ವಿಟ್ಲ: ಬಸ್ಸು ತಂಗುದಾಣದಲ್ಲಿ ರಕ್ತ ಪತ್ತೆಯಾದ ಪ್ರಕರಣ

*ಸತ್ಯಾಂಶ ಬಯಲಿಗೆ*

Ad Widget ... ..

Ad Widget

ಸಮಗ್ರ ನ್ಯೂಸ್ : ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿದ್ದು ಸಾರ್ವಜನಿಕರ ಬಸ್ಸು ತಂಗುದಾಣದಲ್ಲಿ ರಕ್ತ ಪತ್ತೆಯಾಗಿರುವ ಘಟನೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ -ಪುತ್ತೂರು ರಸ್ತೆಯ ಬದನಾಜೆಯಲ್ಲಿ ನಡೆದಿದೆ.

ಬದನಾಜೆ ಬಸ್ಸು ತಂಗುದಾಣದ ಪಕ್ಕದಲ್ಲಿ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ರಕ್ತವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಸ್ಥಳಕ್ಕಾಗಮಿಸಿದ ವಿಟ್ಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

ನೆಲ್ಲಿಗುಡ್ಡೆ ಮೂಲದ ವ್ಯಕ್ತಿ ಕುಡಿತದ ಮತ್ತಿನಲ್ಲಿ ಬದನಾಜೆ ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದು, ಈ ವೇಳೆ ಆ ವ್ಯಕ್ತಿ ಬಿದ್ದು ಮುಖ ಹಾಗೂ ಮೂಗಿನ ಭಾಗಕ್ಕೆ ಗಾಯವಾಗಿ ರಕ್ತ ಬಂದಿದ್ದು, ಬೆಳಗ್ಗಿನ ವೇಳೆ ಅಲ್ಲಿಂದ ಆತ ಎದ್ದು ವಿಟ್ಲ ಕಡೆಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *