ಕುಂದಾಪುರ: ಲಾರಿ ಡಿಕ್ಕಿ ಹೊಡೆದ ಬೈಕ್ |ಐಟಿಐ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್ : ಕುಂದಾಪುರ ಸಮೀಪದ ಹೊಸಂಗಡಿ ಕೆರೆಕಟ್ಟೆ ಬಳಿ ಶುಕ್ರವಾರ ಸಂಜೆ ಬೈಕ್‌ಗೆ ಗ್ಯಾಸ್‌ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

Ad Widget ... ..

ಮೃತರನ್ನು ಬೈಕ್‌ ಹಿಂಬದಿ ಸವಾರ, ಗಂಗನಾಡು ಕ್ಯಾತ್ತೂರು ನಿವಾಸಿ ಸೃಜನ್ ನಾಗರಾಜ ಮರಾಠಿ(19) ಎಂದು ಗುರುತಿಸಲಾಗಿದ್ದು, ಬೈಕ್‌ ಸವಾರ ದಿವಾಕರ ನಾಯ್ಕ (19) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೃಜನ್ ಗಂಗನಾಡಿಂದ ಹೊಸಂಗಡಿ ಅಜ್ಜಿ ಮನೆಗೆ ಬಂದಿದ್ದು, ಸಂಬಂಧಿ ದಿನಕರ ಜತೆ ಬೈಕಲ್ಲಿ ತೆರಳುತ್ತಿರುವಾಗ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *