Ad Widget .

ಪತ್ರಕರ್ತ ಹೇಮಂತ್ ಸಂಪಾಜೆಗೆ ‘ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ’ ರಾಜ್ಯ ಪ್ರಶಸ್ತಿ ಪ್ರಧಾನ

ಸಮಗ್ರ ನ್ಯೂಸ್: ಭಾರತೀಯ ಸೇನೆಯ ಮೊದಲ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಹೆಸರಿನಲ್ಲಿ ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಲ ಕೊಡಮಾಡಲಾದ ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ರಾಜ್ಯ ಪ್ರಶಸ್ತಿಯನ್ನು ಪತ್ರಕರ್ತ ಹೇಮಂತ್ ಸಂಪಾಜೆಗೆ ಮೈಸೂರಿನಲ್ಲಿ ಶನಿವಾರ ಪ್ರದಾನ ಮಾಡಲಾಯಿತು. ಮಾಜಿ ಸೈನಿಕ ಹಾಲಿ ಶಾಸಕ ಸಿ.ಎನ್.ಮಂಜೇಗೌಡ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

Ad Widget . Ad Widget .

ಇದೇ ವೇಳೆ ಹೇಮಂತ್ ಸಂಪಾಜೆಯವರನ್ನು ಅಭಿನಂದಿಸಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ ಎನ್ .ಕೆ.ಶಿವಣ್ಣ, ಹೇಮಂತ್ ಒಬ್ಬರು ಸಮಾಜಮುಖಿ ಪತ್ರಕರ್ತ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರೊಳಗೆ ಒಂದಾಗುವ ಸ್ನೇಹ ಜೀವಿ. ಇಂತಹ ಪತ್ರಕರ್ತರ ಅವಶ್ಯಕತೆ ಸಮಾಜಕ್ಕಿದೆ. ಅಂಥಹವರನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ನಮ್ಮ ಸಂಘಕ್ಕೆ ಸಂತೋಷವಾಗುತ್ತಿದೆ ಎಂದು ತಿಳಿಸಿದರು.

Ad Widget . Ad Widget .

ಸೇನೆ ಸೇರಬೇಕು ಎನ್ನುವುದು ನನ್ನ ಜೀವನದ ಕನಸಾಗಿತ್ತು. ಅದು ಸಾಧ್ಯವಾಗಿರಲಿಲ್ಲ. ಆದರೆ ಇಂದು ದೇಶಸೇವೆಗೈದ ಸೇನಾಧಿಕಾರಿಗಳ ಸಮ್ಮುಖದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವ ಮೂಲಕ ಆ ಕೊರತೆ ನೀಗಿದೆ. ಇದು ಯಾವುದೋ ಒಂದು ಜನ್ಮದಲ್ಲಿ ಮಾಡಿದ ಪುಣ್ಯದ ಫಲವಾಗಿದೆ ಎಂದು ಹೇಮಂತ್ ಸಂಪಾಜೆ ತಿಳಿಸಿದರು.

ವಿವೇಕಾನಂದ ನಗರದ ನಾಗಮ್ಮ ಕಲ್ಯಾಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಾಜಿ ಸೈನ್ಯಾಧಿಕಾರಿಗಳು, ಮಾಜಿ ಸೈನಿಕರು, ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಇದೇ ವೇಳೆ ಸೇನೆಯಲ್ಲಿ ಸೇವೆ ಸಲ್ಲಿಸಿ ಅತ್ಯುತ್ತಮ ಸಾಧನೆಗೈದ ಹತ್ತು ಮಂದಿ ಸೈನಿಕರಿಗೂ ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ್, ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಜಂಟಿ ಕಾರ್ಯದರ್ಶಿ ಧರ್ಮೇಂದ್ರ ಬಿ.ಕೆ, ಸಹ ಕಾರ್ಯದರ್ಶಿ ದೇವರಾಜು ಡಿ.ಬಿ, ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಮಾರ್, ಖಜಾಂಚಿ ಜೀವನ್, ಲಾಲೂ ಕುಮಾರ್ ಕಡ್ಯದ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *