ಸಮಗ್ರ ನ್ಯೂಸ್ : ಮಾಜಿ ಸಿ ಎಂ ಫಡ್ನವೀಸ್ ಅವರಿಂದ ನೂತನ ಸರಕಾರಕ್ಕೆ ಬಾಹ್ಯ ಬೆಂಬಲ ಘೋಷಣೆ ಇಂದೇ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಪಡೆದ ಏಕನಾಥ್ ಶಿಂಧೆ
ಶಿವಸೇನೆ ರೆಬೆಲ್ ನಾಯಕ ಏಕನಾಥ್ ಶಿಂಧೆ ಬಣದ ಸಹಕಾರದೊಂದಿಗೆ ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ.
ಈಗಾಗಲೇ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಮನವಿ ಮಾಡಿದ್ದರು.
ಈಗ ರಾಜ್ಯಪಾಲರು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ್ದು, ಮಹಾರಾಷ್ಟ್ರ ನೂತನ ಸಿಎಂ ಆಗಿ ಇಂದು ಸಂಜೆ 7.30 ಗಂಟೆಗೆ ಪದಗ್ರಹಣ ಮಾಡಲಿದ್ದಾರೆ.