Ad Widget .

ಸುಳ್ಯ: ಹಲವು ಕಡೆಗಳಲ್ಲಿ ಭೂಕಂಪನ!; ಆತಂಕಗೊಂಡ ಜನತೆ

ಸಮಗ್ರ ನ್ಯೂಸ್: ಮಡಿಕೇರಿ ತಾಲೂಕಿನ ಪೆರಾಜೆ ಹಾಗೂ ಸುಳ್ಯ ಅಡ್ತಲೆ ಭಾಗದಲ್ಲಿ ಭೂಮಿ ಕಂಪಿಸಿದ ಘಟನೆ ಇಂದು ಬೆಳಿಗ್ಗೆ 9.10 ವೇಳೆ ನಡೆದಿದೆ.

Ad Widget . Ad Widget .

ಪೆರಾಜೆ, ಅಡ್ತಲೆ ಸೇರಿದಂತೆ ಹಲವು ಕಡೆಗಳಲ್ಲಿ 45 ಸೆಕೆಂಡು ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಮೂಲಗಳ ಮಾಹಿತಿ ಲಭಿಸಿದೆ.

Ad Widget . Ad Widget .

ಇನ್ನು ತಾಲೂಕಿನ, ಸಂಪಾಜೆ, ಕೊಯನಾಡು, ಐವರ್ನಾಡು, ಪೇರಾಲು, ಮಂಡೆಕೋಲು ಭಾಗಗಳಲ್ಲಿ ಭೂಕಂಪವಾಗಿದ್ದು, ಹಲವು ಕಡೆಗಳಲ್ಲಿ ಮನೆ ಗೋಡೆ ಬಿರುಕು ಬಿಟ್ಟಿದೆ.

ಕಳೆದ ಕೆಲದಿನಗಳ ಹಿಂದೆ ಮಡಿಕೇರಿ, ಹಾಸನ ಜಿಲ್ಲೆಗಳಲ್ಲಿ ಭೂಕಂಪನವಾಗಿದ್ದು ಇದರ ಮುಂದುವರಿದ ಭಾಗವಾಗಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗಡಿಭಾಗದಲ್ಲಿ ಕಂಪನವಾಗಿರುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *