June 2022

ಬೆಳ್ತಂಗಡಿ: ಮುಸ್ಲಿಂಮರ ಮತ ಬೇಡ ಎಂದಿದ್ದ ಶಾಸಕ ಹರೀಶ್ ಪೂಂಜಾರಿಂದ ಅಲ್ಪಸಂಖ್ಯಾತ ಸಮಾವೇಶ

ಸಮಗ್ರ ನ್ಯೂಸ್: ತನಗೆ ಗೆಲ್ಲಲು ಮುಸ್ಲಿಮರ ಮತ ಬೇಡ, ಕೇವಲ ಹಿಂದೂ ಮತಗಳಷ್ಟೇ ಸಾಕು ಎಂದಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಇಂದು ಅಲ್ಪಸಂಖ್ಯಾತ ಸಮಾವೇಶ ನಡೆಯಲಿದೆ. ಈ ಸಮಾವೇಶ ಕುರಿತಂತೆ ಕಮ್ಯುನಿಸ್ಟ್ ಪಕ್ಷದ ಶೇಖರ್ ಲಾಯಿಲ ‘ ಮುಸ್ಲಿಂ ಮತಗಿಟ್ಟಿಸಲು ಹರೀಶ್ ಪೂಂಜಾ ಅಲ್ಪಸಂಖ್ಯಾತ ಸಮಾವೇಶ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಲ್ಲದೇ ಅವರು‌ ಶಾಸಕರ ಕಚೇರಿಗೆ ಶಾಲು, ಟೋಪಿ ರವಾನಿಸಿದ್ದಾರೆ. ಒಂದು ಸಮಾಜವನ್ನು ಓಲೈಕೆ ಮಾಡಲು ಧಾರ್ಮಿಕ ಸಭೆಗಳಲ್ಲಿ ಮುಸ್ಲಿಂ ಮತ ಬೇಡ ಎನ್ನುವ […]

ಬೆಳ್ತಂಗಡಿ: ಮುಸ್ಲಿಂಮರ ಮತ ಬೇಡ ಎಂದಿದ್ದ ಶಾಸಕ ಹರೀಶ್ ಪೂಂಜಾರಿಂದ ಅಲ್ಪಸಂಖ್ಯಾತ ಸಮಾವೇಶ Read More »

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು| 3 ದಿನ ಆರೆಂಜ್ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಉತ್ತಮ ಮಳೆಯಾಗಿದೆ. ದ.ಕ, ಉಡುಪಿ ಜಿಲ್ಲೆಯ ಅಲ್ಲಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವೊಂದು ಸಣ್ಣಪುಟ್ಟ ಘಟನೆ ಹೊರತು ಪಡಿಸಿದರೆ ಉಳಿದಂತೆ ಉಭಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯ ಕರಾವಳಿ ಭಾಗದಲ್ಲಿ ಮುಂಗಾರು ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳವರೆಗೆ ಭಾರತೀಯ ಹವಾಮಾನ ಇಲಾಖೆಯು “ಆರೆಂಜ್‌ ಅಲರ್ಟ್‌’ ಘೊಷಿಸಿದೆ. ಜೂ. 22ರಿಂದ 24ರ ವರೆಗೆ

ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು| 3 ದಿನ ಆರೆಂಜ್ ಅಲರ್ಟ್ Read More »

ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಎನ್ ಡಿಎ

ಸಮಗ್ರ ನ್ಯೂಸ್: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಎನ್ ಡಿ ಎ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರು ಜಾರ್ಖಂಡ್ ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 64 ವರ್ಷದ ದ್ರೌಪದಿ ಮುರ್ಮು ಅವರು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಾಪೋಸಿ ಗ್ರಾಮದಲ್ಲಿ 1958 ರ

ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಎನ್ ಡಿಎ Read More »

ಚಿತ್ರೀಕರಣ ವೇಳೆ ಅಪಘಾತ| ನಟ ದಿಗಂತ್ ಗಂಭೀರ

ಸಮಗ್ರ ನ್ಯೂಸ್: ನಟ ದಿಗಂತ್‌ಗೆ ಚಿತ್ರೀಕರಣದ ವೇಳೆ ಅಪಘಾತಕ್ಕೆ ಈಡಾಗಿದ್ದು ಪರಸ್ಥಿತಿ ಗಂಭೀರವಾಗಿದೆ. ನಟ ದಿಗಂತ್ ಗೋವಾದಲ್ಲಿ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದೆ. ಗೋವಾದಲ್ಲಿ ನಟ ಆಪ್ತರು ಹಾಗೂ ಗೆಳೆಯರೊಡನೆ ಪ್ರವಾಸಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿ ಅವರು ತೊಡಗಿಕೊಂಡಿದ್ದರು. ಸಾಹಸ ಕ್ರೀಡೆಗಳನ್ನು ಆಡುವ ವೇಳೆ ಅಚಾನಕ್ಕಾಗಿ ದಿಗಂತ್‌ರ ಕತ್ತಿಗೆ ತೀವ್ರ ಪೆಟ್ಟಾಗಿದೆ. ಗೋವಾದ ಬೀಚ್‌ನಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವೇಳೆ ಆಯತಪ್ಪಿ ತಲೆ ಕೆಳಗಾಗಿ ಬಿದ್ದ ಪರಿಣಾಮ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ

ಚಿತ್ರೀಕರಣ ವೇಳೆ ಅಪಘಾತ| ನಟ ದಿಗಂತ್ ಗಂಭೀರ Read More »

ರಾಷ್ಟ್ರಪತಿ ಚುನಾವಣೆ| ಯಶವಂತ್ ಸಿನ್ಹಾ ಸ್ಪರ್ಧೆಗೆ ರೆಡಿ!

ಸಮಗ್ರ ನ್ಯೂಸ್: ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆಯುತ್ತಿರುವುದಾಗಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಹೇಳಿದ್ದಾರೆ. ಪ್ರತಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕಿದ್ದರೆ ಪಕ್ಷದ ಸದಸ್ಯತ್ವ ತೊರೆಯಬೇಕು ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಆಗ್ರಹಿಸಿದ್ದವು. ಹೀಗಾಗಿ ಪ್ರತಿಪಕ್ಷಗಳ ಸಭೆಗೂ ಮುನ್ನವೇ ಸಿನ್ಹಾ ಅವರು ಟಿಎಂಸಿ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ‘ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಪಕ್ಷದಲ್ಲಿ ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ಆಭಾರಿಯಾಗಿದ್ದೇನೆ. ರಾಷ್ಟ್ರೀಯ

ರಾಷ್ಟ್ರಪತಿ ಚುನಾವಣೆ| ಯಶವಂತ್ ಸಿನ್ಹಾ ಸ್ಪರ್ಧೆಗೆ ರೆಡಿ! Read More »

ಬಯಲಾಯ್ತು ಮತ್ತೊಬ್ಬ ಬಿಜೆಪಿ ಶಾಸಕನ ಕಾಮಕಾಂಡ| ಪ್ರೀತಿ ಹೆಸರಲ್ಲಿ ವಂಚನೆ

ಸಮಗ್ರ ನ್ಯೂಸ್: ಪ್ರೀತಿಯ ಹೆಸರಿನಲ್ಲಿ ಬಿಜೆಪಿ ಶಾಸಕನೋರ್ವ ವಂಚಿಸಿದ್ದಾರೆ ಎಂಬ ಆರೋಪ ಬಿಜೆಪಿ ಶಾಸಕನ ಮೇಲೆ ಕೇಳಿಬಂದಿದೆ. ಒಡಿಶಾ ಜಿಲ್ಲೆಯ ಜಗತ್‌ಸಿಂಗ್‌ಪುರ ಜಿಲ್ಲೆಯ ತೀರ್ಥೋಲ್‌ ಶಾಸಕ ಹಾಗೂ ಬಿಜೆಪಿ ಮುಖಂಡ ವಿಜಯಶಂಕರ್‌ ದಾಸ್‌ ಮೇಲೆ ಈ ಆರೋಪ ಕೇಳಿಬಂದಿದೆ. ಶಾಸಕರ ಗೆಳತಿ ಎಂದು ಹೇಳಿಕೊಂಡಿದ್ದ ಸೋಮಲಿಕಾ ದಾಸ್ (29) ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ಇದಲ್ಲದೆ, ದೂರಿನ ಆಧಾರದ ಮೇಲೆ ಪೊಲೀಸರು ಶಾಸಕರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಯಲಾಯ್ತು ಮತ್ತೊಬ್ಬ ಬಿಜೆಪಿ ಶಾಸಕನ ಕಾಮಕಾಂಡ| ಪ್ರೀತಿ ಹೆಸರಲ್ಲಿ ವಂಚನೆ Read More »

ಸುಳ್ಯ: ಪೊಲೀಸ್ ಠಾಣೆಯಲ್ಲಿ ಯೋಗ ದಿನಾಚರಣೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸುಳ್ಯ ಪೊಲೀಸ್ ಠಾಣೆಯಲ್ಲಿ ಯೋಗ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಈ ವೇಳೆ ಸುಳ್ಯ ಪೊಲೀಸ್ ಠಾಣೆ ನಿರೀಕ್ಷಕರು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.

