ಸಮಗ್ರ ನ್ಯೂಸ್: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಔರಂಗಾಬಾದ್, ಉಸ್ಮಾನಾಬಾದ್ ಮತ್ತು ಮುಂಬರುವ ಹೊಸ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡುವ ವಿವಾದಾತ್ಮಕ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಅದಾನಿ ಗ್ರೂಪ್ ಪ್ರಸ್ತುತ ರಾಯಗಢದಲ್ಲಿ ನಿರ್ಮಿಸುತ್ತಿರುವ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರಾವಳಿ ಕೊಂಕಣ ಪ್ರದೇಶದ ಪ್ರಮುಖ ನಾಯಕ ದಿವಂಗತ ‘ದಿನಕರ್ ಬಾಲು ಪಾಟೀಲ್’ ಅವರ ಹೆಸರಿಡಲಾಗುತ್ತಿದೆ. ಇದಕ್ಕು ಮುನ್ನ ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರಿಡಲು ಯೋಚಿಸಲಾಗಿತ್ತು.