Ad Widget .

ಬಂಟ್ವಾಳ: ಸ್ಟೀಲ್ ಪಾತ್ರೆಗಳ ಕಳವುಗೈದ ಆರೋಪಿ ಬಂಧನ

ಸಮಗ್ರ ನ್ಯೂಸ್ : ಮಣಿನಾಲ್ಕೂರು ಗ್ರಾಮದ ಅಂಗರಗಂಡಿ ಹಂಡೀರು ಎಂಬಲ್ಲಿ ಮನೆಯೊಂದರಿಂದ ಸ್ಟೀಲ್ ಪಾತ್ರೆಗಳು ಮತ್ತು ಮನೆಬಳಕೆಯ ಸಾಮಾಗ್ರಿಗಳನ್ನು ಕಳವುಗೈದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

Ad Widget . Ad Widget .

ಬಂಧಿತನನ್ನು ಅಂಗರಗಂಡಿ ನಿವಾಸಿ ಪ್ರವೀಣ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪ್ರವೀಣ್‌ನ ಸಹೋದರ ಸತೀಶ್‌ ತಲೆಮರೆಸಿಕೊಂಡಿದ್ದಾನೆ. ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯಲ್ಲಿ ಉಕ್ಕಿನ ಪಾತ್ರೆಗಳನ್ನು ತೊಳೆದು ಹೊರಗಿಟ್ಟಿದ್ದ ವೇಳೆ ಜೂನ್ 25ರಂದು ಆರೋಪಿಗಳು ಕಳವುಗೈದಿದ್ದರು. ಬಾಯ್ಲರ್‌ಗಳು, ಮೂರು ಸ್ಟೀಲ್ ಪಾತ್ರೆಗಳು ಹಾಗೂ ಎರಡು ಫೈಬರ್‍ ಚಯರ್‌ಗಳು ಸೇರಿ 3,500 ರೂ. ಬೆಲೆ ಬಾಳುವ ವಸ್ತುಗಳನ್ನು ಆರೋಪಿಗಳು ಕಳವು ಮಾಡಿದ್ದರು. ಮಹಿಳೆ ಮುತ್ತು ಅವರ ಅಳಿಯ ಪದ್ಮನಾಭ ನಾಯಕ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿ ಪ್ರವೀಣ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Ad Widget . Ad Widget .

ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ಸ್‌ಪೆಕ್ಟರ್‍ ಟಿ.ಡಿ. ನಾಗರಾಜ್, ಪಿಎಸ್‌ಐಗಳಾದ ಹರೀಶ್, ಸಂಜೀವ ಮತ್ತಿತರರು ಕಾರ್ಯಾಚರಣೆ ನಡೆಸಿದ್ದಾರೆ.

Leave a Comment

Your email address will not be published. Required fields are marked *