Ad Widget .

ಮಂಗಳೂರು: ಸಂಘಟನೆಗಳ ಮುತ್ತಿಗೆ ಸಾಧ್ಯತೆ ಹಿನ್ನಲೆ| ರೋಹಿತ್ ಚಕ್ರತೀರ್ಥರ ಸನ್ಮಾನ ಕಾರ್ಯಕ್ರಮ ದಿಢೀರ್ ರದ್ದು

ಸಮಗ್ರ ನ್ಯೂಸ್: ಚಿಂತಕ ಹಾಗೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥರಿಗೆ ಮಂಗಳೂರಿನಲ್ಲಿ ಜೂನ್ 25ರ ಶನಿವಾರದಂದು ಆಯೋಜಿಸಲಾಗಿದ್ದ ‘ನಾಗರಿಕ ಸನ್ಮಾನ’ ಕಾರ್ಯಕ್ರಮ ರದ್ದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾರ್ಯಕ್ರಮದ ಸಂಘಟಕ ನಾಗೇಶ್ ಶೆಣೈ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶಾಂತಿ ಸುವ್ಯವಸ್ಥೆಗೆ ಭಂಗ ಬರುವ ಬಗ್ಗೆ ನಮಗೆ ಮಾಹಿತಿ ಬಂತು. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕೆಲವರು ಪೋಸ್ಟ್ ಹಾಕಿದ್ದರು. ನಮ್ಮ ಕಾರ್ಯಕ್ರಮದಿಂದ ಮಂಗಳೂರಿನ ಶಾಂತಿ-ಸುವ್ಯವಸ್ಥೆಗೆ ಭಂಗ ಬರುವುದು ಬೇಡ ಎಂದು ಕಾರ್ಯಕ್ರಮ ರದ್ದು ಮಾಡಿದ್ದೇವೆ. ನಾವು ಕಾನೂನಿಗೆ ಗೌರವ ಕೊಡುವುದಾಗಿ ತಿಳಿಸಿದರು.

Ad Widget . Ad Widget . Ad Widget .

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಸಂಜೆ ‘ನಾಗರಿಕ ಸನ್ಮಾನ’ ಎಂಬ ಕಾರ್ಯಕ್ರಮವು ನಡೆಯಲಿತ್ತು. ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯರು ವಹಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಮಾನ ಮನಸ್ಕ ಸಂಘಟನೆಗಳು, ಡಿವೈಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ನಾಗರಿಕರ ಸಹಯೋಗದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ನಿರ್ಧರಿಸಿದ್ದವು.

Leave a Comment

Your email address will not be published. Required fields are marked *