Ad Widget .

ಕುಮಟಾ ಬೀಚ್ ನಲ್ಲಿ ನಾಲ್ವರು ನೀರು ಪಾಲು; ಇಬ್ಬರ ಶವ ಪತ್ತೆ

ಸಮಗ್ರ ನ್ಯೂಸ್: ಸಮುದ್ರಕ್ಕಿಳಿದ ನಾಲ್ವರು ಪ್ರವಾಸಿಗರು, ಅಲೆಗಳ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದಲ್ಲಿ ಶನಿವಾರ ನಡೆದಿದೆ. ಸಮುದ್ರ ಪಾಲಾದವರ ಪೈಕಿ ಇಬ್ಬರ ಮೃತದೇಹಗಳು ಸಿಕ್ಕಿದ್ದು, ಇನ್ನಿಬ್ಬರಿಗೆ ಹುಡುಕಾಟ ಮುಂದುವರಿದಿದೆ.

Ad Widget . Ad Widget .

ಮೃತರನ್ನು ಬೆಂಗಳೂರಿನ ಕಸ್ತೂರಬಾ ನಗರದ ಅರ್ಜುನ್ (23) ಹಾಗೂ ಪೀಣ್ಯದ ಚೈತ್ರಶ್ರೀ (27) ಎಂದು ಗುರುತಿಸಲಾಗಿದೆ. ರಾಜಾಜಿನಗರದ ತೇಜಸ್.ಡಿ (22) ಹಾಗೂ ಕನಕಪುರ ರಸ್ತೆಯ ಕಿರಣಕುಮಾರ (27) ಎಂಬುವವರಿಗೆ ಶೋಧ ಕಾರ್ಯ ಮಾಡಲಾಗುತ್ತಿದೆ. ಅವರು ಬೆಂಗಳೂರಿನ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು.

Ad Widget . Ad Widget .

ಶನಿವಾರ ಬೆಳಿಗ್ಗೆ ಎರಡು ಬಸ್‌ಗಳಲ್ಲಿ ಸುಮಾರು 85 ಮಂದಿ ಬಾಡದ ಸಿಲ್ವರ್ ಸ್ಯಾಂಡ್ ಬೀಚ್ ರೆಸಾರ್ಟ್‌ಗೆ ಬಂದಿದ್ದರು. ಅವರಲ್ಲಿ ನಾಲ್ವರು ಮಧ್ಯಾಹ್ನ ಊಟದ ಸಮಯದಲ್ಲಿ ಫೋಟೋ ತೆಗೆಯಲು ನೀರಿಗೆ ಇಳಿದಾಗ ಅವಘಡ ನಡೆದಿದೆ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *