ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ನಾಲೆಗೆ ಬಿದ್ದು 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Ad Widget ... ..

ಗೋಕಾಕ್‍ನಿಂದ ಬೆಳಗಾವಿಗೆ ಬೆಳಗ್ಗೆ 7.30ರ ಸಮಯದಲ್ಲಿ ಬರುತ್ತಿದ್ದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆ ಬಳಿ ಪಲ್ಟಿಯಾಗಿ ಉರುಳಿಬಿದ್ದಿದೆ.

Ad Widget

ಈ ವೇಳೆ ಕ್ರೂಸರ್‍ನಲ್ಲಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಒಟ್ಟು 18 ಮಂದಿ ರೈಲುಹಳಿ ಜೋಡಣೆ ಕೆಲಸಕ್ಕೆಂದು ಅಕ್ಕತಂಗಿಯರ ಹಾಳದಿಂದ ಬಳ್ಳಾರಿಗೆ ಬರುತ್ತಿದ್ದರು. ಕಲ್ಯಾಳಪುಲ್ ಬಳಿ ಕ್ರೂಸರ್ ನಿಯಂತ್ರಣ ತಪ್ಪಿ ಈ ದುರಂತದ ಸಂಭವಿಸಿದೆ.ಕ್ರೂಸರ್‍ನ್ನು ಭೀಮೇಶ ಕುಂದರಗಿ ಎಂಬುವರು ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಸ್ಥಳಕ್ಕೆ ಮಾರಿಹಾಳ ಠಾಣಾ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸ್ಥಳಕ್ಕೆ ಬೆಳಗಾವಿ ನಗರಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ

Leave a Comment

Your email address will not be published. Required fields are marked *