Ad Widget .

ಮಂಗಳೂರು: ಪೂರ್ತಿ ಜಲಸಮಾದಿಯಾದ ಪ್ರಿನ್ಸೆಸ್ ಮಿರಾಲ್

ಸಮಗ್ರ ನ್ಯೂಸ್: ಮಂಗಳೂರಿನ ಉಳ್ಳಾಲ ಬಟ್ಟಪ್ಪಾಡಿ ಬಳಿ ಅರಬ್ಬಿ ಸಮುದ್ರದಲ್ಲಿ ತಳತಾಗಿ ನಿಂತಿದ್ದ ಪ್ರಿನ್ಸೆಸ್‌ ಮಿರಾಲ್‌ ಸರಕಿನ ಹಡಗು ಬಹುತೇಕ ಪೂರ್ತಿಯಾಗಿ ಮುಳುಗಿದೆ.

Ad Widget . Ad Widget .

ಸಮುದ್ರ ತೀರಾ ಪ್ರಕ್ಷುಬ್ಧ ಸ್ಥಿತಿಯಲ್ಲಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಹಡಗಿನ ರಂಧ್ರ ಮುಚ್ಚುವ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ.

Ad Widget . Ad Widget .

ಹಡಗಿನ ಮಾಲಕರು ನಿಯೋಜಿಸಿರುವ ಸ್ಮಿತ್‌ ಸಾಲ್ವೇಜ್‌ ಏಜೆನ್ಸಿಯವರು ಮಂಗಳೂರಿಗೆ ಗುರುವಾರ ಆಗಮಿಸಿದ್ದು ಹಡಗಿನ ಪ್ರಾಥಮಿಕ ತಪಾಸಣೆ ನಡೆಸಿದ್ದಾರೆ. ಜಿಲ್ಲಾಡಳಿತದ ಪರವಾಗಿ ಮಂಗಳೂರು ಸಹಾಯಕ ಆಯುಕ್ತರು ಮತ್ತು ಕೋಸ್ಟ್‌ಗಾರ್ಡ್‌ ಡಿಐಜಿ ಏಜೆನ್ಸಿಯವರೊಂದಿಗೆ ಹಡಗು ಮುಳುಗಿರುವ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹಡಗಿನಿಂದ ತೈಲ ಸೋರಿಕೆಯಾಗದಂತೆ ಅದರ ಸುತ್ತಲೂ ಆಯಿಲ್‌ ಬೂಮ್‌ಗಳನ್ನು ಅಳವಡಿಸಲಾಗಿದೆ. ಹಾಗಾಗಿ ತೈಲ ಸೋರಿಕೆಯ ಭೀತಿ ಇಲ್ಲ. ಆದರೂ ಅದರಲ್ಲಿರುವ ತೈಲ ಹಾಗೂ 8,000 ಟನ್‌ ಸೀrಲ್‌ ಕಾಯಿಲ್‌ಗ‌ಳನ್ನು ತೆರವು ಮಾಡುವ ವಿಧಾನದ ಬಗ್ಗೆ ಸ್ಮಿತ್‌ ಸಾಲ್ವೇಜ್‌ ಏಜೆನ್ಸಿಯವರು ಕಾರ್ಯ ತಂತ್ರ ರೂಪಿಸುವ ಸಾಧ್ಯತೆ ಇದೆ.

ಮಲೇಷ್ಯಾದಿಂದ ಲೆಬನಾನ್‌ಗೆ ಸರಕು ಸಾಗಿಸುತ್ತಿದ್ದ ಈ ನೌಕೆ ಮಂಗಳವಾರ ಸಮುದ್ರ ಮಧ್ಯೆ ಅಪಾಯಕ್ಕೆ ಸಿಲುಕಿತ್ತು.

ಕೋಸ್ಟ್‌ಗಾರ್ಡ್‌ ಸಿಬಂದಿ 15 ಮಂದಿಯನ್ನು ರಕ್ಷಿಸಿದ್ದರು. ಕಳೆದೆರಡು ದಿನಗಳಿಂದ ನಿಧಾನವಾಗಿ ಮುಳುಗುತ್ತಿದ್ದ ನೌಕೆ ಗುರುವಾರ ಪೂರ್ತಿ ಮುಳುಗಿದ್ದು, ಅದರ ಕ್ರೇನ್‌ಗಳು ಮಾತ್ರವೇ ಗೋಚರವಾಗುತ್ತಿವೆ.

Leave a Comment

Your email address will not be published. Required fields are marked *