ಚಾಲಕನ ಅಜಾಗರೂಕತೆಯಿಂದ ಕಾಲು ಮುರಿತಕ್ಕೊಳಗಾದ ಬಸ್ ಕಂಡಕ್ಟರ್

ಸಮಗ್ರ ನ್ಯೂಸ್: ಕೆಎಸ್ ಆರ್ ಟಿಸಿ ಬಸ್ ಚಾಲಕ ರಸ್ತೆ ಹಂಪ್‌ ನಲ್ಲಿ ಅಜಾಗರೂಕತೆಯಿಂದ ಚಲಾಯಿಸದ ಕಾರಣ ನಿರ್ವಾಹಕನ ಕಾಲು ಮುರಿದ ಘಟನೆ ಕುಣಿಗಲ್ ತಾಲೂಕಿನ ಹಳೇಯ ರಾಷ್ಟ್ರೀಯ ಹೆದ್ದಾರಿ 48 ಗೊಟ್ಟಿಕೆರೆ ಸಮೀಪ ಶುಕ್ರವಾರ ನಡೆದಿದೆ.

Ad Widget ... ..

ಕೋಲಾರ ವಿಭಾಗದ ಬಸ್ ನಿರ್ವಾಹಕ ಸಂಗಪ್ಪ ಹಕ್ಕಿ (45) ಕಾಲು ಮುರಿದುಕೊಂಡ ನಿರ್ವಾಹಕ. ಶುಕ್ರವಾರ ಧರ್ಮಸ್ಥಳದಿಂದ ಹೊರಟ ಬಸ್ ಕುಣಿಗಲ್ ಮಾರ್ಗವಾಗಿ ಕೊಲಾರಕ್ಕೆ ತೆರಳುತ್ತಿತ್ತು.

Ad Widget

ಈ ವೇಳೆ ತಾಲೂಕಿನ ಗೊಟ್ಟಿಕೆರೆ ಬಳಿ ಚಾಲಕ ಮಹತೇಶ್ ಏಕಾಏಕಿ ಹಂಪ್‌ ಹಾರಿಸಿದ ಕಾರಣ ಬಸ್ ನಲ್ಲಿ‌ ನಿಂತಿದ್ದ ಸಂಗಪ್ಪನ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ನಿರ್ವಾಹಕ ಸಂಗಪ್ಪನಿಗೆ ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

Leave a Comment

Your email address will not be published. Required fields are marked *