ಸಮಗ್ರ ನ್ಯೂಸ್: ಅರೆಭಾಷೆ ಸಾಂಸ್ಕೃತಿಕ ಕ್ಷೇತ್ರದ ಪ್ರಗತಿ ಮತ್ತು ಭಾಷಾ ಬೆಳವಣಿಗೆಗೆ ಕಲಾವಿದರ ಕೊಡುಗೆ ಅಪಾರ, ಇತ್ತೀಚಿನ ದಿನಗಳಲ್ಲಿ ಅರೆಭಾಷೆ ರಂಗಭೂಮಿ ಮತ್ತು ಸಿನಿಮಾ ರಂಗ ಶ್ರೀಮಂತಿಕೆಯನ್ನು ಕಂಡು ಕೊಳ್ಳುತಿದ್ದು ಅರೆಭಾಷೆಯ ಗೌರವ ಮತ್ತು ಹಿರಿಮೆಯನ್ನು ಇಮ್ಮಡಿ ಗೊಳಿಸುತ್ತಿದೆ. ಅರೆಭಾಷೆ ಕಲಾವಿದರ ಒಗ್ಗಟ್ಟು ಮತ್ತು ಅರೆಭಾಷೆ ಕಲಾ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ ಇದರ ಆಡಳಿತ ಮಂಡಳಿಯ ಸಾಮಾನ್ಯ ಸಭೆ ದಿನಾಂಕ 25 ಜೂನ್ 2022 ಶನಿವಾರ ಸಮಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ, ಶ್ರೀ ಟೆಕ್ನಾಲಜಿಸ್ ಕಚೇರಿ ಗಾಂಧಿನಗರ ಸುಳ್ಯ ಇಲ್ಲಿ ಕ. ರಾ. ಅ. ಕ. ಒಕ್ಕೂಟದ ಉಪಾಧ್ಯಕ್ಷರಾದ ಯೋಗೀಶ್ ಹೊಸೋಳಿಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಒಕ್ಕೂಟದ ಮುಂದಿನ ಕಾರ್ಯ ಪ್ರಗತಿಯ ಬಗ್ಗೆ ಮಾತುಕತೆ ನಡೆಸಿ ಒಕ್ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ಅರೆಭಾಷೆಗೆ ಸಂಬಂಧಿತ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಹಾಗೂ ಮುಂದಿನ ಒಕ್ಕೂಟದ ಸಭೆಯನ್ನು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಪದಾಧಿಕಾರಿಗಳ ಮತ್ತು ಸರ್ವ ಸದಸ್ಯರ ಸಭೆ ಕರೆದು ಒಕ್ಕೂಟದ ಮುಂದಿನ ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ತೀರ್ಮಾನಿಸುವುದೆಂದು ನಿರ್ಧರಿಸಲಾಯಿತು ಒಕ್ಕೂಟದ ಕಾರ್ಯದರ್ಶಿ ಸುಧೀರ್ ಏನೆಕಲ್, ಕೋಶಾಧಿಕಾರಿ ತೇಜೇಶ್ವರ್ ಕುಂದಲ್ಪಾಡಿ, ಪ್ರಧಾನ ಸಂಚಾಲಕರು ಭವಾನಿಶಂಕರ್ ಅಡ್ತಲೆ, ಗೌರವ ಸಲಹೆಗಾರರು ಹಿರಿಯರು ತೇಜಕುಮಾರ್ ಬಡ್ಡಡ್ಕ, ಸಂಘಟನ ಕಾರ್ಯದರ್ಶಿ ಪ್ರಸಾದ್ ಕಾಟೂರು, ನಿರ್ದೇಶಕರಾದ ವಿಜಯ ಕುಮಾರ್ ದೆಂಗೋಡಿ, ಹಾರಂಬಿ ಯತೀನ್ ವೆಂಕಪ್ಪ, ಪ್ರವೀಣ್ ಕಾಟೂರು ಉಪಸ್ಥಿತರಿದ್ದರು. ಸುಧೀರ್ ಏನೆಕಲ್ ಸ್ವಾಗತಿಸಿ ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು