June 2022

ಮಂಗಳೂರು: ಪೂರ್ತಿ ಜಲಸಮಾದಿಯಾದ ಪ್ರಿನ್ಸೆಸ್ ಮಿರಾಲ್

ಸಮಗ್ರ ನ್ಯೂಸ್: ಮಂಗಳೂರಿನ ಉಳ್ಳಾಲ ಬಟ್ಟಪ್ಪಾಡಿ ಬಳಿ ಅರಬ್ಬಿ ಸಮುದ್ರದಲ್ಲಿ ತಳತಾಗಿ ನಿಂತಿದ್ದ ಪ್ರಿನ್ಸೆಸ್‌ ಮಿರಾಲ್‌ ಸರಕಿನ ಹಡಗು ಬಹುತೇಕ ಪೂರ್ತಿಯಾಗಿ ಮುಳುಗಿದೆ. ಸಮುದ್ರ ತೀರಾ ಪ್ರಕ್ಷುಬ್ಧ ಸ್ಥಿತಿಯಲ್ಲಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಹಡಗಿನ ರಂಧ್ರ ಮುಚ್ಚುವ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಹಡಗಿನ ಮಾಲಕರು ನಿಯೋಜಿಸಿರುವ ಸ್ಮಿತ್‌ ಸಾಲ್ವೇಜ್‌ ಏಜೆನ್ಸಿಯವರು ಮಂಗಳೂರಿಗೆ ಗುರುವಾರ ಆಗಮಿಸಿದ್ದು ಹಡಗಿನ ಪ್ರಾಥಮಿಕ ತಪಾಸಣೆ ನಡೆಸಿದ್ದಾರೆ. ಜಿಲ್ಲಾಡಳಿತದ ಪರವಾಗಿ ಮಂಗಳೂರು ಸಹಾಯಕ ಆಯುಕ್ತರು ಮತ್ತು ಕೋಸ್ಟ್‌ಗಾರ್ಡ್‌ ಡಿಐಜಿ ಏಜೆನ್ಸಿಯವರೊಂದಿಗೆ ಹಡಗು ಮುಳುಗಿರುವ ಜಾಗಕ್ಕೆ […]

ಮಂಗಳೂರು: ಪೂರ್ತಿ ಜಲಸಮಾದಿಯಾದ ಪ್ರಿನ್ಸೆಸ್ ಮಿರಾಲ್ Read More »

ಭಾರತ ದೇಣಿಗೆ ನೀಡಿದ್ದಲ್ಲ, ಸಾಲ ಕೊಟ್ಟಿದ್ದು- ಶ್ರೀಲಂಕಾ ಹೇಳಿಕೆ

ಸಮಗ್ರ ನ್ಯೂಸ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಮಗೆ ಭಾರತ ನೀಡಿದ ಹಣಕಾಸಿನ ನೆರವು ದತ್ತಿ ದೇಣಿಗೆಗಳಲ್ಲ’ ಎಂದು ಶ್ರೀಲಂಕಾದ ಸಂಸತ್ತಿಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ತಿಳಿಸಿದ್ದಾರೆ. ಅಲ್ಲದೆ, ಈ ಹಣಕಾಸಿನ ನೆರವಿನ ಸಾಲವನ್ನು ಮರುಪಾವತಿಸಲೇಬೇಕು ಎಂದು ಹೇಳಿದ್ದಾರೆ. ಭಾರತದಿಂದ ನಾವು ಸಾಲದ ರೂಪದಲ್ಲಿ ₹31 ಸಾವಿರ ಕೋಟಿ ನೆರವು ಪಡೆದಿದ್ದೇವೆ. ಅಲ್ಲದೆ, ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡುವಂತೆ ಭಾರತಕ್ಕೆ ಕೋರಿದ್ದೆವು. ಆದರೆ, ಇಂಥ ಸಂದರ್ಭದಲ್ಲಿ ಭಾರತವೊಂದೇ ನಿರಂತರವಾಗಿ ನಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ. ನಮಗೆ

ಭಾರತ ದೇಣಿಗೆ ನೀಡಿದ್ದಲ್ಲ, ಸಾಲ ಕೊಟ್ಟಿದ್ದು- ಶ್ರೀಲಂಕಾ ಹೇಳಿಕೆ Read More »

ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಗೆ ಬಂದ ಮಂಗಳೂರಿನ ವ್ಯಕ್ತಿ!

ಸಮಗ್ರ ನ್ಯೂಸ್: ಮಂಗಳೂರು ಮೂಲದ ವ್ಯಕ್ತಿಯೊರ್ವ ಉಡುಪಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು, ಸಮಾಜ ಸೇವಕರ ಸಮಯ ಪ್ರಜ್ಞೆಯಿಂದ ಬದುಕಿಸಿರುವ ಘಟನೆ ಬುಧವಾರ ನಡೆದಿದೆ. ಹೋಟೆಲಿನಲ್ಲಿ ಬಾಣಸಿಗರಾಗಿದ್ದ ಮಂಗಳೂರು ಮೂಲದ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳಾವಕಾಶ ಹುಡುಕುತ್ತಿದ್ದರು. ಈ ಬಗ್ಗೆ ವಿಷಯ ತಿಳಿದ ಉಡುಪಿಯ ಸಮಾಜಸೇವಕ ಕಾರ್ಯಕರ್ತರು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಬಳಿಕ ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಕಾರ್ಯಕರ್ತರಾದ ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಒಳಕಾಡು, ದೀಪಕ್, ಹರೀಶ್ ಅಮೀನ್ ಭಾಗಿಯಾಗಿದ್ದರು.

ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಗೆ ಬಂದ ಮಂಗಳೂರಿನ ವ್ಯಕ್ತಿ! Read More »

ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 81ರ ವೃದ್ಧ| ಭ್ರೂಣದಲ್ಲಿನ ಡಿಎನ್ಎ ಪರೀಕ್ಷೆಯಿಂದ ಹೊರಬಿತ್ತು ಸತ್ಯ

ಸಮಗ್ರ ನ್ಯೂಸ್: ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕ ರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ವರಿತಗತಿ ನ್ಯಾಯಾಲಯವು 66 ವರ್ಷದ ವ್ಯಕ್ತಿಯೊಬ್ಬರಿಗೆ 81 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಇದರ ಜತೆಗೆ ಅಪರಾಧಿಗೆ ₹ 2.2 ಲಕ್ಷ ದಂಡವನ್ನೂ ವಿಧಿಸಿ ಪೋಕ್ಸೊ ಪ್ರಕ ರಣಗಳ ವಿಶೇಷ ನ್ಯಾಯಾಧೀಶ ಟಿ.ಜಿ. ವರ್ಗೀಸ್‌ ಆದೇಶಿಸಿದ್ದಾರೆ. ಶಿಕ್ಷೆಯನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬೇಕಾಗಿದೆ. 2020ರ ಅಕ್ಟೋಬರ್‌ ನಲ್ಲಿ ಬಾಲಕಿ ಆಸ್ಪತ್ರೆಗೆ ದಾಖಲಾದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ.

ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 81ರ ವೃದ್ಧ| ಭ್ರೂಣದಲ್ಲಿನ ಡಿಎನ್ಎ ಪರೀಕ್ಷೆಯಿಂದ ಹೊರಬಿತ್ತು ಸತ್ಯ Read More »

ಮಹಾರಾಷ್ಟ್ರದಲ್ಲಿ ಮಹಾಬಿಕ್ಕಟ್ಟು|ಪರಪುರುಷನ ಜೊತೆಗಿದ್ದ ಸಚಿವನ ‘ಪತ್ನಿ’ ಅರೆಸ್ಟ್!!

ಸಮಗ್ರ‌ ನ್ಯೂಸ್: ಒಂದೆಡೆ ಮಹಾರಾಷ್ಟ್ರ ಸರ್ಕಾರದ ಪತನದ ಅಂಚಿನಲ್ಲಿದ್ದರೆ, ಅದೇ ಇನ್ನೊಂದೆಡೆ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ್ ಮುಂಡೆ ನನ್ನ ಗಂಡ, ನಾನು ಆತನ ಎರಡನೆಯ ಹೆಂಡತಿ ಎಂದು ಭಾರಿ ಕೋಲಾಹಲ ಸೃಷ್ಟಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾ ಶರ್ಮಾ (43) ಎಂಬ ಮಹಿಳೆ ಬಂಧನಕ್ಕೆ ಒಳಗಾಗಿದ್ದಾರೆ. ಈಕೆ ಈ ಹಿಂದೆ ಭಾರಿ ಸುದ್ದಿ ಮಾಡಿದ್ದರು. ತಾವು ಮುಂಡೆ ಅವರ ಎರಡನೆಯ ಪತ್ನಿ ಎಂದು ಹೇಳಿಕೊಂಡು ತೀವ್ರ ಗಲಾಟೆ ಸೃಷ್ಟಿಸಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು

ಮಹಾರಾಷ್ಟ್ರದಲ್ಲಿ ಮಹಾಬಿಕ್ಕಟ್ಟು|ಪರಪುರುಷನ ಜೊತೆಗಿದ್ದ ಸಚಿವನ ‘ಪತ್ನಿ’ ಅರೆಸ್ಟ್!! Read More »

ಸುಳ್ಯ: ನ.ಪಂ. ಅನುದಾನದಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡ ಧ್ವಂಸ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ

ಸಮಗ್ರ ನ್ಯೂಸ್: ಸುಳ್ಯ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಆದಿಮೊಗೇರ್ಕಳ ದೈವಸ್ಥಾನದ ರೆಕಾರ್ಡ್ ಜಾಗದಲ್ಲಿ ನ.ಪಂ ನಿಂದ ನಿರ್ಮಿಸಿದ ಶೌಚಾಲಯವನ್ನು ದ್ವಂಸ ಗೊಳಿಸಿದವರ ಮೇಲೆ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹಿಸಿದೆ. ವೇದಿಕೆ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ‘ ನಗರಪಂಚಾಯಿತಿ ನವರು ದೇವಸ್ಥಾನಕ್ಕೆ ರೆಕಾರ್ಡ್ ಆಗಿ ಇದ್ದಂತ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಸಾರ್ವಜನಿಕ ಶೌಚಾಲಯ ಸರಕಾರಿ ಜಾಗದಲ್ಲಿ ನಿರ್ಮಾಣ ಮಾಡಬೇಕು ಮತ್ತು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಮತ್ತು ಸರಕಾರದಿಂದ ಶೌಚಾಲಯ ನಿರ್ಮಾಣಕ್ಕೆ

ಸುಳ್ಯ: ನ.ಪಂ. ಅನುದಾನದಲ್ಲಿ ನಿರ್ಮಿಸಿದ ಶೌಚಾಲಯ ಕಟ್ಟಡ ಧ್ವಂಸ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ Read More »

ಸುಳ್ಯ: ಶ್ರೀ ಗಣಪತಿ ಕಲಾಕೇಂದ್ರದಲ್ಲಿ ಯೋಗ ದಿನಾಚರಣೆ

ಸಮಗ್ರ ನ್ಯೂಸ್: ಸುಳ್ಯ ಎ.ಪಿ.ಎಂ.ಸಿ.ವಾಣಿಜ್ಯ ಸಂಕೀರ್ಣ ದಲ್ಲಿರುವ ಶ್ರೀ ಗಣಪತಿ ಕಲಾ ಕೇಂದ್ರದಲ್ಲಿ ಡಿ-ಯುನೈಟೆಡ್ ಡಾನ್ಸ್ ಸ್ಟುಡಿಯೋ ಸುಳ್ಯ ಇದರ ಸಹಯೋಗದಲ್ಲಿ 8ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯು ಜೂ.21 ರಂದು ನಡೆಯಿತು. ಯೋಗ ಗುರು ಶರತ್ ಮರ್ಗಿಲಡ್ಕ ಮತ್ತು ಮೋನಿಶ್ ತಂಟೆಪ್ಪಾಡಿ ಯೋಗ ತರಬೇತಿ ನೀಡಿದರು. ಕಲಾ ಕೇಂದ್ರದ ಹಾಗೂ ಡಿ-ಯುನೈಟೆಡ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಯೋಗ ಗುರು ಶರತ್ ಮರ್ಗಿಲಡ್ಕ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.ಕಲಾ ಕೇಂದ್ರದ ವಿನೋದ್ ಅರಂಬೂರು,ಶ್ರೀಮತಿ ವಿಧ್ಯಾಶ್ರೀ ವಿನೋದ್,ಡಿ-ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋದ ಅಭಿಜಿತ್

ಸುಳ್ಯ: ಶ್ರೀ ಗಣಪತಿ ಕಲಾಕೇಂದ್ರದಲ್ಲಿ ಯೋಗ ದಿನಾಚರಣೆ Read More »

ಮಂಗಳೂರು: ತಾಂತ್ರಿಕ ದೋಷದಿಂದ ಅವಘಡಕ್ಕೆ ಒಳಗಾದ ವಿದೇಶಿ ಹಡಗು| 15 ಜನರ ರಕ್ಷಣೆ ಮಾಡಿದ ಕರಾವಳಿ ಕೋಸ್ಟ್ ಗಾರ್ಡ್

ಸಮಗ್ರ ನ್ಯೂಸ್: ತಾಂತ್ರಿಕ ದೋಷದಿಂದ ಸರಕು ಸಾಗಾಟದ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗುವ ಭೀತಿ ಎದುರಿಸುತ್ತಿರುವ ಘಟನೆ ಮಂಗಳೂರಿನ 5.6 ನಾಟೆಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ನಡೆದಿದೆ. ಮಲೇಷ್ಯಾದಿಂ‌ದ ಲೆಬನಾಲ್‌ಗೆ ಸಾಗುತ್ತಿದ್ದ ಪ್ರಿನ್ಸೆಸ್ ಮಿರಾಲ್ ಎಂಬ ಹೆಸರಿನ ಹಡಗು ಇದಾಗಿದ್ದು, ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವಘಢ ಸಂಭವಿಸಿದೆ. ಹಡಗಿನಲ್ಲಿದ್ದ 15 ಮಂದಿ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. ಈ ನೌಕೆ ಲೆಬನಾಲ್ ದೇಶದಿಂದ ಮಲೇಶ್ಯಾದಿಂದ ಉಕ್ಕಿನ ಕಾಯಿಲ್ ಗಳನ್ನು ಸಾಗಿಸುತಿತ್ತು. ಉಳ್ಳಾಲ ಕಡಲಕಿನಾರೆಯಿಂದ

ಮಂಗಳೂರು: ತಾಂತ್ರಿಕ ದೋಷದಿಂದ ಅವಘಡಕ್ಕೆ ಒಳಗಾದ ವಿದೇಶಿ ಹಡಗು| 15 ಜನರ ರಕ್ಷಣೆ ಮಾಡಿದ ಕರಾವಳಿ ಕೋಸ್ಟ್ ಗಾರ್ಡ್ Read More »

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ| 155 ಮಂದಿ ಸಾವು

ಸಮಗ್ರ ನ್ಯೂಸ್: ಅಫ್ಘಾನಿಸ್ತಾನದಲ್ಲಿ ಪ್ರಭಲ ಭೂಕಂಪನ ಸಂಭವಿಸಿದ್ದು, ಈ ಭೂಕಂಪದಲ್ಲಿ 155 ಮಂದಿ ಸಾವನ್ನಪ್ಪಿರುವ ಮಾಹಿತಿ ಹೊರಬಿದ್ದಿದೆ. ಇನ್ನು ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಹೆಚ್ಚಿನ ಸಾವುಗಳು ಪಕ್ತಿಕಾ ಪ್ರಾಂತ್ಯದಲ್ಲಿ ಸಂಭವಿಸಿದ್ದು, ಅಲ್ಲಿ 100 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ಹೇಳಿದ್ದಾರೆ. ಅಧಿಕಾರಿಗಳು ಹೆಚ್ಚಿನ ಸಾವುನೋವುಗಳನ್ನು ಪರಿಶೀಲಿಸುತ್ತಿರುವುದರಿಂದ ಪೂರ್ವ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್ ನಲ್ಲಿಯೂ ಸಾವುಗಳು ವರದಿಯಾಗಿವೆ‌ ಎಂದು

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ| 155 ಮಂದಿ ಸಾವು Read More »

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಸಾಕ್ಷರತಾ ಇಲಾಖೆ| ಬ್ರಿಟೀಷರ ಕಾಲದ ಹೆಸರು ಬದಲಾವಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರು ಬದಲಾವಣೆ ಮಾಡಿ ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಿದೆ. ಬ್ರಿಟಿಷರ ಕಾಲದಲ್ಲಿ ಅಂದಿನ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ನಾಮಕರಣ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಾರ್ವನಿಕ ಶಿಕ್ಷಣ ಇಲಾಖೆ ಎಂದೇ ಕರೆಯಲಾಗುತ್ತಿದೆ. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಾಕ್ಷರತಾ ಇಲಾಖೆ ಎಂದು ಬದಲಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ವೆಬ್ ಸೈಟ್ ಸ್ಕೂಲ್ ಎಜುಕೇಶನ್ (www. Schooleduction.kar.in)

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಸಾಕ್ಷರತಾ ಇಲಾಖೆ| ಬ್ರಿಟೀಷರ ಕಾಲದ ಹೆಸರು ಬದಲಾವಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ Read More »