Ad Widget .

ಆನ್ಲೈನ್ ಕ್ಲಾಸ್ನಲ್ಲಿ ಹೋಂ ವರ್ಕ್ ಬದಲು ಸೆಕ್ಸ್ ವಿಡಿಯೋ ಕಳಿಸಿದ ವಿದ್ಯಾರ್ಥಿ!!

ಸಮಗ್ರ ನ್ಯೂಸ್: ಕೊವೀಡ್ ಕಾರಣದಿಂದ ಆನ್ ಲೈನ್ ಕ್ಲಾಸ್ ಮುಗಿದಿದ್ದು ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಆದರೆ ದೆಹಲಿಯ ಕೆಲವು ಶಾಲೆಗಳಲ್ಲಿ ಆನ್ ಕ್ಲಾಸ್ ಇನ್ನೂ ಮುಂದುವರೆದಿದೆ. ಆದರೆ ಇದೇ ಆನ್ ಲೈನ್ ಕ್ಲಾಸ್ ನಿಂದ ವಿದ್ಯಾರ್ಥಿಯೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

Ad Widget . Ad Widget .

ಆನ್‌ಲೈನ್ ನಲ್ಲಿ ತರಗತಿ ನಡೆಸೋ ಶಿಕ್ಷಕರು, ಆನ್ ಲೈನ್ ನಲ್ಲೇ ಹೋಮ್ ವರ್ಕ್ ಕಳುಹಿಸೋಕೆ ಹೇಳ್ತಾರೆ. ಆದರೆ 6ನೇ ತರಗತಿಯ ವಿದ್ಯಾರ್ಥಿಯೋರ್ವ ಹೋಂ ವರ್ಕ್‌ ಕಳುಹಿಸುವ ಬದಲಾಗಿ ಅಶ್ಲೀಲ ವೀಡಿಯೋ ಕ್ಲಿಪ್ ಕಳುಹಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

Ad Widget . Ad Widget .

ದೆಹಲಿ ಸರ್ಕಾರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕರು ಹೋಂ ವರ್ಕ್‌ಗಳನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಮಾಡಿದ್ದ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹೋಂ ವರ್ಕ್‌ ಬದಲಾಗಿ ಅಶ್ಲೀಲ ವೀಡಿಯೋ ಹಂಚಿಕೊಂಡಿದ್ದಾನೆ.

ಈ ಕುರಿತು ಶಾಲೆ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಬಾಲಾಪರಾಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ವಿದ್ಯಾರ್ಥಿಯನ್ನು ಬಾಲಮಂದಿರದಲ್ಲಿರಿಸಿ ಕೌನ್ಸೆಲಿಂಗ್ ನೀಡಲಾಗಿದೆ ಎಂದು ಡಿಸಿಪಿ ಸಂಜಯ್‌ಕುಮಾರ್ ಸೇನ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *