ ಮಳೆಯಾಗಲಿದೆ. ಮುಂಗಾರಿನ ಪರಿಣಾಮ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ನಿರೀಕ್ಷೆಯಿದೆ. ಜೂ.22ರವರೆಗೆ ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ

ಚುರುಕುಗೊಂಡ ಮುಂಗಾರು| ಐದು ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಂಭವ Read More »

ಇಂದು ಪಿಯುಸಿ ಫಲಿತಾಂಶ; ಮೊಬೈಲ್ ಗೆ ಬರಲಿದೆ ಸಂದೇಶ

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಜೂ.18ರಂದು (ಶನಿವಾರ) ಬೆಳಿಗ್ಗೆ 11.30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪ್ರಕಟಿಸಲಿದ್ದು ಬಳಿಕ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಸಚಿವ ನಾಗೇಶ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದು ಬಳಿಕ ಮಂಡಳಿಯ ವೆಬ್‌ಸೈಟ್‌ www.karresults.nic.in ಸ್‌ಎಸ್‌ಎಲ್‌ಸಿ ಫಲಿತಾಂಶದ ಮಾದರಿಯಲ್ಲೇ ಪಿಯುಸಿ ಫಲಿತಾಂಶವನ್ನೂ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಇಂದು ಪಿಯುಸಿ ಫಲಿತಾಂಶ; ಮೊಬೈಲ್ ಗೆ ಬರಲಿದೆ ಸಂದೇಶ Read More »

ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿರುವ ಚತುರ್ಭಾಷಾ ನಟಿ ಐಶ್ವರ್ಯಾ ಭಾಸ್ಕರನ್|

ಸಮಗ್ರ ನ್ಯೂಸ್: ಅವಕಾಶದ ಕೊರತೆ ಕಾರಣದಿಂದ ಬದುಕಲು ಒಂದು ಕಾಲದಲ್ಲಿ ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರರಂಗದ ಟಾಪ್ ಹೀರೊಗಳೊಂದಿಗೆ ಹೀರೊಯಿನ್ ಆಗಿ ನಟಿಸಿದ್ದ ಒಂದು ಕಾಲದ ಮೇರು ನಟಿ ಐಶ್ವರ್ಯಾ ಭಾಸ್ಕರನ್ ಹೊಟ್ಟೆಪಾಡಿಗೆ ಬೀದಿಗಳಲ್ಲಿ ಸಾಬೂನು ಮಾರುತ್ತಿದ್ದಾರೆ. ಒಂದು ಕಾಲಕ್ಕೆ ಇವರು ರಜಿನಿಕಾಂತ್ ಹಾಗೂ ಮೋಹನ್ ಲಾಲ್ ಜೊತೆ ಹೀರೊಯಿನ್ ಆಗಿ ನಟಿಸಿದ್ದ ಈಕೆಗೆ ಇಂದು ಈ ಪರಿಸ್ಥಿತಿ ಒದಗಿಬಂದಿದೆ. ಸಿನಿಮಾಗಳಲ್ಲಿ ಉತ್ತುಂಗಕ್ಕೇರಿದ ನಂತರ ಐಶ್ವರ್ಯಾ ಟಿವಿ ಧಾರಾವಾಹಿಗಳಲ್ಲೂ ಮಿಂಚಿದ್ದರು. ಆದರೆ, ದಿನಗಳೆದಂತೆ ಅವರಿಗೆ

ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿರುವ ಚತುರ್ಭಾಷಾ ನಟಿ ಐಶ್ವರ್ಯಾ ಭಾಸ್ಕರನ್| Read More »

ನಾಳೆ(ಮಾ.18) ಪಿಯುಸಿ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್ : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು. ಳೆದ ಎಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ದಾಖಲಾಗಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ

ನಾಳೆ(ಮಾ.18) ಪಿಯುಸಿ ಫಲಿತಾಂಶ ಪ್ರಕಟ Read More »

ಪತ್ರಕರ್ತ ಗುರುವಪ್ಪ ಬಾಳೆಪುಣಿಗೆ ‘ವಿ.ಎಸ್.ಕೆ’ ಮಾಧ್ಯಮ ಪ್ರಶಸ್ತಿ

ಸಮಗ್ರ ನ್ಯೂಸ್: ಮಾಧ್ಯಮ ಸಂವಹನ ಸಂಸ್ಥೆಯಾದ ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ನೀಡಲಾಗುವ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, `ಹೊಸ ದಿಗಂತ’ ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಅವರು ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿ.ಎಸ್.ಕೆ.ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜೂ.26ರಂದು ಪೂರ್ವಾಹ್ನ 10:30ಕ್ಕೆ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.ಬಾಳೇಪುಣಿಯವರಿಗೆ ಇತ್ತೀಚೆಗಷ್ಟೇ ರಾಜ್ಯ ಸರಕಾರ ರಾಜ್ಯ ಮಟ್ಟದ ಪ್ರತಿಷ್ಠಿತ `ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಪತ್ರಕರ್ತ ಗುರುವಪ್ಪ ಬಾಳೆಪುಣಿಗೆ ‘ವಿ.ಎಸ್.ಕೆ’ ಮಾಧ್ಯಮ ಪ್ರಶಸ್ತಿ Read More »