ಸುಳ್ಯ: ಪೊಲೀಸ್ ಠಾಣೆಯಲ್ಲಿ ಯೋಗ ದಿನಾಚರಣೆ Read More »

ಮಂಗಳೂರು: ಶ್ರೀರಾಮಸೇನೆ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ; ಮೂವರು ಅಂದರ್

ಸಮಗ್ರ ನ್ಯೂಸ್: ಬೀಟ್ ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಪೊಲೀಸರ ಮೇಲೆ ತಂಡವೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳೂರು ನಗರದ ಚಿಲಿಂಬಿಗುಡ್ಡೆಯ ಉರ್ವದಲ್ಲಿ ರವಿವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಚಿಲಿಂಬಿಗುಡ್ಡೆ ನಿವಾಸಿಗಳಾದ ದುರ್ಗೇಶ್, ಪ್ರಜ್ವಿತ್, ರಕ್ಷಿತ್ ಬಂಧಿತರು. ಆರೋಪಿಗಳು ಶ್ರೀರಾಮ ಸೇನೆಯ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ವೆಂಕಟೇಶ್ ಮತ್ತು ಧನಂಜಯ್ ಘಟನೆಯಲ್ಲಿ ಗಾಯಗೊಂಡವರು. ಉರ್ವ ಪೊಲೀಸ್ ಠಾಣೆಯ ಸಿಬ್ವಂದಿ ತಡರಾತ್ರಿ 1.30ರ ವೇಳೆಗೆ ಚಿಲಿಂಬಿಗುಡ್ಡೆ

ಮಂಗಳೂರು: ಶ್ರೀರಾಮಸೇನೆ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ; ಮೂವರು ಅಂದರ್ Read More »

ಒಂದೇ ಮನೆಯೊಳಗೆ ಒಂಬತ್ತು ಶವ ಪತ್ತೆ| ಈ ಸಾವಿಗೆ ಕಾರಣವೇ ನಿಗೂಢ

ಸಮಗ್ರ ನ್ಯೂಸ್: ಒಂದೇ ಕುಟುಂಬದ ಒಂಬತ್ತು ಸದಸ್ಯರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದ್ದು, ಇಡೀ ರಾಜ್ಯ ಬೆಚ್ಚಿ ಬಿದ್ದಿದೆ. ಮುಂಬೈನಿಂದ 350 ಕಿಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಎಂಬಲ್ಲಿನ ಮನೆಯೊಂದರಲ್ಲಿ 9 ಮೃತ ದೇಹಗಳು ಪತ್ತೆಯಾಗಿವೆ. “ನಾವು ಒಂದೇ ಮನೆ ಒಳಗೆ ಒಂಬತ್ತು ಶವಗಳನ್ನು ಕಂಡು ದಿಗ್ಭ್ರಮನೆಗೆ ಒಳಗಾದೆವು. ಮೂರು ಶವಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ, ಆರು ಶವಗಳು ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ” ಎಂದು ಸಾಂಗ್ಲಿ ಪೊಲೀಸ್

ಒಂದೇ ಮನೆಯೊಳಗೆ ಒಂಬತ್ತು ಶವ ಪತ್ತೆ| ಈ ಸಾವಿಗೆ ಕಾರಣವೇ ನಿಗೂಢ Read More »

ಜೂ.27 ರಿಂದ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ| ಹೀಗಿದೆ ವೇಳಾಪಟ್ಟಿ

ಸಮಗ್ರ ನ್ಯೂಸ್: 2021-22 ನೇ ಸಾಲಿನ ಎಸ್‌ಎಸ್ ಎಲ್ ಸಿ ಪೂರಕ ಪರೀಕ್ಷೆಯ ವೇಳಾ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ಜೂನ್ 27 ರಿಂದ ಜು. 4 ರವರೆಗೆ ಪರೀಕ್ಷೆ ನಡೆಯಲಿದೆ. ಎಸ್‌ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಶಾಲೆಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬಹುದು ಎಂದು ತಿಳಿಸಿದೆ. ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ. ಜೂನ್ 27-ವಿಜ್ಞಾನ, ರಾಜ್ಯಶಾಸ್ತ್ರ

ಜೂ.27 ರಿಂದ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ| ಹೀಗಿದೆ ವೇಳಾಪಟ್ಟಿ Read More »