Ad Widget .

ಕೊಡಗು: ಭೂಕಂಪನದ ಬಳಿಕ ಗುಡ್ಡ ಕುಸಿತದ ಆತಂಕ| ಮನೆ ಮೇಲೆ ಬಿದ್ದ ಬಂಡೆಕಲ್ಲು

ಸಮಗ್ರ ನ್ಯೂಸ್: ಲಘು ಭೂಕಂಪನದ ಅನುಭವದಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯ ಜನತೆಗೆ ಈಗ ಮತ್ತೊಂದು ಆಘಾತ ಉಂಟಾಗಿದೆ. ಭಾರಿ ಗಾತ್ರದ ಬಂಡೆ ಕಲ್ಲು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿರುವ ಘಟನೆ ಜಿಲ್ಲೆಯ ಕರಿಕೆಯ ಕುಂಡತ್ತಿಕಾನ ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇಲ್ಲಿನ ಕರಿಕೆ ನಿವಾಸಿ ಜಾನಕಿ ಎಂಬುವರ ಮನೆ ಮೇಲೆ ರಾತ್ರಿ ವೇಳೆ ಬಂಡೆಕಲ್ಲು ಉರುಳಿ ಬಿದ್ದಿದೆ. ರಾತ್ರಿ‌ ಮನೆ ವೇಲೆ ಬಂಡೆ ಬಿದ್ದಿದ್ದು, ಮನೆಯ ಮಾಲೀಕರು ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಕರಿಕೆ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭೂಮಿ ಕಂಪನವಾಗುತ್ತಿದ್ದು, ಬಂಡೆ ಸಡಿಲಗೊಂಡು ರಾತ್ರಿ ಸಮಯದಲ್ಲಿ ಉರುಳಿ ಬಿದ್ದಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.

Ad Widget . Ad Widget . Ad Widget .

ಜೂ 25 ರಂದು ಬೆಳಗ್ಗೆ 9 ಗಂಟೆ 10 ನಿಮಿಷಕ್ಕೆ ಭೂಕಂಪವಾಗಿತ್ತು. ಜೂ.28ರಂದು ಎರಡು ಬಾರಿ ಭೂಮಿ ಕಂಪಿಸಿದೆ. ಮೂರು ದಿನಗಳ ಹಿಂದೆ ಕರಿಕೆಯಿಂದ ನಾಲ್ಕು ಕಿಲೋ ಮೀಟರ್ ವಾಯುವ್ಯ ಭಾಗದಲ್ಲಿ ಭೂಕಂಪವಾಗಿತ್ತು. ಭೂಕಂಪನವಾದ ಮರು ದಿನವೇ ಬಂಡೆ ಉರುಳಿ ಬಿದ್ದಿದೆ. ಮತ್ತೆರಡು ಬಂಡೆಗಳು ಮನೆ ಮೇಲೆ ಉರುಳುವ ಆತಂಕ ಎದುರಾಗಿದ್ದು, ಮತ್ತಷ್ಟು ಆತಂಕ ಮನೆ ಮಾಡಿದೆ. ಹೀಗಾಗಿ ಕರಿಕೆ ಭಾಗದ ಸುತ್ತಮುತ್ತಲಿನ ಭಾಗದ ಜನರು ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Comment

Your email address will not be published. Required fields are marked *